Google Maps: ಗೂಗಲ್ ಮ್ಯಾಪ್ ಪರಿಚಯಿಸಿದೆ ಭರ್ಜರಿ ಫೀಚರ್: ಹೊಸ ಅಪ್ಡೇಟ್ ಕಂಡು ದಂಗಾದ ಬಳಕೆದಾರರು
TV9 Web | Updated By: Vinay Bhat
Updated on:
Jan 28, 2022 | 12:40 PM
ಇದೀಗ ಭಾರತದಲ್ಲಿನ ಗೂಗಲ್ ಮ್ಯಾಪ್ ಬಳಕೆದಾರರು ತಮ್ಮ ಮನೆಯ ನಿಖರ ವಿಳಾಸಗಳನ್ನು ಉಳಿಸಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುವಂತಹ ಹೊಸ ವೈಶಿಷ್ಟ್ಯವನ್ನು ಗೂಗಲ್ ಬಿಡುಗಡೆಗೊಳಿಸಿದೆ. ಇದನ್ನು ಕಂಡು ಬಳಕೆದಾರರು ಸಂತಸಗೊಂಡಿದ್ದಾರೆ.
1 / 9
ವಿಶ್ವದ ಪ್ರಸಿದ್ಧ ಸರ್ಚ್ ಇಂಜಿನ್ ಆಗಿರುವ ಗೂಗಲ್ ಇತ್ತೀಚಿನ ದಿನಗಳಲ್ಲಿ ಹಲವಾರು ವಿಭಿನ್ನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ಬಳಕೆದಾರರಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಇದರಲ್ಲಿ ಗೂಗಲ್ ಮ್ಯಾಪ್ ಕೂಡ ಒಂದಾಗಿದೆ. ಪ್ರಸ್ತುತ ದಿನಗಳಲ್ಲಿ ನೀವು ಯಾವುದೇ ಸ್ಥಳಕ್ಕೆ ಹೋಗಬೇಕಾದರೂ ಗೂಗಲ್ ಮ್ಯಾಪ್ ತುಂಬಾ ಸಹಾಯ ಮಾಡುತ್ತದೆ. ಇದಕ್ಕೆ ತಕ್ಕಂತೆ ಆಗಾಗ ಅಪ್ಡೇಟ್ಗಳನ್ನೂ ನೀಡುತ್ತಿರುತ್ತದೆ.
2 / 9
ಇದೀಗ ಭಾರತದಲ್ಲಿನ ಗೂಗಲ್ ಮ್ಯಾಪ್ ಬಳಕೆದಾರರು ತಮ್ಮ ಮನೆಯ ನಿಖರ ವಿಳಾಸಗಳನ್ನು ಉಳಿಸಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುವಂತಹ ಹೊಸ ವೈಶಿಷ್ಟ್ಯವನ್ನು ಗೂಗಲ್ ಬಿಡುಗಡೆಗೊಳಿಸಿದೆ. ಇದನ್ನು ಕಂಡು ಬಳಕೆದಾರರು ಸಂತಸಗೊಂಡಿದ್ದಾರೆ.
3 / 9
ಹೌದು, ಗೂಗಲ್ ಮ್ಯಾಪ್ ಇದೀಗ ಭಾರತದ ಬಳಕೆದಾರರಿಗೆ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಇದರಿಂದ ತಮ್ಮ ಮನೆಯ ವಿಳಾಸಗಳನ್ನು ಸೇವ್ ಮಾಡುವಾಗ ಮತ್ತು ಶೇರ್ ಮಾಡುವಾಗ 'ಪ್ಲಸ್ ಕೋಡ್ಗಳನ್ನು' ಸಾಮಾನ್ಯ ಬಳಕೆದಾರರು ಬಳಸಲು ಅನುಮತಿಸುತ್ತದೆ. ಈ ಪ್ಲಸ್ ಕೋಡ್ಗಳ ಮೂಲಕ ನೀವು ನಿಮ್ಮ ಮನೆಯ ವಿಳಾಶಕ್ಕೆ ಕೋಡ್ ಅನ್ನು ಸೆಟ್ ಮಾಡಬಹುದಾಗಿದೆ.
4 / 9
ಪ್ಲಸ್ ಕೋಡ್ಗಳು ಉಚಿತ ಡಿಜಿಟಲ್ ವಿಳಾಸಗಳಾಗಿವೆ. ಅದು ಭೂಮಿಯ ಮೇಲಿನ ಯಾವುದೇ ಸ್ಥಳಕ್ಕೆ ಸರಳ ಮತ್ತು ನಿಖರವಾದ ವಿಳಾಸಗಳನ್ನು ಒದಗಿಸುತ್ತದೆ. ಮಾತ್ರವಲ್ಲದೆ ನಿಖರವಾದ ಔಪಚಾರಿಕ ವಿಳಾಸಗಳನ್ನು ಹೊಂದಿರದ ಸ್ಥಳಗಳನ್ನು ಸಹ ಒಳಗೊಂಡಿದೆ.
