ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿವೆ ವಿದೇಶಿ ಪಕ್ಷಿಗಳು; ಅಪರೂಪದ ಫೋಟೋಗಳು ಇಲ್ಲಿವೆ
TV9 Web | Updated By: preethi shettigar
Updated on:
Feb 20, 2022 | 8:45 AM
ಪ್ರತಿವರ್ಷ ಸಾವಿರಾರು ಕಿಲೋಮೀಟರ್ ಹಾರಾಡುತ್ತ ವಲಸೆ ಹೋಗುತ್ತವೆ. ಹೆಚ್ಚಾಗಿ ಈ ಪಕ್ಷಿಗಳು ಹೀಗೆ ಗುಂಪು ಗುಂಪಾಗಿ ವಲಸೆ ಬಂದು ಕೆಲ ತಿಂಗಳುಗಳು ಇದ್ದು ವಾಪಾಸ್ಸಾಗುತ್ತವೆ. ಇನ್ನೂ ಈ ಪಕ್ಷಿಗಳ ಕಲರವ ತುಂಟಾಟ ನೋಡಲು ಸಾಕಷ್ಟು ಪ್ರವಾಸಿಗರು ಈ ಪ್ರದೇಶಕ್ಕೆ ಬರುತ್ತಿದ್ದಾರೆ.
1 / 6
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೆರವಡಿ ಗ್ರಾಮದ ಕೆರೆಯಲ್ಲಿ ಸಾವಿರಾರು ‘ಸೂಜಿ ಬಾಲದ ಬಾತು'ಗಳು (ನಾರ್ದರ್ನ್ ಪಿನ್‌ಟೈಲ್) ವಲಸೆ ಬಂದಿವೆ. ಇದು ಹಕ್ಕಿ ಪ್ರವಾಸಿಗರ ಸಂತಸಕ್ಕೆ ಕಾರಣವಾಗಿದೆ. ಸೂಜಿ ಬಾಲದ ಬಾತು ಉತ್ತರ ಅಮೆರಿಕ, ಉತ್ತರ ಯೂರೋಪ್ ಮತ್ತು ಏಷ್ಯಾ ಖಂಡದ ವಿವಿಧ ಕಡೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ.
2 / 6
ಆಫ್ರಿಕಾದ ಪಶ್ಚಿಮ ಭಾಗ, ಆಗ್ನೇಯ ಏಷ್ಯಾ, ಕೊಲ್ಲಿ ರಾಷ್ಟ್ರಗಳ ದಕ್ಷಿಣದಲ್ಲಿ ಹಾಗೂ ಪಾಕಿಸ್ತಾನದ ಕೆಲವೆಡೆಯೂ ಈ ಹಕ್ಕಿಗಳಿವೆ ಎಂಬ ಮಾಹಿತಿ ಕೂಡ ಇದೆ. ಈ ಹಕ್ಕಿಗಳು ಜನವರಿ ತಿಂಗಳು ನಂತರ ಹೀಗೆ ವಲಸೆ ಬರುತ್ತವೆ. ಪ್ರಕೃತಿ ಸೌಂದರ್ಯ ನೀರಿನ ಸೌಲಭ್ಯ ಇರುವ ಜಾಗ ಗುರುತಿಸಿ ಅಲ್ಲೆ ಕೆಲ ತಿಂಗಳು ವಾಸ ಮಾಡಿ ಮತ್ತೆ ತಮ್ಮ ತವರಿಗೆ ಮರಳುತ್ತವೆ. ಈ ಹಕ್ಕಿಗಳನ್ನು ನೋಡುವುದೆ ಚಂದ ಎಂದು ಇಲ್ಲಿಯ ಸ್ಥಳೀಯರು ಹೇಳುತ್ತಾರೆ.
