Rohit Sharma: ಫೋಟೋ ಶೂಟ್​ನಲ್ಲಿ ರೋಹಿತ್ ಶರ್ಮಾ- ಬಾಬರ್ ಅಜಮ್ ಸಖತ್ ಎಂಜಾಯ್: ವೈರಲ್ ಫೋಟೋ ನೋಡಿ

Edited By:

Updated on: Oct 15, 2022 | 10:43 AM

Babar Azam: ಪಾಕಿಸ್ತಾನ ತಂಡ ಭಾರತ ವಿರುದ್ಧ ಕಣಕ್ಕಿಳಿಯುವ ಮುನ್ನ ಎರಡು ಅಭ್ಯಾಸ ಪಂದ್ಯವನ್ನು ಆಡಲಿದ. ಅ. 17 ರಂದು ಇಂಗ್ಲೆಂಡ್ ವಿರುದ್ಧ ಮತ್ತು ಅಕ್ಟೋಬರ್ 19 ರಂದು ಅಫ್ಘಾನಿಸ್ತಾನ ವಿರುದ್ಧ ವಾರ್ಮ್-ಅಪ್ ಮ್ಯಾಚ್​ನಲ್ಲಿ ಕಣಕ್ಕಿಳಿಯಲಿದೆ.

1 / 8
ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಅ. 16 ರಂದು ಈ ಚುಟುಕು ಮಹಾಸಮರಕ್ಕೆ ಚಾಲನೆ ಸಿಗಲಿದ್ದು ಎಲ್ಲ ತಂಡದ ಆಟಗಾರರು ಭರ್ಜರಿ ಸಿದ್ಧತೆಯಲ್ಲಿ ನಿರತರಾಗಿದ್ದಾರೆ.

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಅ. 16 ರಂದು ಈ ಚುಟುಕು ಮಹಾಸಮರಕ್ಕೆ ಚಾಲನೆ ಸಿಗಲಿದ್ದು ಎಲ್ಲ ತಂಡದ ಆಟಗಾರರು ಭರ್ಜರಿ ಸಿದ್ಧತೆಯಲ್ಲಿ ನಿರತರಾಗಿದ್ದಾರೆ.

2 / 8

ಟೂರ್ನಿ ಆರಂಭಕ್ಕೂ ಮುನ್ನ ಎಲ್ಲ 15 ತಂಡದ ನಾಯಕರು ಒಟ್ಟಾಗಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಮೆಲ್ಬೋರ್ನ್​ನ ಪ್ಲಾಜಬಾಲ್​ ರೂಮ್​ನಲ್ಲಿ ತಮ್ಮ ತಂಡದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಾಯಕರು ಉತ್ತರ ನೀಡಿದ್ದಾರೆ. ಇದರ ನಡುವೆ ಪತ್ರಿಕಾಗೋಷ್ಠಿ ಮಧ್ಯ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar Azam) ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.

3 / 8

ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ ಯಾರಿಗೂ ತಿಳಿಯದಂತೆ ಕೇಕ್ ತಂದು ಬಾಬರ್​ಗೆ ನೀಡಿ ವಿಶೇಷವಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಸೆಲೆಬ್ರೇಷನ್​​ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಕೂಡ ಪಾಲ್ಗೊಂಡಿದ್ದರು.

4 / 8

ಪಾಕಿಸ್ತಾನ ನಾಯಕ ಬಾಬರ್ ಅಜಮ್ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸುತ್ತಿರುವುದು.

5 / 8

ರೋಹಿತ್ ಹಾಗೂ ಬಾಬರ್ ಅಜಮ್ ಅವರ ಫೋಟೋ ಶೂಟ್ ಕೂಡ ನಡೆಸಲಾಗಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

6 / 8

ಟೀಮ್ ಇಂಡಿಯಾ ಅ. 23 ರಂದು ಮೆಲ್ಬೋರ್ನ್‌ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

7 / 8

ಪಾಕಿಸ್ತಾನ ತಂಡ ಭಾರತ ವಿರುದ್ಧ ಕಣಕ್ಕಿಳಿಯುವ ಮುನ್ನ ಎರಡು ಅಭ್ಯಾಸ ಪಂದ್ಯವನ್ನು ಆಡಲಿದ. ಅ. 17 ರಂದು ಇಂಗ್ಲೆಂಡ್ ವಿರುದ್ಧ ಮತ್ತು ಅಕ್ಟೋಬರ್ 19 ರಂದು ಅಫ್ಘಾನಿಸ್ತಾನ ವಿರುದ್ಧ ವಾರ್ಮ್-ಅಪ್ ಮ್ಯಾಚ್​ನಲ್ಲಿ ಕಣಕ್ಕಿಳಿಯಲಿದೆ.

8 / 8

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ 6 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ ಎಂದು ಸಂಘಟಕರು ಹೇಳಿಕೊಂಡಿದ್ದಾರೆ. ಅಲ್ಲದೆ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಭಾರೀ ಬೇಡಿಕೆ ಇದೆ ಎಂದು ತಿಳಿಸಿದ್ದಾರೆ.

Published On - 10:43 am, Sat, 15 October 22

Loading...
Unable to load recommendations.
Follow Us