Kannada News Photo gallery Gandhi Jayanti Holiday - People flocked to see Adiyogi statue at Isha Foundation in Chikkaballapur
ಚಿಕ್ಕಬಳ್ಳಾಪುರ: ಗಾಂಧಿ ಜಯಂತಿ ರಜೆ ಹಿನ್ನೆಲೆ ಈಶಾ ಫೌಂಡೇಷನ್ ಆದಿಯೋಗಿಯನ್ನು ನೋಡಲು ಹರಿದು ಬಂದ ಜನ ಸಾಗರ
ಕಣ್ಣು ಹಾಯಿಸಿದ ಕಡೆಯೆಲ್ಲ ಜನವೊ ಜನ... ಒಂಡೆದೆ ಸೆಲ್ಫಿ ಫೋಟೊ ಗೀಳು ಮತ್ತೊಂದೆಡೆ ಭಕ್ತಿ ಭಾವದಿಂದ ಪ್ರಾರ್ಥನೆ... ಇಂಥ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಇರುವ ಈಶಾ ಫೌಂಡೇಷನ್ (Isha Foundation, Chikkaballapur) ನಲ್ಲಿ.
1 / 6
ರಾಜಧಾನಿ ಬೆಂಗಳೂರಿನಿಂದ ಕೂಗಳತೆಯ ದೂರದಲ್ಲಿ ಅದೊಂದು ಧಾರ್ಮಿಕ ಹಾಗೂ ಪ್ರವಾಸಿ ತಾಣವಿದೆ. ಅಲ್ಲಿಗೆ ಹೋಗಿ ಕೆಲಕಾಲ ಪ್ರಾರ್ಥಿಸಿ, ವಿಹರಿಸಿದ್ರೆ ಅದೇನೊ... ಭಕ್ತಿ ಭಾವ, ಸಂತಸ ಸಮಾಧಾನ ಮೂಡುತ್ತೆ. ಈ ಸಮಯದಲ್ಲಿ ಇಂದು ರಜೆ ದಿನ ಆಗಿರುವುದರಿಂದ ರಾಜಧಾನಿ ಬೆಂಗಳೂರಿನ ಜನ ಅಲ್ಲಿಗೆ ಲಗ್ಗೆ ಹಾಕಿದ್ದಾರೆ. ಅಷ್ಟಕ್ಕೂ ಅದೇಲ್ಲಿ ಅಂತೀರಾ ಈ ವರದಿ ನೋಡಿ!!
2 / 6
ಕಣ್ಣು ಹಾಯಿಸಿದ ಕಡೆಯೆಲ್ಲ ಜನವೊ ಜನ... ಒಂಡೆದೆ ಸೆಲ್ಫಿ ಫೋಟೊ ಗೀಳು ಮತ್ತೊಂದೆಡೆ ಭಕ್ತಿ ಭಾವದಿಂದ ಪ್ರಾರ್ಥನೆ... ಇಂಥ ದೃಶ್ಯಗಳು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಇರುವ ಈಶಾ ಫೌಂಡೇಷನ್ (Isha Foundation, Chikkaballapur) ನಲ್ಲಿ.
3 / 6
ಹೌದು ಈಶಾ ಫೌಂಡೇಷನ್ ನಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದು, ಪ್ರತಿಮೆ ನೋಡಲು ಜನ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ನಿನ್ನೆ ಭಾನುವಾರ, ಇಂದೂ ಸಹ ಗಾಂಧಿ ಜಯಂತಿ ರಜೆ (Gandhi Jayanti Holiday) ಹಿನ್ನೆಲೆ ರಾಜಧಾನಿ ಬೆಂಗಳೂರಿನ ಜನ ಮುಗಿಬಿದ್ದು ಇಲ್ಲಿಗೆ ಆಗಮಿಸಿದ್ದಾರೆ.
4 / 6
ಇನ್ನು ರಾಜಧಾನಿ ಬೆಂಗಳೂರಿನಿಂದ ಇಶಾ ಫೌಂಡೇಷನ್ ಕೇವಲ 65 ಕಿಲೋ ಮೀಟರ್ ದೂರ ಇದೆ, ಇಲ್ಲಿಗೆ ಬಂದು ಹೊಗುವುದಕ್ಕೆ ಒಂದೆರಡು ಗಂಟೆಯಷ್ಟೇ ಆಗುವ ಕಾರಣ ಒನ್ ಡೇ ಔಟ್ ಅಂತಾ ಜನ... ಕಾರು ಬೈಕ್ ಬಸ್ ಗಳಲ್ಲಿ ಸಾಗರವಾಗಿ ಆದಿಯೋಗಿ ದರ್ಶನಕ್ಕೆ ಬರ್ತಿದ್ದಾರೆ.
5 / 6
ಇದ್ರಿಂದ ದಾರಿಯಲ್ಲಿ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗ್ತಿದೆ, ಆದ್ರೂ ಆದಿಯೋಗಿ ದರ್ಶನ ಪಡೆದು ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ರಜೆಗಳ ಮೇಲೆ ರಜೆ ಇರುವ ಕಾರಣ ರಾಜಧಾನಿ ಬೆಂಗಳೂರಿನ ಜನ, ಚಿಕ್ಕಬಳ್ಳಾಪುರದ ಪ್ರವಾಸಿ ತಾಣಗಳತ್ತ ಲಗ್ಗೆ ಹಾಕಿದ್ದು, ಸಂಭ್ರಮ ಸಂತಸದಿಂದ ನಲಿಯುತ್ತಿದ್ದಾರೆ.
6 / 6
ಒಟ್ಟಿನಲ್ಲಿ ರಜೆಗಳ ಮೇಲೆ ರಜೆ ಇರುವ ಕಾರಣ ರಾಜಧಾನಿ ಬೆಂಗಳೂರಿನ ಜನ, ಚಿಕ್ಕಬಳ್ಳಾಪುರದ ಪ್ರವಾಸಿ ತಾಣಗಳತ್ತ ಲಗ್ಗೆ ಹಾಕಿದ್ದು, ಸಂಭ್ರಮ ಸಂತಸದಿಂದ ನಲಿಯುತ್ತಿದ್ದಾರೆ.
Published On - 2:17 pm, Mon, 2 October 23