Kannada News Photo gallery Here Is List Who BJP senior leaders demands Ticket for His Son ahead of Karnataka Assembly Elections 2023
Karnataka Polls 2023: ಈ ಬಾರಿ ತಮ್ಮ ಪುತ್ರರಿಗೆ ಟಿಕೆಟ್ ಕೇಳಿದ ಬಿಜೆಪಿ ನಾಯಕರು ಯಾರ‍್ಯಾರು? ಇಲ್ಲಿದೆ ಪಟ್ಟಿ
ಯಾರಿಗೆ ಕೊಡಬೇಕು? ಯಾರಿಗೆ ಕೊಡಬಾರದು.? ಬಂಡಾಯ ಶಮನ ಮಾಡುವುದು ಹೇಗೆ? ಸರ್ವೆ ರಿಪೋರ್ಟ್ ಏನ್ ಹೇಳುತ್ತೆ? ಹೀಗೆ ಎಲ್ಲವನ್ನೂ ಅಳೆದು ತೂಗಿ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸಿದೆ. ಇನ್ನು ವಯಸ್ಸಾದ ಕೆಲ ನಾಯಕರಿಗೆ ಕೊಕ್ ನೀಡಲಾಗುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಕೆಲ ನಾಯಕರು ತಮಗೆ ಬೇಡ ತಮ್ಮ ಮಕ್ಕಳಿಗಾದರೂ ಕೊಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ತಮ್ಮ ಜಿತೆ ತಮ್ಮ ಪುತ್ರನಿಗೂ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಹಾಗಾದ್ರೆ, ಜೆಪಿಯಲ್ಲಿ ಪುತ್ರರಿಗೆ ಟಿಕೆಟ್ ಕೇಳಿದ ನಾಯಕರು ಯಾರ‍್ಯಾರು ಎನ್ನುವ ಪಟ್ಟಿ ಈ ಕೆಳಗಿನಂತಿದೆ ನೋಡಿ.
1 / 9
ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು ಈಗಾಗಲೇ ಚುನಾವಣೆ ಸ್ಪರ್ಧೆ ಮಾಡಲ್ಲ ಎಂದು ಘೋಷಿಸಿದ್ದಾರೆ. ಬದಲಿಗೆ ಶಿಕಾರಿಪುರ ಟಿಕೆಟ್ ತಮ್ಮ ಪುತ್ರ ಬಿವೈ ವಿಜಯೇಂದ್ರಗೆ ನೀಡುವಂತೆ ಈಗಾಗಲೇ ಬೇಡಿಕೆ ಇಟ್ಟಿದ್ದು, ಇದಕ್ಕೆ ಕೈಕಮಾಂಡ್ ಸಹ ಪುರಸ್ಕರಿಸಿದೆ. ಹೀಗಾಗಿ ಈ ಬಾರಿ ವಿಜಯೇಂದ್ರ ತಮ್ಮ ತಂದೆ ಕ್ಷೇತ್ರವಾದ ಶಿಕಾರಿಪುರದಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.
2 / 9
ವಸತಿ ಸಚಿವ ವಿ ಸೋಮಣ್ಣ ಸಹ ತಮ್ಮ ಪುತ್ರ ಡಾ. ಅರುಣ್ ಸೋಮಣ್ಣಗೆ ಈ ಬಾರಿ ಗುಬ್ಬಿ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಹೈಕಮಾಂಡ್ಗೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಸೋಮಣ್ಣ ಅವರು ಅಮಿತ್ ಶಾ ಸೇರಿದಂತೆ ಕೆಲ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಆದ್ರೆ, ಡಾ. ಅರುಣ್ ಸೋಮಣ್ಣgಎ ಗುಬ್ಬಿ ಕ್ಷೇತ್ರದ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ.
