ಮಕ್ಕಳೊಂದಿಗೆ ವ್ಯವಹರಿಸುವಾಗ ಈ ಅಂಶಗಳನ್ನು ನೆನಪಿನಲ್ಲಿಡಿ
TV9 Web | Updated By: Pavitra Bhat Jigalemane
Updated on:
Jan 30, 2022 | 10:38 AM
ಆಧುನಿಕ ಜಗತ್ತಿನಲ್ಲಿ ಮಕ್ಕಳು ತಂದೆ ತಾಯಿಗಳಿದ್ದೂ ಅನಾಥರಾಗುತ್ತಿದ್ದಾರೆ. ಇನ್ನೂ ಕೆಲವು ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚಿನ ಸೌಲಭ್ಯ ದೊರಕಿ ಅಡ್ಡ ದಾರಿ ಹಿಡಿಯುತ್ತದ್ದಾರೆ. ಇದಕ್ಕೆಲ್ಲ ಪರಿಹಾರ ಎಂದರೆ ಪೋಷಕರು ಮಕ್ಕಳೊಂದಿಗೆ ವ್ಯವಹರಿಸುವುದರಿಲ್ಲಿದೆ. ಹೀಗಾಗಿ ಈ ಅಂಶಗಳನ್ನು ನೆನೆಪಿನಲ್ಲಿಡಿ.
1 / 10
ನಿಮ್ಮ ಮಕ್ಕಳೊಂದಿಗೆ ವ್ಯವಹರಿಸುವಾಗ ಈ ಅಂಶಗಳನ್ನು ನೆನಪಿನಲ್ಲಿಡಿ.
2 / 10
ಪೋಷಕರಾಗುವುದು ಜಗತ್ತಿನ ಸುಂದರ ಅನುಭವಗಳಲ್ಲೊಂದು. ಆದರೆ ಅಷ್ಟೇ ಜವಾಬ್ದಾರಿಯುತ ಕೆಲಸವೂ ಆಗಿದೆ. ಮಕ್ಕಳೊಂದಿಗೆ ಅವರ ವಯಸ್ಸಿಗೆ ತಕ್ಕಹಾಗೆ ನಡೆದುಕೊಂಡು, ಜೀವನ ಪಾಠಗಳನ್ನು ಹೇಳಬೇಕು. ಹೀಗಾಗಿ ಈ ಅಂಶಗಳನ್ನು ಅಗತ್ಯವಾಗಿ ನೆನಪಿಡಿ.
3 / 10
ಮಕ್ಕಳ ಬಯಕೆಗಳನ್ನು ಈಡೇರಿಸುವಾಗ ಎಚ್ಚರಿಕೆವಹಿಸಿ. ಅವರ ಎಲ್ಲಾ ಆಸೆಗಳನ್ನು ಪೂರೈಸುವ ಬದಲು ಅಗತ್ಯತೆ ಮತ್ತು ಆಸೆಗಳ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಸಿ.
4 / 10
ಅವರ ಎಲ್ಲಾ ಬಯಕೆಗಳನ್ನು ಅವರಿಗೆ ತಕ್ಕ ಹಾಗೇ ಈಡೇರಿಸುವ ಬದಲು ಜೀವನ ಮೌಲ್ಯಗಳನ್ನು ಕಲಿಸಿ. ಜವಾಬ್ದಾರಿಯುತ ನಾಗರಿಕನಾಗಿ ಸಮಾಜದಲ್ಲಿ ಬದುಕಲು ಬೇಕಾದ ಗುಣಗಳ ಬಗ್ಗೆ ತಿಳಿಸಿ.
5 / 10
ಯಾವಾಗಲೂ ಮಕ್ಕಳ ಪರವಾಗಿಯೇ ಇರಬೇಡಿ. ಅದರಲ್ಲೂ ಶಾಲೆಯ ವಿಷಯಕ್ಕೆ ಬಂದಾಗ ಅವರ ಟೀಚರ್ ಮಾತನ್ನು ಕೇಳಿ. ಮಕ್ಕಳ ತಪ್ಪನ್ನು ಅವರಿಗೆ ಅರ್ಥಮಾಡಿಸಿ.
6 / 10
ತಪ್ಪುಗಳನ್ನು ಮಾಡುವುದು ಸಹಜ. ತಪ್ಪು ಮಾಡಿದಾಗ ಅದರಿಂದ ಬೇಸರ ಮಾಡಿಕೊಂಡು ಕುಳಿತುಕೊಳ್ಳುವ ಬದಲು ತಪ್ಪುಗಳಿಂದ ಹೊಸ ಪಾಠವನ್ನುನ ಕಲಿಯುವುದನ್ನು
ಹೇಳಿಕೊಡಿ.
7 / 10
ಮಕ್ಕಳೊಂದಿಗೆ ಸ್ನೆಹಿತರಾಗಿರಿ. ಅವರ ಗೊಂದಲ, ತೊಳಲಾಟಗಳನ್ನು ಕೇಳಿಸಿಕೊಳ್ಳಿ. ಆಗ ಅವರಿಗೂ ಧೈರ್ಯ ಬರುತ್ತದೆ.
8 / 10
ಮಕ್ಕಳ ಇಷ್ಟದಂತೆ ಅವರ ನೆಚ್ಚಿನ ಆಕ್ಟಿವಿಟಿಗಳಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಳ್ಳಿ. ಇದು ಅವರನ್ನು ಇನ್ನಷ್ಟು ಕ್ರೀಯಾಶೀಲರನ್ನಾಗಿಸುತ್ತದೆ.
9 / 10
ಬೇರೆಯರೊಂದಿಗೆ ಸ್ಪರ್ಧೆಗೆ ಇಳಿಯದಂತೆ ನೋಡಿಕೊಳ್ಳಿ. ಬದಲಾಗಿ ಅವರ ಸಾಮರ್ಥ್ಯವನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಬೇಕಾದ ವಾತಾವರಣವನ್ನು ಕಲ್ಪಿಸಿಕೊಡಿ.
10 / 10
ಮಕ್ಕಳು ನಿಮ್ಮನ್ನು ಅನುಕರಿಸುತ್ತಾರೆ. ಹೀಗಾಗಿ ನೀವೂ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಇದರಿಂದ ಅವರಿಗೂ ಅದರಲ್ಲಿ ಆಸಕ್ತಿ ಬೆಳೆಯುತ್ತದೆ.
Published On - 10:16 am, Sun, 30 January 22