
ಮನೆಯಲ್ಲಿನ ಸಾಸಿವೆ ಎಣ್ಣೆಯನ್ನು ಬಳಸಿ ಕಫ ನಿವಾರಣೆ ಮಾಡಿಕೊಳ್ಳಬಹುದು, ಎದೆಯಲ್ಲಿ ಕಫ ಹೆಚ್ಚು ಕಟ್ಟಿದ್ದರೆ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಎದೆ ಮತ್ತು ಬೆನ್ನಿಗೆ ಮಸಾಜ್ ಮಾಡಿದರೆ ಕಫ ಕರಗಿ ದಮ್ಮು, ಕೆಮ್ಮು ನಿವಾರಣೆಯಾಗುತ್ತದೆ.

ಹೆಚ್ಚು ಕಫದ ಸಮಸ್ಯೆ ಕಾಡುತ್ತಿದ್ದರೆ ನಿಂಬೆ ಹಣ್ಣಿನ ರಸಕ್ಕೆ ಕಪ್ಪು ಉಪ್ಪು ಅಥವಾ ಸೈಂಧವ ಉಪ್ಪು ಸೇರಿಸಿ ಅದರೊಂದಿಗೆ ಕರಿಮೆಣಸಿನ ಪುಡಿ ಮಿಶ್ರಣ ಮಾಡಿ ಆ ರಸವನ್ನು ಸೇವಿಸಿದ್ರೆ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.

ಎಲ್ಲರಿಗು ನೈಸರ್ಗಿಕವಾಗಿ ಸುಲಭವಾಗಿ ಸಿಗುವಂತ ತುಳಸಿ ಬಳಸಿ ಕಫ ನಿವಾರಣೆ ಮಾಡಿಕೊಳ್ಳಬಹುದು, ಒಂದು ಕಪ್ ನೀರಿಗೆ 5-6 ತುಳಸಿ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿ. ದಿನಕ್ಕೆ 2-3 ಬಾರಿ ಸೇವನೆ ಮಾಡುವುದರಿಂದ ಕಫ ನಿವಾರಣೆಯಾಗುತ್ತದೆ.

ಅರಿಶಿನ ಪುಡಿಯನ್ನು ಒಂದು ಗ್ಲಾಸ್ ಹಾಲಿನಲ್ಲಿ ಹಾಕಿ ಬೆಳಗ್ಗೆ ರಾತ್ರಿ ಸೇವಿಸುವುದರಿಂದ, ಕಫ ನಿವಾರಣೆ ಮಾಡಿಕೊಳ್ಳಬಹುದಾಗಿದೆ.

ಕಫ ಕರಗಲು ಹಸಿ ಶುಂಠಿ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ 3 - 4 ಬಾರಿ ಸೇವಿಸಿ. ಇದರಿಂದ ಶೀಘ್ರದ ಕಫ ಕರಗುವುದು.