
ಇತ್ತೀಚಿನ ದಿನಮಾನಗಳಲ್ಲಿ ಬಂಜೆತನ ಹೆಚ್ಚಾಗುತ್ತಿದ್ದು ಇದು ಕೇವಲ ಹೆಣ್ಣಿಗೆ ಮಾತ್ರ ಸಂಬಂಧ ಪಟ್ಟಿದ್ದಲ್ಲ. ಗಂಡ, ಹೆಂಡತಿ ಇಬ್ಬರ ಆರೋಗ್ಯದ ಮೇಲೂ ಅವಲಂಬಿತವಾಗಿರುತ್ತದೆ. ಆದರೆ ಬಂಜೆತನ ಹೆಚ್ಚುತ್ತಿರಲು ಕಾರಣವೇನು? ಹೇಗೆ ನಿಯಂತ್ರಿಸಬಹುದು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಅದಕ್ಕಿಂತ ಮೊದಲು, ಗಂಡ- ಹೆಂಡತಿ ಇಬ್ಬರು ದೈಹಿಕ ತಪಾಸಣೆ ಮಾಡಿಸಿ ಅದಕ್ಕೆ ಸಂಬಂಧ ಪಟ್ಟಂತೆ ಚಿಕಿತ್ಸೆ ಪಡೆಯಬೇಕು.

ಹೊರಗಿನ ಮತ್ತು ಪ್ಯಾಕೆಟ್ ಆಹಾರಗಳನ್ನು ಜೊತೆಗೆ ಕರಿದ ಆಹಾರ ಮತ್ತು ಸಕ್ಕರೆ ಸೇರಿಸಿದ ಆಹಾರಗಳ ಸೇವನೆ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ. ದಿನಕ್ಕೆ 1 ಹಣ್ಣು ಮತ್ತು 2 ಕಪ್ ನಷ್ಟು ಸೊಪ್ಪನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. 30 ನಿಮಿಷ ವ್ಯಾಯಾಮ ಅಥವಾ 1 ಗಂಟೆ ಯೋಗಾಭ್ಯಾಸವನ್ನು ತಪ್ಪದೆ ಮಾಡಿ.

ಮಹಿಳೆಯರು ಸೀಡ್ ಸೈಕ್ಲಿಂಗ್ ಮಾಡಿ (ಈ ಬಗ್ಗೆ ಯೌಟ್ಯೂಬ್ ಗಳಲ್ಲಿ ಮಾಹಿತಿ ದೊರೆಯುತ್ತದೆ. ಪುರುಷರು ದಿನಕ್ಕೆ 3 ವಾಲ್ ನಟ್ಸ್ ಸೇವಿಸಿ. ಗಂಡ- ಹೆಂಡತಿ ಇಬ್ಬರು ನಿಮ್ಮ ಮಾನಸಿಕ ಒತ್ತಡದ ಮೇಲೆ ಗಮನ ಹರಿಸಿ. ಏಕೆಂದರೆ ಇಬ್ಬರ ಪ್ರಯತ್ನ ತುಂಬಾ ಅಗತ್ಯವಾಗಿರುತ್ತದೆ.

ತಡವಾಗಿ ಮದುವೆ ಅಥವಾ ಮಕ್ಕಳ ಪ್ಲಾನಿಂಗ್ ಮಾಡುವುದು ಬಂಜೆತನಕ್ಕೆ ಕಾರಣವಲ್ಲ ಇದು ತಪ್ಪು ಕಲ್ಪನೆ. ಜೊತೆಗೆ ಬೊಜ್ಜು ಇದ್ದರೆ ಬಂಜೆತನ ಕಾಡುತ್ತದೆ ಎಂಬುದು ಸುಳ್ಳು. ಅಲ್ಲದೆ ದಾಂಪತ್ಯ ಕಲಹ, ಒತ್ತಡದಿಂದ ಬಂಜೆತನ ಉಂಟಾಗುತ್ತದೆ ಎಂಬುದು ಕೂಡ ತಪ್ಪು.

ಪುರುಷರಲ್ಲಿ ವೀರ್ಯಾಣು ಪ್ರಮಾಣ ಕುಸಿಯುವುದು ಅಥವಾ ಗುಣಮಟ್ಟದ ವೀರ್ಯ ಇಲ್ಲದೇ ಇರುವುದರಿಂದ ಮಕ್ಕಳಾಗದೇ ಇರಬಹುದು ಅಥವಾ ಫಲವತ್ತತೆಯ ಕೊರತೆಯು ಕಾರಣವಾಗಬಹುದು. ಹಾಗಾಗಿ ವೈದ್ಯರನ್ನು ಸಂಪರ್ಕಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.