Updated on: Sep 27, 2022 | 7:10 AM
ಹೊಸ ಕಾರು ಖರೀದಿಸಲು ಬಯಸುವವರು ನವರಾತ್ರಿ ಅಥವಾ ದೀಪಾವಳಿ ಹಬ್ಬದ ಬರುವಿಕೆಗಾಗಿ ಕಾಯುತ್ತಾರೆ. ಈ ದಿನಗಳು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಹೆಚ್ಚಾಗಿ ಹೊಸ ಕಾರುಗಳನ್ನು ಖರೀದಿಸುವುದರಿಂದ ಹೆಚ್ಚಿನ ಬೇಡಿಕೆ ಇರುತ್ತದೆ. ನೀವು ಕೂಡ ಈ ಹಬ್ಬದ ಸೀಸನ್‌ನಲ್ಲಿ ಹೊಸ ಕಾರು ಖರೀದಿಸಲು ಯೋಜಿಸುತ್ತಿದ್ದರೆ ಈ ಲೇಖನದ ಮೂಲಕ ನಾವು ಕಡಿಮೆ ಬಜೆಟ್ ವಾಹನಗಳ ಮೇಲೆ ಲಭ್ಯವಿರುವ ಬಂಪರ್ ರಿಯಾಯಿತಿಗಳನ್ನು ನಿಮಗೆ ತಿಳಿಸುತ್ತೇವೆ.
Maruti Suzuki Alto 800: ಪ್ರಸ್ತುತ ಕಂಪನಿಯು ಹೊಸ ಪೀಳಿಗೆಯ Alto K 10 ಮಾದರಿಯಲ್ಲಿ ಯಾವುದೇ ರಿಯಾಯಿತಿಯನ್ನು ನೀಡುತ್ತಿಲ್ಲ, ಆದರೆ ನೀವು Alto 800 ಅನ್ನು ಖರೀದಿಸಿದರೆ ನೀವು 29,000 ರೂ. ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಬೇಸ್ ಮಾಡೆಲ್‌ನಲ್ಲಿ 14,000 ರೂಪಾಯಿಗಳ ರಿಯಾಯಿತಿ ಮತ್ತು ಟಾಪ್ ವೇರಿಯಂಟ್‌ನಲ್ಲಿ 29,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು.
Festive season Bumper discount on these vehicles