Updated on: Aug 02, 2024 | 1:04 PM
ಕರ್ಣಕುಂಡಲ ಹೆಸರಿನ ಈ ಸಸ್ಯ ಗುಲಾಬಿ, ಕೆಂಪು, ನೇರಳೆ ಮತ್ತು ಬಿಳಿ ಬಣ್ಣಗಳ ಹೂ ಬಿಡುತ್ತದೆ. ಬಿತ್ತನೆಯಿಂದ ಸುಮಾರು 60 ದಿನಗಳಲ್ಲಿ ಹೂಬಿಡುವಿಕೆ ಪ್ರಾರಂಭವಾಗುತ್ತದೆ ಹಾಗು 15-20 ದಿನಗಳವರೆಗೆ ಅರಳುತ್ತಲೇ ಇರುತ್ತದೆ.
ಕಿತ್ತಳೆ, ಹಳದಿಯಿಂದ ಕೆಂಪು ಬಣ್ಣಗಳ ಚೆಂಡು ಹೂವುಗಳು ಭಾರತೀಯ ಉದ್ಯಾನಗಳ ಹೆಮ್ಮೆಯಾಗಿದೆ. ಹಿಂದೂ ಪೂಜೆ ಮತ್ತು ಆಚರಣೆಗಳಲ್ಲಿ ಈ ಹೂವು ಅತ್ಯಂತ ಉಪಯುಕ್ತ. ಬಿತ್ತನೆಯಿಂದ 2 ತಿಂಗಳ ನಂತರ 3-4 ತಿಂಗಳುಗಳವರೆಗೆ ಹೂಬಿಡುತ್ತಲೇ ಇರುತ್ತದೆ.
ಬಿಳಿಯ ಬಣ್ಣದ ಈ ಏಳು ಸುತ್ತಿನ ಮಲ್ಲಿಗೆ ಹೂವು ಗಾಢ ಹಸಿರು ಎಲೆಗಳ ಮಧ್ಯೆ ಅತ್ಯಂತ ಆಕರ್ಷಕವಾಗಿ ಕಾಣುತ್ತದೆ. ಸಾಮಾನ್ಯವಾಗಿ ವಸಂತಕಾಲದ ಮಧ್ಯದಿಂದ ಬೇಸಿಗೆಯವರೆಗೆ ಹೂಬಿಡುತ್ತದೆ, ಆದರೆ ಕೆಲವು ತಳಿಗಳು ಮಳೆಗಾಲದವರೆಗೂ ಹೂಬಿಡುತ್ತಲೇ ಇರುತ್ತವೆ.
ಉಷ್ಣವಲಯದ ಪ್ರದೇಶಕ್ಕೆ ಸ್ಥಳೀಯವಾಗಿರುವ ದಾಸವಾಳವು 5 ದಳಗಳನ್ನು ಒಳಗೊಂಡಿರುವ ಕೊಳವೆ ಆಕಾರದ ಹೂವು. ಹೂವಿನ ದಳವು ಬಿಳಿ, ಹಳದಿ, ಗುಲಾಬಿ, ಕೆಂಪು, ಕಿತ್ತಳೆ, ಪೀಚ್ ಮತ್ತು ನೇರಳೆ ಬಣ್ಣಗಳಲ್ಲಿರುತ್ತದೆ. ಹೂವುಗಳು ಬೇಸಿಗೆಯ ಮಧ್ಯದಿಂದ ಮಳೆಗಾಲದ ಆರಂಭದವರೆಗೆ ಹೂಬಿಡುತ್ತಲೇ ಇರುತ್ತದೆ.
ಕಮಲಕ್ಕೆ ಯಾವುದೇ ಪರಿಚಯದ ಅಗತ್ಯವಿಲ್ಲ! ಅಷ್ಟು ಚಿರಪರಿಚಿತ. ಈ ಹೂವು ಲಕ್ಷ್ಮೀ ಮತ್ತು ವಿಷ್ಣು ದೇವರುಗಳ ಪೂಜೆಗೆ ಅತ್ಯಂತ ಶ್ರೇಷ್ಠವಾದದ್ದು. ಇದರ ಹೂಬಿಡುವಿಕೆಯು ಜೂನ್ ನಿಂದ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ ವರೆಗೆ ಮುಂದುವರಿಯುತ್ತದೆ.
ಪ್ಲುಮೇರಿಯಾ ಹೆಸರಿನ ಈ ಹೂವನ್ನು ದೇವಗಣಿಗಲು (ಗೋ ಸಂಪಿಗೆ) ಎಂಥಲೂ ಕರೆಯಲಾಗುತ್ತದೆ. ಮಧ್ಯದಲ್ಲಿ ಹಳದಿ ಬಣ್ಣಗಳನ್ನು ಹೊಂದಿರುವ ಬಿಳಿಯ ಕೆನೆ ರೀತಿಯ ಈ ಹೂವು, ಸಿಹಿ ಸುವಾಸನೆಯನ್ನು ಹೊಂದಿದೆ. ಬೇಸಿಗೆಕಾಲ ಮಳೆಗಾಲ ಮತ್ತು ಶರತ್ಕಾಲದಲ್ಲೂ ಹೂಬಿಡುತ್ತಲೇ ಇರುತ್ತದೆ.