ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ಅಡಕೆ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕಡಿದು ಹಾಕಿದ್ದಾರೆ.
ಈ ಹಿಂದೆ ಹುಲಿ ಅಭಯಾರಣ್ಯ ವ್ಯಾಪ್ತಿಯಲ್ಲಿ ವಾಸವಿದ್ದು ಕುಟುಂಬಗಳಿಗೆ ಪರಿಹಾರ ನೀಡಿ ಅಲ್ಲಿಂದ ಬೇರೆಡೆ ಸ್ಥಳಾಂತರ ಮಾಡಲಾಗಿದೆ.
ಅಲ್ಲಿ ವಾಸವಿದ್ದ ಕುಟುಂಬಗಳು ಆ ಜಾಗದಲ್ಲಿ ಅಡಿಕೆ, ತೆಂಗು, ಬಾಳೆ ಬೆಳೆದಿದ್ದರು. ಕುಟುಂಬಗಳ ಸ್ಥಳಾಂತರವಾದ ಮೇಲೆ ತೋಟವನ್ನು ನಾಶ ಪಡಿಸಲಾಗಿದೆ.
ಬೇರೆಡೆ ಸ್ಥಳಾಂತರಗೊಂಡ ದಾಮೋದರ ಗೌಡ, ವೆಂಕಣ್ಣ ಗೌಡ ಎಂಬುವವರಿಗೆ ತೋಟ ಸೇರಿದೆ ಎನ್ನಲಾಗುತ್ತಿದೆ.
ಸದ್ಯ ಅಡಿಕೆ ಮರಗಳ ಮಾರಣಹೋಮಕ್ಕೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.