- Kannada News Photo gallery Sapthami Gowda New Photoshoot In Bangalore Road Entertainment News In Kannada
Sapthami Gowda: ಬೆಂಗಳೂರಿನ ಬೀದಿಗಳಲ್ಲಿ ಫೋಟೋಶೂಟ್ ಮಾಡಿಸಿದ ಸಪ್ತಮಿ ಗೌಡ
‘ಕಾಂತಾರ’, ‘ಯುವ’ ಮೊದಲಾದ ಸಿನಿಮಾಗಳಲ್ಲಿ ಸಪ್ತಮಿ ಗೌಡ ನಟಿಸಿದ್ದಾರೆ. ಈ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತು. ಆ ಬಳಿಕ ಅವರಿಗೆ ಬಾಲಿವುಡ್ನಿಂದಲೂ ಆಫರ್ಗಳು ಬಂದಿವೆ. ಅವರು ಈಗ ಬೆಂಗಳೂರು ಬೀದಿಗಳಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
Updated on: Aug 02, 2024 | 11:36 AM

ಬೆಂಗಳೂರಿನ ಬೀದಿಗಳಲ್ಲಿ ಫೋಟೋಶೂಟ್ ಮಾಡಿಸೋ ಟ್ರೆಂಡ್ ಇತ್ತೀಚೆಗೆ ಜೋರಾಗಿದೆ. ಅನೇಕ ನಟಿಯರು ಎಂಜಿ ರೋಡ್, ಚರ್ಚ್ಸ್ಟ್ರೀಟ್ಗಳಲ್ಲಿ ಫೋಟೋ ಶೂಟ್ ಮಾಡಿಸುತ್ತಾರೆ. ಈಗ ಸಪ್ತಮಿ ಗೌಡ ಕೂಡ ಫೋಟೋಶೂಟ್ ಮಾಡಿಸಿದ್ದಾರೆ.

ಬೆಂಗಳೂರಿನ ಬೀದಿಗಳಲ್ಲಿ ಸಪ್ತಮಿ ಗೌಡ ಅವರು ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಸಪ್ತಮಿ ‘ಕಾಂತಾರ’ ಚಿತ್ರದಲ್ಲಿ ನಾಯಕಿ ಆಗಿ ನಟಿಸಿದರು. ಈ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತು. ಆ ಬಳಿಕ ಅವರಿಗೆ ಬಾಲಿವುಡ್ನಿಂದಲೂ ಆಫರ್ಗಳು ಬಂದಿವೆ.

ಸಪ್ತಮಿ ಗೌಡ ನಟನೆಯ ‘ಯುವ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ನಾಯಕಿ ಆಗಿ ಅವರು ನಟಿಸಿದ್ದರು. ಈ ಚಿತ್ರದಿಂದ ಅವರ ಖ್ಯಾತಿ ಹೆಚ್ಚಾಗಿದೆ.

ಸಪ್ತಮಿ ಗೌಡ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಜನಪ್ರಿಯತೆ ಸಿಕ್ಕಿದೆ. ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 7.56 ಲಕ್ಷ ಹಿಂಬಾಲಕರು ಫಾಲೋ ಮಾಡುತ್ತಿದ್ದಾರೆ.



















