
ಈ ಮುದ್ದು ಗಣಪನ ವಿಗ್ರಹಗಳ ನೋಡಿ, ಅದರ ತಯಾರಕರ ಕೈಚಳವೂ ಸೊಗಸು!

ಅಡಿಕೆ ಮೇಲೆ ಗಣಪನ ಉದ್ಭವ! ಈ ಬಾರಿ ಗಣೇಶನ ಹಬ್ಬಕ್ಕೆ ಇನ್ನು ಎರಡೇ ದಿನ. ನಾಳಿದ್ದು ಶುಕ್ರವಾರ ವಿನಾಯಕ ಚೌತಿ. ಈ ಬಾರಿಯೂ ಕಳೆದ ವರ್ಷದಂತೆ ಕೊರೊನಾ ಮಹಾಮಾರಿಯ ಆತಂಕದ ಮಧ್ಯೆ ಹಬ್ಬ ಆಚರಿಸಬೇಕಿದೆ. ಗತವೈಭವದೊಂದಿಗೆ ವಿಜೃಂಭಣೆಯಿಂದ ಗಣೇಶ ಹಬ್ಬ ಆಚರಿಸುವುದು ಕಷ್ಟಕಷ್ಟವಾಗಿದೆ. ಆದರೂ ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೊರೊನಾ ಆತಂಕ ತುಸು ಕಡಿಮೆಯಾಗಿದೆ. ಹಾಗಾಗಿ ಹಬ್ಬದ ವಾತಾವರಣ ಈಗಾಗಲೇ ಕಳೆಗಟ್ಟಿದೆ. ಹಬ್ಬಕ್ಕೆ ಮುಂಚೆ ಗಣೇಶ ವಿಗ್ರಹಗಳ ತಯಾರಕರೂ ತಮ್ಮ ಕೈಚಳಕ ತೋರಿದ್ದು, ಆಕರ್ಷಕ, ಅರ್ಥಪೂರ್ಣ ವಿಗ್ರಹಗಳನ್ನು ರಚಿಸಿ, ಮಾರುಕಟ್ಟೆಗೆ ಬಿಟ್ಟಿದ್ದಾರೆ. ಕೊವಿಡ್ ಇದ್ದರೂ ಈ ಬಾರಿಯೂ ಭಾರೀ ಸಂಖ್ಯೆಯಲ್ಲಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಬಂದಿದೆ ಎಂದು ಕಲಾವಿದರು ಸಂತಸ ಪಟ್ಟಿದ್ದಾರೆ. ದೇಶದ ವಿವಿಧೆಡೆ ವಿಗ್ರಹಗಳ ತಯಾರಿಕೆ ಹೇಗಿದೆ, ನೋಡೋಣ ಬನ್ನೀ.

ಮಹಾರಾಷ್ಟ್ರದ ನಾಸಿಕ್ ಕಲಾವಿದ ಸಂಜಯ್ ತಯಾರಿಸಿದ ಸುಂದರ ಮೂರ್ತಿ

22 ವರ್ಷಗಳಿಂದ 33,500 ವಿಗ್ರಹಗಳನ್ನು ತಯಾರಿಸಿರುವ ಕಲಾವಿದ ಸಂಜಯ್

ಜೇಡಿ ಮಣ್ಣು, ಉಗುರು,ಕ್ಯಾಸೆಟ್ಗಳ ಮೇಲೆ ಆಕರ್ಷಕ ಗಣಪನ ವಿಗ್ರಹ ಬಿಡಿಸುವ ಕಲಾವಿದ

3-5 ಇಂಚಿನ ಗಾತ್ರದ ಆಕರ್ಷಕ ಗಣಪನ ಚಿತ್ರಗಳು

ಪ್ರತಿ ವರ್ಷ ನೀರಿನಲ್ಲಿ ಕರಗುವ 2000-2500 ವಿಗ್ರಹಗಳನ್ನು ತಯಾರಿಸುವ ಕಲಾವಿದ ಫೂಲ್ ಚಂದ್

ಇದು ಪಂಜಾಬ್ನ ಮೊಹಾಲಿಯಲ್ಲಿ ಕಲಾವಿದ ಫೂಲ್ ಚಂದ್ ತಯಾರಿಸಿದ ಪರಿಸರ ಸ್ನೇಹಿ ಗಜಾನನ ಮೂರ್ತಿ

ಕೊವಿಡ್ ಇದ್ದರೂ ಈ ಬಾರಿಯೂ ಭಾರೀ ಸಂಖ್ಯೆಯಲ್ಲಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಬಂದಿದೆ ಎಂದು ಸಂತಸ ಪಟ್ಟ ಕಲಾವಿದ

ನಾಳಿದ್ದು ಶುಕ್ರವಾರ ವಿನಾಯಕ ಚೌತಿ. ಈ ಬಾರಿಯೂ ಕಳೆದ ವರ್ಷದಂತೆ ಕೊರೊನಾ ಮಹಾಮಾರಿಯ ಆತಂಕದ ಮಧ್ಯೆ ಹಬ್ಬ ಆಚರಿಸಬೇಕಿದೆ