ಎಲ್ಲೆಡೆ ಪ್ರವಾಹ: ಇಲ್ಲಿ ಮಳೆಯೇ ಇಲ್ಲದೇ ಬೆಳೆ ಉಳಸಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋದ ರೈತರು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 09, 2024 | 9:08 PM

ಕೊಪ್ಪಳ ಜಿಲ್ಲೆಯಲ್ಲಿ ಮಳೆಯ ಕೊರತೆ ತೀರ್ವವಾಗಿ ಕಾಡುತ್ತಿದೆ. ಹೀಗಾಗಿ ಜಿಲ್ಲೆಯ ಬಹುತೇಕ ರೈತರು ತಮ್ಮ ಬೆಳೆಗಳನ್ನು ಉಳಸಿಕೊಳ್ಳಲು ಇದೀಗ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತಿದ ಬೆಳೆಯನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.

1 / 6
ಕೊಪ್ಪಳದಲ್ಲಿ ಕಳೆದ ವರ್ಷ ಬೇಸಿಗೆಯಲ್ಲಿ ಬೆಳೆ ಉಳಸಿಕೊಳ್ಳಲು ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದರು. ಆದರೆ ಮಳೆಗಾಲದಲ್ಲಿ ಈ ಬಾರಿ ನೀರಿನ ಸಮಸ್ಯೆಯಾಗುವುದಿಲ್ಲ ಉತ್ತಮ ಮಳೆ ಬರುತ್ತೆ ಅಂತ ಅಂದುಕೊಂಡಿದ್ದ ರೈತರಿಗೆ ಶಾಕ್ ಆಗಿದೆ. ಮಳೆಗಾದಲ್ಲಿ ಕೂಡ ರೈತರು ತಮ್ಮ ಬೆಳೆ ಉಳಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಳೆ ಕೊರತೆಯಿಂದ ಒಂದಡೆ ಬೆಳೆ ಒಣಗುತ್ತಿದ್ದರೆ, ರೈತರು ಬೆಳೆ ಉಳಸಿಕೊಳ್ಳಲು ಪರದಾಡುತ್ತಿದ್ದಾರೆ.

2 / 6
ಹೌದು ರಾಜ್ಯದ ಮಲೆನಾಡು, ಕರಾವಳಿ, ಕಿತ್ತೂರು ಕರ್ನಾಟಕ ಭಾಗದ ಅನೇಕ ಜಿಲ್ಲೆಗಳಲ್ಲಿ ವರುಣದೇವ ಕಳೆದ ಕೆಲ ದಿನಗಳಿಂದ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ನಿರಂತರ ಮಳೆಯಿಂದ ಅನೇಕ ಅನಾಹುತಗಳು ನಡೆಯುತ್ತಿವೆ. ಯಾವಾಗ ಮಳೆ ನಿಲ್ಲುತ್ತೋ ಅಂತ ಅನೇಕ ಜಿಲ್ಲೆಯ ಜನರು ಕಾಯುತ್ತಿದ್ದಾರೆ. ಆದರೆ ನಮ್ಮದೇ ರಾಜ್ಯದ ಕೊಪ್ಪಳ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಾಡುತ್ತಿದ್ದು, ರೈತರು ಉತ್ತಮ ಮಳೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

3 / 6
ಕೊಪ್ಪಳ ಜಿಲ್ಲೆಯಲ್ಲಿ ಮಳೆಯ ಕೊರತೆ ಹೆಚ್ಚಾಗಿದ್ದು, ಮಳೆಯನ್ನೇ ನಂಬಿ ಕೃಷಿ ಮಾಡುತ್ತಿರುವ ರೈತರ ಆತಂಕ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ 62 ಮಿಲಿ ಮೀಟರನಷ್ಟು ವಾಡಿಕೆಯ ಮಳೆಯಾಗಬೇಕಿತ್ತು. ಆದರೆ ಜಿಲ್ಲೆಯಲ್ಲಿ ಆಗಿದ್ದು ಕೇವಲ 46 ಮಿಲಿ ಮೀಟರ ಮಾತ್ರ. ಅಂದ್ರೆ ಶೇಕಡಾ 25 ರಷ್ಟು ಮಳೆ ಕೊರತೆಯಾಗಿದೆ.

