Viral Photo: ಹುಡುಗಿ ಸಿಗದೇ ಕುಕ್ಕರನ್ನು ಮದುವೆಯಾದ ಯುವಕ
ಯುವಕನನ್ನು ಖೋಯಿರುಲ್ ಅನಮ್ ಎಂದು ಗುರುತಿಸಲಾಗಿದ್ದು, ಸಾಕಷ್ಟು ವರ್ಷಗಳಿಂದ ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದ. ಹುಡುಗಿ ಸಿಗದೇ ಬೇಸತ್ತು ಈಗ ಕುಕ್ಕರನ್ನೇ ತನ್ನ ಪತ್ನಿಯನ್ನಾಗಿ ಸ್ವೀಕರಿಸಿದ್ದಾನೆ. ಫೋಟೋ ಇಲ್ಲಿದೆ ನೋಡಿ.
Updated on:Aug 15, 2024 | 6:03 PM

ಇಂಡೋನೇಷ್ಯಾದ ಯುವಕನೊಬ್ಬನ ವಿಶಿಷ್ಟ ವಿವಾಹವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಸಲಿಗೆ, ಈ ಯುವಕ ಹುಡುಗಿಯನ್ನು ಮದುವೆಯಾಗಿಲ್ಲ ಆದರೆ ಕುಕ್ಕರ್ ಅನ್ನು ಮದುವೆಯಾಗಿದ್ದಾನೆ.

ಈ ಯುವಕನ ಮದುವೆಯ ಫೋಟೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಮಧುಮಗ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಕುಕ್ಕರ್ನ ಮೇಲ್ಭಾಗಕ್ಕೆ ಹುಡುಗಿಯಂತೆ ಶಾಲು ಹೊಂದಿಸಿ,ಮುತ್ತಿಡುತ್ತಿರುವುದು ಫೋಟೋದಲ್ಲಿ ಸೆರೆಯಾಗಿದೆ.

ಈ ಯುವಕ ಖೋಯಿರುಲ್ ಅನಮ್ ಎಂದು ಗುರುತಿಸಲಾಗಿದ್ದು, ಸಾಕಷ್ಟು ವರ್ಷಗಳಿಂದ ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದ. ಹುಡುಗಿ ಸಿಗದೇ ಬೇಸತ್ತು ಈಗ ಕುಕ್ಕರನ್ನೇ ತನ್ನ ಪತ್ನಿಯನ್ನಾಗಿ ಸ್ವೀಕರಿಸಿದ್ದಾನೆ.

ಕುಕ್ಕರ್ ತನಗೆ ಯಾವತ್ತೂ ಮೋಸ ಮಾಡಲ್ಲ. ಜೊತೆಗೆ ಅಡುಗೆಯಲ್ಲಿ ಪರಿಣಿತಳು' ಹಾಗಾಗಿ ಒಡನಾಡಿಯಾಗಿ ಆರಿಸಿಕೊಳ್ಳುತ್ತಿದ್ದೇನೆ ಎಂದು ಕುಕ್ಕರ್ ಜೊತೆ ಮದುವೆಯ ಬಗ್ಗೆ ಈತ ಹೇಳಿಕೊಂಡಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಆದರೆ ಮದುವೆಯಾಗಿ ನಾಲ್ಕೇ ದಿನದಲ್ಲಿ ಪತ್ನಿ ಅಂದರೆ ಕುಕ್ಕರ್ಗೆ ವಿಚ್ಛೇದನ ನೀಡಿರುವುದು ವರದಿಯಾಗಿದೆ. ನನ್ನ ಪತ್ನಿಗೆ ಅನ್ನ ಬೇಯಿಸುವುದು ಮಾತ್ರ ಸಾಧ್ಯ, ಬೇರೇನೂ ಗೊತ್ತಿಲ್ಲ, ಹೀಗಾಗಿ ವಿಚ್ಛೇದನ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಈತನ ಮದುವೆಯ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. "ಪ್ರಚಾರವನ್ನು ಪಡೆಯಲು ಕೆಲವರು ಹೇಗೆ ಅಸಾಮಾನ್ಯ ಮತ್ತು ವಿವಾದಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಈತ ಸಾಕ್ಷಿ." ಎಂದು ನೆಟ್ಟಿಗರೊಬ್ಬರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
Published On - 6:02 pm, Thu, 15 August 24




