- Kannada News Photo gallery Namma Metro: 8 Lakh passengers travelled in Namma Metro in a single day Bengaluru News in Kannada
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಒಂದೇ ದಿನ 8 ಲಕ್ಷ ಜನ ಸಂಚಾರ! ದಾಖಲೆ
ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಮೆಟ್ರೋ ಅನುಕೂಲಕಾರಿಯಾಗಿದೆ. ನಮ್ಮ ಮೆಟ್ರೋದಲ್ಲಿ ಪ್ರತಿದಿನ ಲಕ್ಷಾಂತರ ಜನರು ಸಂಚರಿಸುತ್ತಿದ್ದಾರೆ. ನಮ್ಮ ಮೆಟ್ರೋದಲ್ಲಿ ಇಲ್ಲಿಯವರೆಗೆ ಒಂದು ದಿನಕ್ಕೆ 6 ರಿಂದ 7 ಲಕ್ಷ ಜನರು ಸಂಚರಿಸುತ್ತಿದ್ದರು. ಆದರೆ ಹೊಸದೊಂದು ದಾಖಲೆ ನಿರ್ಮಾಣವಾಗಿದೆ.
Updated on: Aug 02, 2024 | 1:20 PM

ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಂಡು ಬೆಂಗಳೂರು ನಗರದಲ್ಲಿ ವೇಗವಾಗಿ ಮತ್ತು ಸುರಕ್ಷಿತವಾಗಿ ಸಂಚರಿಸಲು ನಮ್ಮ ಮೆಟ್ರೋ ತುಂಬಾ ಅನುಕೂಲಕಾರಿಯಾಗಿದೆ. ಬೆಂಗಳೂರು ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಮೆಟ್ರೋ ಅನುಕೂಲಕಾರಿಯಾಗಿದ್ದು, ನಗರದ ನಾಲ್ಕೂ ದಿಕ್ಕುನಲ್ಲೂ ಮೆಟ್ರೋ ಓಡುವಂತೆ ಮಾರ್ಗ ವಿಸ್ತರಣೆ ಮಾಡಲಾಗುತ್ತಿದೆ.

ನಮ್ಮ ಮೆಟ್ರೋದಲ್ಲಿ ಪ್ರತಿದಿನ ಲಕ್ಷಾಂತರ ಜನರು ಸಂಚರಿಸುತ್ತಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ತಾವು ತಲುಪಬೇಕಾದ ಸ್ಥಳಗಳಿಗೆ ಮುಟ್ಟುತ್ತಾರೆ. ಆಫಿಸ್, ಶಾಲೆ ಮತ್ತು ಕಾಲೇಜುಗಳಿಗೆ ತೆರಳುವವರು ಹೆಚ್ಚಾಗಿ ನಮ್ಮ ಮೆಟ್ರೋ ಅನ್ನೇ ಅವಲಂಬಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ಇಲ್ಲಿಯವರೆಗೆ ಒಂದು ದಿನಕ್ಕೆ 6 ರಿಂದ 7 ಲಕ್ಷ ಜನರು ಸಂಚರಿಸುತ್ತಿದ್ದರು. ಆದರೆ ಹೊಸದೊಂದು ದಾಖಲೆ ನಿರ್ಮಾಣವಾಗಿದೆ.

ನಮ್ಮ ಮೆಟ್ರೋದಲ್ಲಿ ಜನರ ಸುಲಭ ಸಂಚಾರಕ್ಕಾಗಿ ಬಿಎಂಆರ್ಸಿಎಲ್ ಹಲವು ವಿಶೇಷ ವ್ಯವಸ್ಥೆಗಳನ್ನು ಜಾರಿಗೆ ತರುತ್ತಿದೆ. ಇದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಬಿಎಂಆರ್ಸಿಎಲ್ಗೂ ಆದಾಯ ಹೆಚ್ಚಿದೆ. ನಮ್ಮ ಮೆಟ್ರೋದಲ್ಲಿ ಒಂದೇ ದಿನ 8 ಲಕ್ಷ ಜನರು ಪ್ರಯಾಣಿಸಿದ್ದಾರೆ.

ಜೂನ್ ತಿಂಗಳಲ್ಲಿ 2.23 ಕೋಟಿ ಮಂದಿ ಪ್ರಯಾಣ ಮಾಡಿದ್ದಾರೆ. ಆದರೆ ಜೂನ್ 19ರಂದು ಒಂದೇ ದಿನ 8.08 ಲಕ್ಷ ಜನರು ಪ್ರಯಾಣಿಸಿದ್ದಾರೆ. ಇದರಿಂದ ಜೂನ್ ತಿಂಗಳಲ್ಲಿ ಬಿಎಂಆರ್ಸಿಎಲ್ಗೆ 58.23 ಕೋಟಿ ರೂ. ಆದಾಯ ಹರಿದು ಬಂದಿದೆ.

ಶೇಕಡಾ 50.06ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಬಳಸುತ್ತಿದ್ದಾರೆ. ಶೇಕಡಾ 30.45 ರಷ್ಟು ಪ್ರಯಾಣಿಕರು ಟೋಕನ್ (ಫೈಬರ್ನ ನಾಣ್ಯ ಆಕಾರದ ಟಿಕೆಟ್) ಉಪಯೋಗಿಸುತ್ತಾರೆ. ಶೇಕಡಾ 19.49ರಷ್ಟು ಮಂದಿ ಮೊಬೈಲ್ನಲ್ಲಿ ಕ್ಯೂಆರ್ ಕೋಡ್ ಟಿಕೆಟ್ ಕೊಂಡು ಸಂಚರಿಸುತ್ತಿದ್ದಾರೆ.

ನೇರಳೆ ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ನಮ್ಮ ಮೆಟ್ರೋ ರೈಲುಗಳು ರಶ್ ಆಗಿರುತ್ತವೆ. ದಟ್ಟಣೆಯ ಅವಧಿಯಲ್ಲಿ ಮೆಜೆಸ್ಟಿಕ್ನಿಂದ ಹೆಚ್ಚುವರಿ ರೈಲು ಪ್ರಯಾಣಿಸಿದರೂ ಸಾಕಾಗುತ್ತಿಲ್ಲ. ಇನ್ನೂ ಹೆಚ್ಚಿನ ರೈಲು ಬಿಡಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.



