5 / 9
ನೀವು ನಿರ್ದಿಷ್ಟ ವಿಳಾಸಕ್ಕಾಗಿ ಪಟ್ಟಣ ಅಥವಾ ನಗರಗಳ ಹೆಸರಿನೊಂದಿಗೆ 6 ಅಥವಾ 7 ಅಕ್ಷರಗಳ ಗುಂಪನ್ನು ಸೇರಿಸಬಹುದಾಗಿದೆ. ಇದು ರಸ್ತೆ ಮತ್ತು ಪ್ರದೇಶದ ಹೆಸರುಗಳನ್ನು ಅವಲಂಬಿಸಿಲ್ಲ. ಬದಲಿಗೆ ಅಕ್ಷಾಂಶಗಳು ಮತ್ತು ರೇಖಾಂಶಗಳನ್ನು ಬಳಸಬಹುದಾಗಿದೆ.
6 / 9
ಈ ಪ್ಲಸ್ ಕೋಡ್ಗಳೊಂದಿಗಿನ ವಿಳಾಸಗಳನ್ನು ಸುಲಭ ನ್ಯಾವಿಗೇಷನ್ಗಾಗಿ ಜನರೊಂದಿಗೆ ಹಂಚಿಕೊಳ್ಳಬಹುದು. ನೀವು ಬಯಸುವ ಯಾರಿಗಾದರೂ ನಿಮ್ಮ ಮನೆಯ ಸ್ಥಳದ ನಿಖರವಾದ ಸ್ಥಳದ ವಿವರಗಳನ್ನು ಒದಗಿಸಲು ನೀವು ಪ್ಲಸ್ ಕೋಡ್ ಅನ್ನು ನಕಲಿಸಬಹುದು ಮತ್ತು ಅದನ್ನು ನಿಮ್ಮ ಚಾಟ್ನಲ್ಲಿ ಅಂಟಿಸಬಹುದು.
7 / 9
ಗೂಗಲ್ ಮ್ಯಾಪ್ನ ಉತ್ಪನ್ನ ನಿರ್ವಾಹಕರಾದ ಅಮಂಡಾ ಬಿಷಪ್, "ನಾವು ಒಂದು ತಿಂಗಳ ಹಿಂದೆ ಭಾರತದಲ್ಲಿ ಈ ವೈಶಿಷ್ಟ್ಯವನ್ನು ಪರೀಕ್ಷಿಸಿದ್ದೇವೆ. ಭಾರತದಲ್ಲಿ 3 ಲಕ್ಷಕ್ಕೂ ಹೆಚ್ಚು ಬಳಕೆದಾರರು ಪ್ಲಸ್ ಕೋಡ್ ಅನ್ನು ಬಳಸಿಕೊಂಡು ತಮ್ಮ ಮನೆಯ ವಿಳಾಸವನ್ನು ಪಡೆದಿದ್ದಾರೆ ಎಂದು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಈ ಸಂಖ್ಯೆಯನ್ನು ನಾವು ನಿರೀಕ್ಷಿಸುತ್ತೇವೆ,” ಎಂದು ಹೇಳಿದ್ದಾರೆ.
8 / 9
ಗೂಗಲ್ ಈ ಫೀಚರ್ಸ್ ಅನ್ನು ಇದೀಗ ಭಾರತದಲ್ಲಿ ಒಂದು ತಿಂಗಳ ಹಿಂದೆ ಪ್ರಾಯೋಗಿಕವಾಗಿ ಜಾರಿ ಮಾಡಿದೆ. ಭಾರತದಲ್ಲಿನ 300,000 ಕ್ಕೂ ಹೆಚ್ಚು ಬಳಕೆದಾರರು ಈಗಾಗಲೇ ಪ್ಲಸ್ ಕೋಡ್ಗಳನ್ನು ಬಳಸಿಕೊಂಡು ತಮ್ಮ ಮನೆಯ ವಿಳಾಸವನ್ನು ಕಂಡುಕೊಂಡಿದ್ದಾರೆ ಎನ್ನಲಾಗಿದೆ. ಇದನ್ನು ಇನ್ನು ಹೆಚ್ಚಿನ ರೀತಿಯ ಸ್ಥಳಗಳಿಗೆ ವಿಸ್ತರಿಸಲು ನಾವು ಪ್ರಯತ್ನಿಸುತ್ತಿದ್ದೆವೆ ಎಂದು ಗೂಗಲ್ ಮ್ಯಾಪ್ ಹೇಳಿಕೊಂಡಿದೆ.
9 / 9
ಈ ಫೀಚರ್ಸ್ ಮೊದಲಿಗೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಐಒಎಸ್ ಬಳಕೆದಾರರಿಗೂ ಲಭ್ಯವಾಗಲಿದೆ. ಈಗ ಯಾರಾದರೂ ಗೂಗಲ್ ಮ್ಯಾಪ್ನಲ್ಲಿ'ಹೋಮ್' ಲೊಕೇಶನ್ ಅನ್ನು ಸೇವ್ ಮಾಡುವುದಾದರೆ "ಪ್ರಸ್ತುತ ಸ್ಥಳವನ್ನು ಬಳಸಿ" ಎಂದು ಕೇಳುವ ಪ್ರಾಂಪ್ಟ್ ಅನ್ನು ಕಾಣಬಹುದು.