ಡಾರ್ಕ್ ಚಾಕೊಲೇಟ್‌ಗಳು ಶೇಕಡಾ 70ರಷ್ಟು ಕೊಕೊದಿಂದ ತಯಾರಿಸಲಾಗುತ್ತದೆ ಮತ್ತು ಯಾವುದೇ ಸಕ್ಕರೆ ಸೇರಿಸಲಾಗುವುದಿಲ್ಲ. ಕೋಕೋ ಫ್ಲೇವನಾಯ್ಡ್‌ಗಳ ಸಮೃದ್ಧ ಮೂಲವಾಗಿದೆ, ಇದು ಉತ್ಕರ್ಷಣ ನಿರೋಧಕವಾಗಿದ್ದು, ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಮಾಡುತ್ತದೆ.
ಸೂರ್ಯಕಾಂತಿ ಬೀಜಗಳು, ಬಾದಾಮಿ, ಗೋಡಂಬಿಗಳನ್ನು ಸೇವಿಸಿ. ಈ ಆಹಾರಗಳು ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದ್ದು, ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯಮಾಡುತ್ತದೆ.
ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ ಸಕ್ಕರೆ ಸೇರಿಸಿದ ಸಂಸ್ಕರಿಸಿದ ಆಹಾರವನ್ನು ತಪ್ಪಿಸಿ. ಹೆಚ್ಚಾಗಿ ಸಕ್ಕರೆಯನ್ನು ಸೇವಿಸುವುದ್ದರಿಂದ ನಿಮ್ಮ ಮೆದುಳುನ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಸಕ್ಕರೆಯ ಬದಲಿಗೆ ಬೆಲ್ಲ, ಖರ್ಜೂರ ಮತ್ತು ಜೇನುತುಪ್ಪಗಳನ್ನು ಬಳಸಿ
ಸುಡೋಕು, ಚೆಸ್, ಕ್ರಾಸ್‌ವರ್ಡ್, ಪಜಲ್ ಆಟಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಇದು ನಿಮ್ಮ ಅರಿವಿನ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮನ್ನು ಮಾನಸಿಕವಾಗಿ ಚುರುಕುಗೊಳಿಸುತ್ತದೆ.
ವಿಟಮಿನ್ ಬಿ ಯಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಉದಾಹರಣೆಗೆ, ಬೀಟ್ರೂಟ್ ಮತ್ತು ಕ್ಯಾರೆಟ್ಗಳನ್ನು ನಿಮ್ಮ ದೈನಂದಿನ ಆಹಾರ ಪದ್ದತಿಯಲ್ಲಿ ರೂಢಿಸಿಕೊಳ್ಳುವುದ್ದರಿಂದ ನೆನಪಿನ ಶಕ್ತಿ ಹೆಚ್ಚಾಗಲು ಸಹಾಯಮಾಡುತ್ತದೆ.
ಮೀನಿನ ಎಣ್ಣೆಯು ನಿಮ್ಮ ಸ್ಮರಣೆಯನ್ನು ಹೆಚ್ಚಿಸಲು ಅತ್ಯುತ್ತಮ ಮಾರ್ಗವಾಗಿದೆ, ವಿಶೇಷವಾಗಿ ನೀವು ಮಾಂಸಾಹಾರಿಯಾಗಿದ್ದರೆ. ಇದು ಹೆಚ್ಚಿನ ಪ್ರಮಾಣದ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ, ಇದು ನಿಮ್ಮ ಮೆದುಳಿನ ಕೋಶಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ.
ಮನಸ್ಸನ್ನು ಶಾಂತಗೊಳಿಸಲು ಮತ್ತು ನಿಮ್ಮ ಗಮನವನ್ನು ಕೇಂದ್ರೀಕರಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಧ್ಯಾನವು ಅತ್ಯುತ್ತಮ ಮಾರ್ಗವಾಗಿದೆ. ವಿದ್ಯಾರ್ಥಿಗಳು ಮತ್ತು ಒತ್ತಡದ ಉದ್ಯೋಗ ಹೊಂದಿರುವ ವ್ಯಕ್ತಿಗಳಿಗೆ ಧ್ಯಾನ ಉತ್ತಮ ಮಾರ್ಗವಾಗಿದೆ.
Published On - 5:43 pm, Thu, 10 November 22