Pineapple for health: ಬೇಸಿಗೆಯಲ್ಲಿ ಅನಾನಸ್ ಜ್ಯೂಸ್ ಸೇವಿಸಿದರೆ ಏನೆಲ್ಲಾ ಪ್ರಯೋಜನಗಳಿವೆ? ಇಲ್ಲಿದೆ ನೋಡಿ

|

Updated on: Mar 27, 2022 | 2:09 PM

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಹೆಚ್ಚಿನವರು ಜ್ಯೂಸ್ ಸೇವಿಸಲು ಇಷ್ಟಪಡುತ್ತಾರೆ. ಈ ಸಮಯದಲ್ಲಿ ನೀವು ಅನೇಕ ರೀತಿಯ ಜ್ಯೂಸ್‌ಗಳನ್ನು ತಯಾರಿಸಬಹುದು ಮತ್ತು ಕುಡಿಯಬಹುದು. ಅದರಲ್ಲಿ ಅನಾನಸ್ ಜ್ಯೂಸ್ ಕೂಡ ಒಂದು. ಬೇಸಿಗೆಯಲ್ಲಿ ಈ ಜ್ಯೂಸ್ ಕುಡಿಯುವುದರಿಂದ ಹೃದಯ ಸಂಬಂಧಿ ಖಾಯಿಲೆಗಳನ್ನು ದೂರವಿಡಲು, ಒಳ್ಳೆಯ ಜೀರ್ಣ ವ್ಯವಸ್ಥೆ ಹೊಂದಲು, ತೂಕ ಕಳೆದುಕೊಳ್ಳು ಸಹಕಾರಿ. ಜತೆಗೆ ಮೂಳೆಗಳು, ಹಲ್ಲುಗಳು ಕೂಡ ಬಲಿಷ್ಠವಾಗುತ್ತವೆ.

1 / 6
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಹೆಚ್ಚಿನವರು ಜ್ಯೂಸ್ ಸೇವಿಸಲು ಇಷ್ಟಪಡುತ್ತಾರೆ. ಈ ಸಮಯದಲ್ಲಿ ನೀವು ಅನೇಕ ರೀತಿಯ ಜ್ಯೂಸ್‌ಗಳನ್ನು ತಯಾರಿಸಬಹುದು ಮತ್ತು ಕುಡಿಯಬಹುದು. ಅದರಲ್ಲಿ ಅನಾನಸ್ ಜ್ಯೂಸ್ ಕೂಡ ಒಂದು. ಬೇಸಿಗೆಯಲ್ಲಿ ಈ ಜ್ಯೂಸ್ ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

2 / 6
ರಕ್ತದೊತ್ತಡ: ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡುವಲ್ಲಿ ವಿಟಮಿನ್ ಸಿ ಮತ್ತು ರೋಗ ನಿರೋಧಕಗಳು ಪ್ರಮುಖ ಪಾತ್ರವಹಿಸುತ್ತವೆ. ಅನಾನಸ್ ರಸದಲ್ಲಿ ಆ ಅಂಶಗಳಿರುತ್ತವೆ. ಆದ್ದರಿಂದ ಪ್ರತಿದಿನ ಮಧ್ಯಾಹ್ನ ಒಂದು ಲೋಟ ಅನಾನಸ್ ಜ್ಯೂಸ್ ಕುಡಿಯಿರಿ.

3 / 6
ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ: ಆಗಾಗ್ಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಅನಾನಸ್ ಜ್ಯೂಸ್ ಕುಡಿಯುವುದರಿಂದ ತಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಬಹುದು. ವಾಸ್ತವವಾಗಿ, ಇದರಲ್ಲಿರುವ ಫೈಬರ್ ಅಂಶವು ಹೊಟ್ಟೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಪರಿಣಾಮಕಾರಿಯಾಗಿದೆ.

4 / 6
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿ: ಅನಾನಸ್ ಜ್ಯೂಸ್‌ನ ಮತ್ತೊಂದು ವಿಶೇಷತೆ ಎಂದರೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ ಭರಿತ ಆಹಾರಗಳನ್ನು ಸೇವಿಸಬೇಕು ಮತ್ತು ಈ ಅಗತ್ಯ ವಿಟಮಿನ್ ಅನಾನಸ್‌ನಲ್ಲಿ ಅಗತ್ಯ ಪ್ರಮಾಣದಲ್ಲಿರುತ್ತದೆ.

5 / 6
ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ: ಬೇಸಿಗೆಯು ತೂಕ ಇಳಿಸಿಕೊಳ್ಳಲು ಉತ್ತಮ ಕಾಲ ಎಂದು ಹೇಳುತ್ತಾರೆ. ವರ್ಕ್ ಔಟ್ ಅಥವಾ ರನ್ನಿಂಗ್ ಜತೆಜತೆಗೆ ಆಹಾರದ ಬಗ್ಗೆ ಕಾಳಜಿ ವಹಿಸುವುದು ಸಹ ಮುಖ್ಯವಾಗಿದೆ. ಹೀಗಾಗಿ ಬೆಳಗಿನ ಉಪಾಹಾರವಾದ ಸುಮಾರು ಎರಡು ಗಂಟೆಗಳ ನಂತರ ಅನಾನಸ್ ಜ್ಯೂಸ್ ಕುಡಿಯುವುದರಿಂದ ನಿಮಗೆ ತೂಕ ಇಳಿಸಲು ಸಹಾಯವಾಗುತ್ತದೆ.

6 / 6
ಮೂಳೆಗಳನ್ನು ಶಕ್ತಿಯುತವಾಗಿಸುತ್ತದೆ: ಅನಾನಸ್ ಜ್ಯೂಸ್ ಮೂಳೆಗಳನ್ನು ಬಲಪಡಿಸಲು ಸಹ ಸಹಕಾರಿಯಾಗಿದೆ. ವಾಸ್ತವವಾಗಿ, ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂ ಅನಾನಸ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದನ್ನು ಸೇವಿಸುವುದರಿಂದ ಮೂಳೆಗಳಷ್ಟೇ ಅಲ್ಲದೇ ಹಲ್ಲುಗಳೂ ಬಲಿಷ್ಠವಾಗುತ್ತವೆ.

Published On - 2:08 pm, Sun, 27 March 22