ಹಿಂದೂ ವಿವಾಹ ಪದ್ದತಿಯಲ್ಲಿ ವಧುವಿಗೆ ಕಾಲುಂಗುರ ಏಕೆ ತೊಡಿಸುತ್ತಾರೆ? ಇದರ ಹಿಂದಿದೆ ಆರೋಗ್ಯ ಪ್ರಯೋಜನ
ವಧುವಿನ ಕಾಲಿಗೆ ಕಾಲುಂಗುರವನ್ನು ತೊಡಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದರ ಹಿಂದೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂದರೆ ನಂಬುತ್ತೀರಾ? ಹೌದು. ಇದು ನಿಜ. ಹಾಗಾದರೆ ಕಾಲಿಗೆ ಉಂಗುರ ತೊಡಿಸುವುದು ಏಕೆ? ಕಾಲಿನ ಎರಡನೇ ಬೆರಳಿಗೆ ಏಕೆ ಈ ಉಂಗುರ ತೊಡಿಸಬೇಕು? ಇಲ್ಲಿದೆ ಮಾಹಿತಿ.
1 / 6
ಮದುವೆಯ ದಿನ ವರ ತನ್ನ ವಧುವಿನ ಕಾಲಿಗೆ ಕಾಲುಂಗುರವನ್ನು ತೊಡಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದರ ಹಿಂದೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂದರೆ ನಂಬುತ್ತೀರಾ? ಹೌದು. ಇದು ನಿಜ. ಹಾಗಾದರೆ ಕಾಲಿಗೆ ಉಂಗುರ ತೊಡಿಸುವುದು ಏಕೆ? ಕಾಲಿನ ಎರಡನೇ ಬೆರಳಿಗೆ ಏಕೆ ಈ ಉಂಗುರ ತೊಡಿಸಬೇಕು? ಇಲ್ಲಿದೆ ಮಾಹಿತಿ.
2 / 6
ವಿವಾಹಿತ ಮಹಿಳೆಯರು ಕಾಲುಂಗುರವನ್ನು ಧರಿಸುವುದರ ಹಿಂದೆ ವಿಶಿಷ್ಟ ವಿಜ್ಞಾನವಿದೆ. ಇದು ಕೆಲವರಿಗೆ ಉತ್ಪ್ರೇಕ್ಷೆ ಎನಿಸಬಹುದು. ಹಲವಾರು ಜನ ಈ ನಂಬಿಕೆಯನ್ನು ನಂಬದಿರಬಹುದು. ಆದರೆ ಇದರಿಂದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
3 / 6
ಸಾಮಾನ್ಯವಾಗಿ ಕಾಲುಂಗುರವನ್ನು ಎರಡನೇ ಬೆರಳಿಗೆ ಹಾಕಿಕೊಳ್ಳಲಾಗುತ್ತದೆ. ಏಕೆಂದರೆ ಎರಡನೇ ಬೆರಳಿನಿಂದ ಒಂದು ನಿರ್ಧಿಷ್ಟ ನರವು ಗರ್ಭಾಶಯವನ್ನು ಸಂಪರ್ಕಿಸುತ್ತದೆ ಮತ್ತು ಹೃದಯದ ಮೂಲಕ ಹಾದು ಹೋಗುತ್ತದೆ.
4 / 6
ಅಲ್ಲದೆ ಇದು ಗರ್ಭಾಶಯಕ್ಕೆ ರಕ್ತದ ಹರಿವನ್ನು ನಿಯಂತ್ರಿಸುವ ಮೂಲಕ ಅದನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಋತುಚಕ್ರವನ್ನು ಕ್ರಮಬದ್ಧಗೊಳಿಸುತ್ತದೆ.
5 / 6
ಎರಡನೇ ಬೆರಳಿಗೆ ಕಾಲುಂಗುರವನ್ನು ಧರಿಸುವುದರಿಂದ ಗರ್ಭಾಶಯ ಬಲಗೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದು ಮಹಿಳೆಗೆ ತಾಯಿಯಾಗುವಾಗ ಸಮಯದಲ್ಲಿ ಸಹಕಾರಿಯಾಗುತ್ತದೆ.
6 / 6
ಇದಲ್ಲದೆ ಬೆಳ್ಳಿ ಉತ್ತಮ ವಾಹಕವಾಗಿರುವುದರಿಂದ ಅದು ಭೂಮಿಯಿಂದ ಸೌರ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಮತ್ತು ದೇಹಕ್ಕೆ ರವಾನಿಸುತ್ತದೆ. ಹಾಗಾಗಿ ಮದುವೆಯಾದ ಮಹಿಳೆ ಕಾಲಿಗೆ ಉಂಗುರ ಧರಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.