ಚಿಕಾಗೋದ ಫೀಲ್ಡ್ ಮ್ಯೂಸಿಯಂನ ಕ್ಯುರೇಟರ್ ಡಾ. ಜಾನ್ ಬೇಟ್ಸ್ ಹೇಳುವಂತೆ, ಪಕ್ಷಿಗಳನ್ನು ಅರ್ಥಮಾಡಿಕೊಳ್ಳಲು ಮೊಟ್ಟೆಗಳನ್ನು ಸಂಗ್ರಹಿಸಿ- ಅಧ್ಯಯನ ಮಾಡುವುದು ಒಂದು ವಿಧಾನವಾಗಿದೆ. ಅದರ ಸಹಾಯದಿಂದ, ಪಕ್ಷಿಗಳ ಬಗ್ಗೆ ಅನೇಕ ಪ್ರಮುಖ ವಿಷಯಗಳನ್ನು ಕಂಡುಹಿಡಿಯಲಾಗಿದೆ. ಪ್ರಸ್ತುತ ಸಂಶೋಧನೆಯ ಸಮಯದಲ್ಲಿ, ಪಕ್ಷಿಗಳು 25 ದಿನಗಳ ಮುಂಚಿತವಾಗಿ ಮೊಟ್ಟೆಗಳನ್ನು ಇಡುತ್ತಿವೆ ಎಂದು ತಿಳಿದುಬಂದಿದೆ. ಈ ಪ್ರವೃತ್ತಿಯು ಸುಮಾರು ಮೂರನೇ ಒಂದು ಭಾಗದಷ್ಟು ಪಕ್ಷಿಗಳಲ್ಲಿ ಕಂಡುಬರುತ್ತದೆ.