- Kannada News Photo gallery Cricket photos Ranji trophy 2022 Yashasvi Jaiswal raises bat after scoring 1st run on 54th ball
Ranji Trophy: ಪೂಜಾರ 2.0; ಬರೋಬ್ಬರಿ 54 ಎಸೆತಗಳ ನಂತರ ಖಾತೆ ತೆರೆದ ಐಪಿಎಲ್ನ ಸ್ಟಾರ್ ಓಪನರ್..!
Ranji Trophy: ಪೃಥ್ವಿ 56 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 21ನೇ ಓವರ್‌ನಲ್ಲಿ 71 ಎಸೆತಗಳಲ್ಲಿ 64 ರನ್ ಗಳಿಸಿ ಔಟಾಗುವವರೆಗೂ ಯಶಸ್ವಿ ಖಾತೆ ತೆರೆದಿರಲಿಲ್ಲ.
Updated on: Jun 17, 2022 | 8:30 AM

ಮುಂಬೈ ಮತ್ತು ಉತ್ತರ ಪ್ರದೇಶ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಅಭಿಮಾನಿಗಳು ವಿಚಿತ್ರ ದೃಶ್ಯವನ್ನು ನೋಡಿದ್ದಾರೆ. ಮುಂಬೈ ಮತ್ತು ಉತ್ತರ ಪ್ರದೇಶ ನಡುವಿನ ಈ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮುಂಬೈನ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರು ತಮ್ಮ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ ಪೂಜಾರ ಮೋಡ್‌ನಲ್ಲಿ ಕಾಣಿಸಿಕೊಂಡರು. ಇದು ಸೊಶೀಯಲ್ ಮೀಡಿಯಾದಲ್ಲೂ ಸಖತ್ ಸುದ್ದಿ ಮಾಡುತ್ತಿದೆ. ಪೂಜಾರ ರಕ್ಷಣಾತ್ಮಕ ಆಟಕ್ಕೆ ಹೆಸರುವಾಸಿಯಾಗಿದ್ದು, ಖಾತೆ ತೆರೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಮುಂಬೈ ತಂಡ ಮೊದಲು ಬ್ಯಾಟಿಂಗ್ ಮಾಡಿ 308 ರನ್ ಗಳಿಸಿತು. ಇದಕ್ಕುತ್ತರವಾಗಿ ಉತ್ತರ ಪ್ರದೇಶದ ಮೊದಲ ಇನಿಂಗ್ಸ್ 180 ರನ್‌ಗಳಿಗೆ ಕುಸಿಯಿತು. ಇದಾದ ಬಳಿಕ ಮುಂಬೈ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಯಶಸ್ವಿ ಜೈಸ್ವಾಲ್ ಮತ್ತು ಪೃಥ್ವಿ ಶಾ ಬ್ಯಾಟಿಂಗ್‌ಗೆ ಇಳಿದರು. ಇಬ್ಬರೂ ಸಂಪೂರ್ಣವಾಗಿ ವಿಭಿನ್ನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು.

ಇನ್ನೋರ್ವ ಆರಂಭಿಕ ಆಟಗಾರ ಪೃಥ್ವಿ ಶಾ ಪ್ರಥಮ ದರ್ಜೆ ಪಂದ್ಯದಲ್ಲಿ ಟಿ20 ಮಾದರಿಯಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದರೆ, ಮತ್ತೊಂದೆಡೆ ಯಶಸ್ವಿ ಜೈಸ್ವಾಲ್ ಪೂಜಾರ ಅವರಂತೆ ರಕ್ಷಣಾತ್ಮಕವಾಗಿ ಆಡುತ್ತಿದ್ದರು. ಪೃಥ್ವಿ 56 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 21ನೇ ಓವರ್‌ನಲ್ಲಿ 71 ಎಸೆತಗಳಲ್ಲಿ 64 ರನ್ ಗಳಿಸಿ ಔಟಾಗುವವರೆಗೂ ಯಶಸ್ವಿ ಖಾತೆ ತೆರೆದಿರಲಿಲ್ಲ.

ಯಶಸ್ವಿ ಇನ್ನಿಂಗ್ಸ್‌ನ 54 ನೇ ಎಸೆತದಲ್ಲಿ ಬೌಂಡರಿ ಬಾರಿಸಿದರು ಮತ್ತು ಸುದೀರ್ಘ ಕಾಯುವಿಕೆಯ ನಂತರ ಅಂತಿಮವಾಗಿ ತಮ್ಮ ಖಾತೆಯನ್ನು ತೆರೆದರು. ಮುಂಬೈನ ಡಗೌಟ್‌ನಲ್ಲಿ ಕುಳಿತ ಆಟಗಾರರು ಬೌಂಡರಿ ಬಾರಿಸುತ್ತಲೇ ಚಪ್ಪಾಳೆ ತಟ್ಟಲಾರಂಭಿಸಿದರು. ಬೌಂಡರಿ ಬಾರಿಸಿದ ನಂತರ, ಜೈಸ್ವಾಲ್ ಅರ್ಧಶತಕ ಅಥವಾ ಶತಕದ ನಂತರ ಮಾಡುವ ರೀತಿಯಲ್ಲಿಯೇ ಗಾಳಿಯಲ್ಲಿ ಬ್ಯಾಟ್ ಬೀಸಿದರು.

ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಯಶಸ್ವಿ ಶತಕ ಸಿಡಿಸಿದ್ದರು. ಬೌಂಡರಿ ಬಾರಿಸಿದ ತಕ್ಷಣ ಅವರ ಗೇರ್ ಬದಲಾಯಿತು ಮತ್ತು ಮೂರನೇ ದಿನದಾಟದ ಅಂತ್ಯಕ್ಕೆ 114 ಎಸೆತಗಳಲ್ಲಿ 35 ರನ್ ಗಳಿಸಿದರು. 53 ಎಸೆತಗಳಲ್ಲಿ ಖಾತೆ ತೆರೆಯಲು ವಿಫಲರಾದ ಜೈಸ್ವಾಲ್ ನಂತರದ 61 ಎಸೆತಗಳಲ್ಲಿ 35 ರನ್ ಗಳಿಸಿದರು.



