4 / 6
ಆಗಸ್ಟ್ ಮೊದಲ ವಾರದಲ್ಲೂ ಕೂಡ ನಿರೀಕ್ಷಿತ ಮಳೆಯಾಗಿಲ್ಲ. ಅದರಲ್ಲೂ ಜಿಲ್ಲೆಯ ಕುಕನೂರು, ಕಾರಟಗಿ, ಗಂಗಾವತಿ, ಕೊಪ್ಪಳ ತಾಲೂಕಿನಲ್ಲಿ ಸರಿಸುಮಾರು ಶೇಕಡಾ ಐವತ್ತಕ್ಕೂ ಹೆಚ್ಚು ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ಆಗಿರುವ 46 ಮಿಲಿ ಮೀಟರ ಮಳೆ ಪೈಕಿ ಹೆಚ್ಚಿನ ಮಳೆಯಾಗಿದ್ದು ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನಲ್ಲಿ ಮಾತ್ರ. ಉಳಿದ ತಾಲೂಕಿನಲ್ಲಿ ತೀರ್ವ ಮಳೆ ಕೊರತೆಯಾಗಿದೆ.

5 / 6
ಜೂನ್ ನಲ್ಲಿ ಬಿದ್ದಿದ್ದ ಉತ್ತಮ ಮಳೆಯಿಂದ ರೈತರು ಸಂತಸಗೊಂಡು ಸಾವಿರಾರು ರೂಪಾಯಿ ಖರ್ಚು ಮಾಡಿ ಮೆಕ್ಕಜೋಳ ಸೇರಿದಂತೆ ಅನೇಕ ಬೆಳೆಗಳನ್ನು ಬೆಳದಿದ್ದರು. ಆದರೆ ಜುಲೈ ತಿಂಗಳಲ್ಲಿ ತೀರ್ವ ಮಳೆ ಕೊರತೆಯಾಗಿದ್ದರಿಂದ ಬೆಳೆಗಳು ಒಣಗುತ್ತಿವೆ. ಕೊಪ್ಪಳ ತಾಲೂಕಿನ ಬೆಟಗೇರಿ ಸೇರಿದಂತೆ ಅನೇಕ ಕಡೆ ರೈತರು ತಮ್ಮ ಬೆಳೆಗಳನ್ನು ಉಳಸಿಕೊಳ್ಳಲು ಇದೀಗ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.

6 / 6
ಮಳೆ ಆಶ್ರಿತ ಬೆಳೆಯಾಗಿ ಜಿಲ್ಲೆಯ ಬಹುತೇಕ ರೈತರು ಮೆಕ್ಕಜೋಳ, ಹೆಸರು, ತೊಗರಿ ಸೇರಿದಂತೆ ಅನೇಕ ಬೆಳೆಗಳನ್ನು ಬೆಳದಿದ್ದಾರೆ. ಸದ್ಯ ಬಿಸಿಲು ಕಡಿಮೆ ಇರೋದರಿಂದ ಮತ್ತು ಆಗಾಗ ಆಗುತ್ತಿರುವ ತುಂತುರ ಮಳೆಗೆ ಬೆಳೆಗಳು ಜೀವವನ್ನು ಹಿಡಿದುಕೊಂಡಿವೆ. ಆದರೆ ಸರಿಯಾಗಿ ಮಳೆಯಾಗದೇ ಇದ್ರೆ ತೇವಾಂಶ ಕಡಿಮೆಯಾಗಿ, ಇಳುವರಿ ಬರೋದಿಲ್ಲಾ ಅಂತಿದ್ದಾರೆ ರೈತರು.