
ಕೆಲವರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ಹೆಚ್ಚು ಮೆಣಸು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ದುಷ್ಪರಿಣಾಮವನ್ನು ಉಂಟುಮಾಡುತ್ತದೆ.

ಗರ್ಭಾವಸ್ಥೆಯಲ್ಲಿ ಹಾನಿ: ನೀವು ಗರ್ಭಿಣಿಯಾಗಿದ್ದರೆ, ನೀವು ಒಣ/ ಹೆಚ್ಚು ತಾಪ ಬೀರುವ ಯಾವುದನ್ನೂ ತಿನ್ನಬಾರದು. ಕಾಳುಮೆಣಸನ್ನು ಅತಿಯಾಗಿ ತಿನ್ನುವುದರಿಂದ ಹಾಲುಣಿಸುವಲ್ಲಿ ತೊಂದರೆ ಉಂಟಾಗುತ್ತದೆ. ಇದರಿಂದ ಹಾಲು ಕುಡಿಸುವುದರಿಂದ ಮಕ್ಕಳು ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ.

ಹೊಟ್ಟೆ ಹುಣ್ಣು: ಕಾಳುಮೆಣಸನ್ನು ಹೆಚ್ಚು ತಿನ್ನುವವರು ಹೊಟ್ಟೆಯ ಸಮಸ್ಯೆಗೆ ತುತ್ತಾಗುತ್ತಾರೆ. ಇದು ಹೊಟ್ಟೆಯ ಹುಣ್ಣುಗಳನ್ನು ಉಂಟುಮಾಡುತ್ತದೆ. ಈ ಮೆಣಸು ಮಸಾಲೆಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಉತ್ತಮ ಎನ್ನುತ್ತಾರೆ ಆಹಾರ ತಜ್ಞರು. ಅತಿಯಾದರೆ ಅಮೃತವೂ ವಿಷವಾಗುತ್ತದೆ ಅಲ್ಲವೇ!?

ಚರ್ಮದ ಕಾಯಿಲೆ: ಪ್ರತಿಯೊಬ್ಬರೂ ತಮ್ಮ ಚರ್ಮವು ಸುಂದರವಾಗಿ ಮತ್ತು ಹೊಳಪಿನಿಂದ ಕಂಗೊಳಿಸಬೇಕೆಂದು ಬಯಸುತ್ತಾರೆ. ಇದಕ್ಕಾಗಿ ತ್ವಚೆಯಲ್ಲಿ ತೇವಾಂಶ ಉಳಿಯದಂತೆ ನೋಡಿಕೊಳ್ಳಬೇಕು. ಮೆಣಸಿನ ಒಣ/ಬಿಸಿ ಪರಿಣಾಮಬೀರುತ್ತದೆ. ಆದ್ದರಿಂದ, ಇದು ಹೆಚ್ಚು ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ತುರಿಕೆ, ಉರಿ, ದದ್ದುಗಳಂತಹ ತೊಂದರೆಗಳು ಉಂಟಾಗುತ್ತವೆ.

ಉಸಿರಾಟದ ತೊಂದರೆ: ನೀವು ಹೆಚ್ಚು ಕರಿಮೆಣಸನ್ನು ಸೇವಿಸಿದರೆ ಉಸಿರಾಟದ ತೊಂದರೆ ಅನುಭವಿಸಬಹುದು. ಏಕೆಂದರೆ ಇದು ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ, ಆಮ್ಲಜನಕದ ಕೊರತೆ ಎದುರಾಗುತ್ತದೆ. ಹೀಗಾಗಿ ನೆಮ್ಮದಿಯಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ.
Published On - 7:59 am, Tue, 11 July 23