Health News: ಈ ಮೂರು ಸಂದರ್ಭಗಳಲ್ಲಿ ನೀರು ಕುಡಿಯಬಾರದು, ಯಾಕೆ? ಇಲ್ಲಿದೆ ಮಾಹಿತಿ
ದೇಹದ ಆರೋಗ್ಯಕ್ಕೆ ಆಹಾರ ಮಾತ್ರವಲ್ಲದೆ, ನೀರು ಕೂಡ ಅತೀ ಅವಶ್ಯಕ. ಚಯಾಪಚಯ ಕ್ರಿಯೆಯ ನಿರ್ವಹಣೆಯಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ದಿನಕ್ಕೆ 2 ಲೀಟರ್ ನೀರನ್ನು ಕುಡಿಯಲು ತಜ್ಞರು ಸಲಹೆ ನೀಡುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ನೀರನ್ನು ಕುಡಿಯಬಾರದು ಎಂದು ಅವರು ಎಚ್ಚರಿಸುತ್ತಾರೆ.
1 / 5
ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನಕ್ಕೆ ಕನಿಷ್ಠ 2 ಲೀಟರ್ ಶುದ್ಧ ನೀರನ್ನು ಕುಡಿಯುವುದು ಅತ್ಯಗತ್ಯ. ಆದರೆ ಈ ಮೂರು ಸಂದರ್ಭಗಳಲ್ಲಿ ನೀರು ಕುಡಿಯಬೇಡಿ. ಆ ಮೂರು ಸಂದರ್ಭಗಳು ಯಾವುವು ಎಂದು ನೋಡೋಣ.
2 / 5
ಮಲಗುವ ಮುನ್ನ: ತಜ್ಞರ ಪ್ರಕಾರ ಮಲಗುವ ಮುನ್ನ ನೀರು ಕುಡಿಯಬಾರದು. ಏಕೆಂದರೆ, ರಾತ್ರಿಯಲ್ಲಿ ಮೂತ್ರಪಿಂಡದ ಕಾರ್ಯವು ನಿಧಾನಗೊಳ್ಳುತ್ತದೆ. ಈ ಸಮಯದಲ್ಲಿ ದೇಹದಲ್ಲಿ ಹೆಚ್ಚು ನೀರು ಇದ್ದರೆ ಮುಖ ಊದಿಕೊಳ್ಳುವ ಸಾಧ್ಯತೆ ಇರುತ್ತದೆ.
3 / 5
ವ್ಯಾಯಾಮ: ವ್ಯಾಯಾಮದ ಸಮಯದಲ್ಲಿ ದೇಹದ ಉಷ್ಣತೆಯು ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀರು ಕುಡಿದರೆ, ದೇಹದ ಉಷ್ಣತೆಯಲ್ಲಿ ಹಠಾತ್ ಬದಲಾವಣೆಗಳು ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಂಭವ ಇರುತ್ತದೆ. ಆದ್ದರಿಂದ ವ್ಯಾಯಾಮದ ನಂತರ 20-25 ನಿಮಿಷಗಳ ಕಾಲ ನೀರು ಕುಡಿಯಬೇಡಿ.
4 / 5
ಊಟದ ಸಮಯ: ಊಟಕ್ಕೆ ಅರ್ಧ ಗಂಟೆ ಮೊದಲು ಶುದ್ಧ ನೀರು ಕುಡಿಯಿರಿ. ಇಲ್ಲವಾದರೆ ದೇಹದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪರಿಣಾಮವಾಗಿ, ಕರುಳಿನ ಕಾರ್ಯವು ನಿಧಾನಗೊಳ್ಳುತ್ತದೆ ಮತ್ತು ಆರೋಗ್ಯ ಸಮಸ್ಯೆಗಳ ಅಪಾಯವಿದೆ. ಊಟವಾದ ತಕ್ಷಣ ನೀರು ಕುಡಿಯಬೇಡಿ, ಕೆಲವು ನಿಮಿಷಗಳ ನಂತರ ಕುಡಿಯುವುದು ಉತ್ತಮ.
5 / 5
ದೇಹದ ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯುವುದು ಕೂಡ ಒಳ್ಳೆಯದಲ್ಲ. ಹೆಚ್ಚು ನೀರು ಕುಡಿಯುವುದರಿಂದ ಉಬ್ಬುವುದು, ಜೀರ್ಣಕ್ರಿಯೆ ಸಮಸ್ಯೆಗಳು ಮತ್ತು ಮೂತ್ರಪಿಂಡದ ಕಾರ್ಯನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಇತ್ಯಾದಿಗಳು ಉಂಟಾಗಬಹುದು.
Published On - 8:39 pm, Fri, 4 August 23