3 / 6
ಚಳಿಗಾಲದಲ್ಲಿ ನಮ್ಮ ದೇಶಕ್ಕೆ ಇವು ಸಾಮಾನ್ಯವಾಗಿ ವಲಸೆ ಬರುತ್ತವೆ. ಹೆಚ್ಚು ಜೌಗು ಪ್ರದೇಶದಲ್ಲಿ, ಪೊದೆಗಳು ಇರುವ ಸ್ಥಳಗಳನ್ನು ಹುಡುಕಿಕೊಂಡು ಬಂದು, ಒಂದಷ್ಟು ದಿನ ಇದ್ದು ವಾಪಸ್ ಹೋಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿಯ ಮೇಲೆ ಮನುಷ್ಯನ ಅನಿಯಂತ್ರಿತ ಚಟುವಟಿಕೆಗಳಿಂದಾಗಿ ಈ ರೀತಿಯ ಬಾತುಗಳು ವಿನಾಶದತ್ತ ಸಾಗುತ್ತಿವೆ ಎಂಬ ಕಳವಳ ಕೂಡ ಇದೆ.
4 / 6
ಬಾತುಗಳು ಸಾಮಾನ್ಯವಾಗಿ ಹುಲ್ಲಿನ ಮಧ್ಯೆ ಇರುವ ಕ್ರಿಮಿ ಕೀಟಗಳು, ಜಲಮೂಲಗಳಲ್ಲಿರುವ ಜೀವಿಗಳನ್ನು ಸೇವಿಸುತ್ತವೆ. ಅವುಗಳನ್ನು ತಿಂದು ತಮ್ಮ ಜೀವನ ಸಾಗಿಸುತ್ತವೆ. ವಿಷೇಶ ಅಂದರೆ ಈ ಬಾತುಗಳ ಮರಿಗಳು ಮೊಟ್ಟೆಯೊಡೆದು ಹೊರ ಬಂದು ಕೆಲವೇ ಗಂಟೆಗಳಲ್ಲಿ ತಮ್ಮ ತಾಯಿಯನ್ನು ಅನುಸರಿಸಿಕೊಂಡು ಹೋಗುವ ಸಾಮರ್ಥ್ಯ ಪಡೆದುಕೊಂಡಿರುತ್ತವೆ.
5 / 6
ಪ್ರತಿವರ್ಷ ಸಾವಿರಾರು ಕಿಲೋಮೀಟರ್ ಹಾರಾಡುತ್ತ ವಲಸೆ ಹೋಗುತ್ತವೆ. ಹೆಚ್ಚಾಗಿ ಈ ಪಕ್ಷಿಗಳು ಹೀಗೆ ಗುಂಪು ಗುಂಪಾಗಿ ವಲಸೆ ಬಂದು ಕೆಲ ತಿಂಗಳುಗಳು ಇದ್ದು ವಾಪಾಸ್ಸಾಗುತ್ತವೆ. ಇನ್ನೂ ಈ ಪಕ್ಷಿಗಳ ಕಲರವ ತುಂಟಾಟ ನೋಡಲು ಸಾಕಷ್ಟು ಪ್ರವಾಸಿಗರು ಈ ಪ್ರದೇಶಕ್ಕೆ ಬರುತ್ತಿದ್ದಾರೆ.
6 / 6
ಅಥಿತಿಗಳು ತಮ್ಮ ಬಣ್ಣ ಬಣ್ಣದ ಮೈ ಮಾಟದ ಮೂಲಕ, ತುಂಟಾಟಗಳ ಮೂಲಕ ಜನರ ಮನಸ್ಸನ್ನ ಸೆಳೆಯುತ್ತಿವೆ. ಸಂಜೆ ಹೊತ್ತು ಈ ಪ್ರದೇಶದಲ್ಲಿ ವಾಕ್ ಬರುವುದೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ನೀವು ಒಮ್ಮೆ ಈ ಸ್ಥಳಕ್ಕೆ ಭೇಟಿ ಕೊಟ್ಟು ಪಕ್ಷಿಗಳ ಸೌಂದರ್ಯ ಸವಿಯಿರಿ.