
ಒಂದು ಬಾಟಲಿ ಅಥವಾ ಲೋಟದಲ್ಲಿ ನೀರು ತುಂಬಿಸಿ ಅದನ್ನು ಮಲಗುವಾಗ ನಿಮ್ಮ ತಲೆಯ ಸಮೀಪದಲ್ಲಿ ಇಡಿ. ಹಾಗೂ ಆ ನೀರನ್ನು ಬೆಳಗ್ಗೆ ಏದ್ದು ಹೊರಗೆ ಎಸೆಯಿರಿ. ಇದರಿಂದ ನಿಮ್ಮ ಕೆಟ್ಟ ಕನಸುಗಳು, ಕೆಟ್ಟ ಯೋಚನೆ, ಬದುಕಿನ ತೊಂದರೆಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ.

ದಿನನಿತ್ಯವೂ ಸ್ನಾನ ಮಾಡುವ ವೇಳೆಗೆ ಸ್ನಾನ ಮಾಡಲು ಬಳಸುವ ನೀರಿಗೆ ಸ್ವಲ್ಪವೇ ಅರಿಶಿನ, ಗಂಗಾಜಲ, ಉಪ್ಪು, ಜೇನು ಅಥವಾ ಬೆಲ್ಲವನ್ನು ಬೆರೆಸಿಕೊಳ್ಳಿ. ಇದರಿಂದ ಬದುಕಿನಲ್ಲಿ ಒಳ್ಳೆಯ ದಿನಗಳು ಬರುತ್ತದೆ. ನಿಮ್ಮ ಗೌರವ ಹೆಚ್ಚುತ್ತದೆ. ಸಮಾಜದಲ್ಲಿ ಸ್ಥಾನಮಾನ ಮತ್ತು ನಿಮ್ಮ ಬಗ್ಗೆ ನಿಮಗಿರುವ ನಂಬಿಕೆಯೂ ಅಧಿಕವಾಗುತ್ತದೆ.

ದಿನವೂ ಸ್ನಾನ ಮಾಡಿದ ಬಳಿಕ ಸೂರ್ಯದೇವರಿಗೆ ನೀರು ನೀಡುವುದನ್ನು ರೂಢಿಸಿಕೊಳ್ಳಿ. ನೀರಿಗೆ ಹೂಗಳನ್ನು ಹಾಕಿ ಅದನ್ನು ಸೂರ್ಯನಿಗೆ ಅರ್ಪಿಸಿ. ಕಲಿಯುಗದಲ್ಲಿ ಸೂರ್ಯ ದೇವರೇ ನೇರವಾಗಿ ಕಾಣುವ ದೇವರು ಎಂದು ಹೇಳಲಾಗಿದೆ. ಸೂರ್ಯನಿಗೆ ಹೀಗೆ ನೀರು ಅರ್ಪಿಸುವುದರಿಂದ ವ್ಯಕ್ತಿಯಲ್ಲಿ ಏಳಿಗೆ ಮತ್ತು ಆರೋಗ್ಯವೃದ್ಧಿ ಆಗುತ್ತದೆ ಎಂದು ಹೇಳಲಾಗಿದೆ.

ಪ್ರಾಣಿ ಮತ್ತು ಪಕ್ಷಿಗಳಿಗೂ ದಿನವೂ ನೀರು ನೀಡಿ. ಈ ಅಭ್ಯಾಸ ಇಟ್ಟುಕೊಂಡವರಿಗೆ ಒಳಿತಾಗುತ್ತದೆ. ಮತ್ತು ರಾಶಿಯ ದೋಷಗಳು ದೂರವಾಗುತ್ತದೆ. ಜೀವನದ ತೊಂದರೆ ಇಲ್ಲವಾಗಿ ಆರೋಗ್ಯ ಹೆಚ್ಚುತ್ತದೆ. ಇದಕ್ಕಾಗಿ ಪ್ರಾಣಿ ಹಾಗೂ ಪಕ್ಷಿಗಳಿಗೆ ಪ್ರತ್ಯೇಕ ಪಾತ್ರೆಗಳನ್ನು ಇಡಿ. ಅದರಲ್ಲಿ ಸಮರ್ಪಕ ಪ್ರಮಾಣದ ನೀರನ್ನು ತುಂಬಿ ಇಡಿ.