Ostrich Facts: ಜಗತ್ತಿನಲ್ಲಿ ವೇಗವಾಗಿ ಓಡುವ ಪಕ್ಷಿ ಇದು! ಇಲ್ಲಿದೆ ಆಸ್ಟ್ರಿಚ್ ಕುರಿತ ಅಚ್ಚರಿಯ ವಿಚಾರಗಳು
Ostrich Details: ಆಸ್ಟ್ರಿಚ್ ವಿಶ್ವದ ಅತ್ಯಂತ ವೇಗವಾಗಿ ಓಡುವ ಪಕ್ಷಿಯಾಗಿದೆ. ಗಾಳಿಯಲ್ಲಿ ಹಾರಲು ಸಾಧ್ಯವಾಗದಿದ್ದರೂ ಜಿಗಿಯುವ ಮೂಲಕ 3 ರಿಂದ 5 ಮೀಟರ್ ದೂರವನ್ನು ಕ್ರಮಿಸಬಲ್ಲದು. ಇದರ ಮೊಟ್ಟೆಯನ್ನು ಎರಡು ಕೈಗಳಲ್ಲಿ ಹಿಡಿಯುವಷ್ಟು ದೊಡ್ಡದಾಗಿರುತ್ತದೆ. ಅತ್ಯಂತ ದೊಡ್ಡ ಕಣ್ಣುಗಳನ್ನೂ ಇವು ಹೊಂದಿವೆ.
1 / 5
ಆಸ್ಟ್ರಿಚ್ ವಿಶ್ವದ ಅತ್ಯಂತ ವೇಗವಾಗಿ ಓಡುವ ಪಕ್ಷಿಯಾಗಿದೆ. ಗಾಳಿಯಲ್ಲಿ ಹಾರಲು ಸಾಧ್ಯವಾಗದಿದ್ದರೂ ಜಿಗಿಯುವ ಮೂಲಕ 3 ರಿಂದ 5 ಮೀಟರ್ ದೂರವನ್ನು ಒಂದೇ ಕ್ಷಣಕ್ಕೆ ಕ್ರಮಿಸಬಲ್ಲದು. ಇದು ತುಂಬಾ ವೇಗವಾಗಿ ಓಡುತ್ತದೆ. ಗಂಟೆಗೆ ಸರಾಸರಿ 75 ಕಿಲೋಮೀಟರ್ ವೇಗದಲ್ಲಿ ಇದು ಕ್ರಮಿಸುತ್ತದೆ ಎಂದರೆ ನಿಮಗೆ ಅಚ್ಚರಿಯಾಗಲೇಬೇಕು!
2 / 5
ಬ್ರಿಟಿಷ್ ಮೂಲದ ಅಧ್ಯಯನ ವರದಿಗಳ ಪ್ರಕಾರ, ಆಸ್ಟ್ರಿಚ್ ವಿಶ್ವದ ಅತಿದೊಡ್ಡ ಮೊಟ್ಟೆಯನ್ನು ಇಡುತ್ತದೆ. ಇದರ ಮೊಟ್ಟೆಯು 6 ಇಂಚು ಉದ್ದ ಮತ್ತು 5 ಮೀಟರ್ ವ್ಯಾಸವನ್ನು ಹೊಂದಿದೆ. ಈ ಮೊಟ್ಟೆ ಎಷ್ಟು ದೊಡ್ಡದಿರುತ್ತದೆಂದರೆ ಅದನ್ನು ಎರಡು ಕೈಗಳಲ್ಲಿ ಹಿಡಿಯಬೇಕು!
3 / 5
ನ್ಯಾಷನಲ್ ಜಿಯಾಗ್ರಫಿಕ್ ವರದಿಯ ಪ್ರಕಾರ, ಆಸ್ಟ್ರಿಚ್ ಅತ್ಯಂತ ಎತ್ತರದ ಮತ್ತು ಭಾರವಾದ ಪಕ್ಷಿಯಾಗಿದೆ. ಗಂಡು ಆಸ್ಟ್ರಿಚ್ 9 ಅಡಿ ಉದ್ದ ಬೆಳೆಯುತ್ತದೆ. ಹೆಣ್ಣು ಆಸ್ಟ್ರಿಚ್ 6 ಅಡಿಗಳವರೆಗೆ ಬೆಳೆಯುತ್ತದೆ. ಇದರ ತೂಕ 100 ರಿಂದ 150 ಕೆಜಿ ವರೆಗೆ ಇರುತ್ತದೆ. ಇದು ಸಸ್ಯಗಳು, ಕೀಟಗಳು ಮತ್ತು ಸಣ್ಣ ಜೀವಿಗಳನ್ನು ಮಾತ್ರ ತಿನ್ನುತ್ತದೆ.
4 / 5
ಹಾರದ ಆಸ್ಟ್ರಿಚ್ಗಳಿಗೆ ರೆಕ್ಕೆ ಏಕಿದೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಆಸ್ಟ್ರಿಚ್ ಪಕ್ಷಿಗಳಿಗೆ ಹಾರಲು ಸಾಧ್ಯವಾಗುವುದಿಲ್ಲ, ನಿಜ. ಆದರೆ ಅವುಗಳು ದಿಕ್ಕನ್ನು ಬದಲಾಯಿಸಲು ತಮ್ಮ ರೆಕ್ಕೆಗಳನ್ನು ಬಳಸುತ್ತದೆ. ಅಚ್ಚರಿಯ ವಿಷಯವೆಂದರೆ ಪಕ್ಷಿಗಳ ಪಾದಗಳು ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ಬೆರಳುಗಳನ್ನು ಹೊಂದಿರುತ್ತವೆ. ಆದರೆ ಆಸ್ಟ್ರಿಚ್ ಕೇವಲ 2 ಬೆರಳುಗಳನ್ನು ಹೊಂದಿದೆ. ಆಸ್ಟ್ರಿಚ್ ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳಿಗಿಂತ ದೊಡ್ಡ ಕಣ್ಣುಗಳನ್ನು ಹೊಂದಿದೆ.
5 / 5
ಆಸ್ಟ್ರಿಚ್ ಅತ್ಯಂತ ಶಾಂತ ಪಕ್ಷಿ. ಆದರೆ ಆತ್ಮರಕ್ಷಣೆಯ ವಿಷಯಕ್ಕೆ ಬಂದಾಗ ಅದು ತನ್ನ ಕಾಲುಗಳನ್ನು ಬಳಸುತ್ತದೆ. ಇದರ ಉದ್ದವಾದ ಕಾಲುಗಳು ತುಂಬಾ ಶಕ್ತಿಯುತವಾಗಿವೆ. ಅವು ಎಷ್ಟು ಬಲಶಾಲಿಯೆಂದರೆ ಒಂದೇ ಏಟಿಗೆ ಮನುಷ್ಯ ಸಾಯಲೂಬಹುದು.