ನಟ ರಾಕಿಂಗ್ ಸ್ಟಾರ್ ಯಶ್ ಸದ್ಯ ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳದೆ, ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಅವರು 'ಕೆಜಿಎಫ್ 3' ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂಬ ಮಾತಗಳು ಸಹ ಕೇಳಿಬಂದಿದ್ದವು. ಈ ಮಧ್ಯೆ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರು ಯಶ್ ಅವರನ್ನು ಭೇಟಿ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರನ್ನು ಪಾಂಡ್ಯ ಬ್ರದರ್ಸ್ ಭೇಟಿ ಮಾಡಿದ್ದು, ಹಾರ್ದಿಕ್ ಪಾಂಡ್ಯ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ 'ಕೆಜಿಎಫ್ 3' ಎಂದು ಬರೆದುಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಇಬ್ಬರು ಕೂಡ 'ಕೆಜಿಎಫ್' ಚಿತ್ರಗಳ ದೊಡ್ಡ ಅಭಿನಿಮಾಗಳು ಎನ್ನುವುದು ಎಲ್ಲರಿಗೂ ಗೋತ್ತಿರುವ ವಿಷಯ.
'ಕೆಜಿಎಫ್ 2' ಚಿತ್ರದ ವಿಶೇಷ ಪದರ್ಶನದ ವೇಳೆ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಭಾಗವಹಿಸಿ ದ್ದರು.
ಇತ್ತೀಚೆಗೆ ಆಂಧ್ರ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಅವರ ಪುತ್ರ ಮಾಜಿ ಸಚಿವ ನಾರಾ ಲೋಕೇಶ್ ಅವರನ್ನ ಯಶ್ ಭೇಟಿ ಮಾಡಿದ್ದರು.