- Kannada News Photo gallery Ramya Divya Spandana all set to appear on big screen with Hostel Hudugaru Bekagiddare
Hostel Hudugaru Bekagiddare: ‘ಏನ್ ಬೇಕಾದ್ರು ನಡೆಯುತ್ತೆ’; ಹಾಸ್ಟೆಲ್ ಹುಡುಗರ ಜೊತೆ ಮಿಂಚುತ್ತಿರುವ ನಟಿ ರಮ್ಯಾ
Ramya Divya Spandana: ರಮ್ಯಾ ಅವರು ಮತ್ತೆ ಬಿಗ್ ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ‘ಇದು ಫ್ಯಾಂಟಸಿ ಅಲ್ವಾ.. ಏನ್ ಬೇಕಾದ್ರೂ ನಡೆಯುತ್ತೆ’ ಎಂಬ ಡೈಲಾಗ್ ಮೂಲಕ ಅವರು ಕೌತುಕ ಮೂಡಿಸಿದ್ದಾರೆ.
Updated on: Jul 10, 2023 | 10:49 PM

ಖ್ಯಾತ ನಟಿ ರಮ್ಯಾ ದಿವ್ಯ ಸ್ಪಂದನಾ ಅವರು ಹಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದುಕೊಂಡಿದ್ದರು. ಈಗ ಅವರು ಮತ್ತೆ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ರಮ್ಯಾ ಅವರು ನಟಿಸಿದ್ದಾರೆ ಎಂಬುದು ವಿಶೇಷ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ಪ್ರೋಮೋಗಳಿಂದಲೇ ಹೈಪ್ ಹೆಚ್ಚಿಸಿದ ಈ ಸಿನಿಮಾದಲ್ಲಿ ರಮ್ಯಾ ಅವರು ಒಂದು ಪಾತ್ರ ಮಾಡಿದ್ದಾರೆ. ಚಿತ್ರದ ಟ್ರೇಲರ್ನಲ್ಲಿ ಕಾಣಿಸಿಕೊಂಡು ಅವರು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದಾರೆ.

‘ಇದು ಫ್ಯಾಂಟಸಿ ಅಲ್ವಾ.. ಏನ್ ಬೇಕಾದ್ರೂ ನಡೆಯುತ್ತೆ’ ಎಂಬ ಡೈಲಾಗ್ ಹೇಳುವ ಮೂಲಕ ರಮ್ಯಾ ಅವರು ಕೌತುಕ ಮೂಡಿಸಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಲು ಫ್ಯಾನ್ಸ್ ಕಾದಿದ್ದಾರೆ.

ಜುಲೈ 21ರಂದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದಾರೆ. ಅನೇಕ ಹೊಸ ಕಲಾವಿದರು ಬಣ್ಣ ಹಚ್ಚಿದ್ದಾರೆ.

ರಿಷಬ್ ಶೆಟ್ಟಿ, ಪವನ್ ಕುಮಾರ್, ದಿಗಂತ್ ಮಂಚಾಲೆ ಕೂಡ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಆ ಕಾರಣದಿಂದಲೂ ನಿರೀಕ್ಷೆ ಸೃಷ್ಟಿ ಆಗಿದೆ.

ಸೋಮವಾರ (ಜಲೈ 10) ಬೆಂಗಳೂರಿನಲ್ಲಿ ಅದ್ದೂರಿಯಾಗಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಧ್ರುವ ಸರ್ಜಾ, ಅಶ್ವಿನಿ ಪುನೀತ್ ರಾಜ್ಕುಮಾರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಟ್ರೇಲರ್ ಅನಾವರಣ ಆಗಿದೆ.