3 / 9
ಇನ್ನು ಮಾಜಿ ಸಚಿವ, ಹಾಲಿ ಶಿವಮೊಗ್ಗ ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಅವರ ವಯಸ್ಸು ಹಾಗೂ ಅವರ ಮೇಲಿನ ಕೆಲ ಆರೋಪಗಳಿಂದಾಗಿ ಅವರಿಗೆ ಟಿಕೆಟ್ ಕಟ್ ಆಗುವ ಸಾಧ್ಯತೆಗಳಿವೆ. ಇದರಿಂದ ಶಿವಮೊಗ್ಗ ಕ್ಷೇತ್ರದ ಟಿಕೆಟ್ ತಮ್ಮ ಪುತ್ರ ಕಾಂತೇಶ್ ಅವರಿಗಾದರೂ ಕೊಡಿ ಎಂದು ಮನವಿ ಮಾಡಿದ್ದಾರೆ. ಹೈಕಮಾಂಡ್ ಮಣೆ ಹಾಕುತ್ತೋ ಎಂದು ಕಾದುನೋಡಬೇಕಿದೆ.
4 / 9
ದಾವಣಗೆರೆ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಸಹ ದಾವಣಗೆರೆ ಉತ್ತರ ಕ್ಷೇತ್ರದ ಟಿಕೆಟ್ ತಮ್ಮ ಪುತ್ರ ಜಿ.ಎಸ್. ಅನಿತ್ಗೆ ನೀಡುವಂತೆ ಮನವಿ ಮಾಡಿದ್ದಾರೆ. ಹಾಲಿ ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ. ಅವರು ಈ ಬಾರಿ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಟಿಕೆಟ್ ತಮ್ಮ ಮಗನಿಗೆ ಕೊಡಿ ಎಂದು ಸಿದ್ದೇಶ್ವರ್ ಅರ್ಜಿ ಹಾಕಿದ್ದಾರೆ.
5 / 9
ಇನ್ನು ಸಚಿವ ಎಂಟಿಬಿ ನಾಗರಾಜ್ ಸಹ ತಮ್ಮ ಪುತ್ರ ನಿತೀಶ್ ಪುರುಷೊತ್ತಮ್ಗೆ ಹೊಸಕೋಟೆ ವಿಧಾನಸಭೆ ಕ್ಷೇತ್ರದ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಶರತ್ ಬಚ್ಚೇಗೌಡ ವಿರುದ್ಧ ಸೋಲುಕಂಡಿದ್ದ ಎಂಟಿಬಿ ನಾಗರಾಜ್ ಅವರನ್ನು ವಿಧಾನಪರಿಷತ್ ಮೂಲಕ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ಸಿಗುವುದು ಅನುಮಾನವಾಗಿದ್ದರಿಂದ ತಮ್ಮ ಮಗನಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ.
6 / 9
ಇನ್ನು ಮತ್ತೋರ್ವ ಬಿಜೆಪಿ ಶಾಸಕ ಜಿಹೆಚ್ ತಿಪ್ಪಾರೆಡ್ಡಿ ಅವರು ಕೂಡ ಈ ಬಾರಿ ಚಿತ್ರದುರ್ಗ ಕ್ಷೇತ್ರದ ಟಿಕೆಟ್ ತಮ್ಮ ಪುತ್ರ ಡಾ. ಸಿದ್ಧಾರ್ಥ್ ಅವರಿಗೆ ನೀಡುವಂತೆ ಹೈಕಮಾಂಡ್ ಬಳಿಕ ಹೇಳಿಕೊಂಡಿದ್ದಾರೆ. ತಿಪ್ಪಾರೆಡ್ಡಿ ಅವರಿಗೆ ವಯಸ್ಸಾದ ಕಾರಣ ಈ ಬಾರಿ ಟಿಕೆಟ್ ಕೈತಪ್ಪುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ತಿಪ್ಪಾರೆಡ್ಡಿ ತಮ್ಮ ಪುತ್ರನಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ.
7 / 9
ಹುಕ್ಕೇರಿ ಬಿಜೆಪಿ ಟಿಕೆಟ್ ತಮಗೆ ನೀಡವೇಕೆಂದು ದಿ. ಉಮೇಶ್ ಕತ್ತಿ ಕುಟುಂಬ ಒತ್ತಾಯಿಸಿದೆ. ಬಿಜೆಪಿ ಹಿರಿಯ ನಾಯಕರಾಗಿದ್ದ ಉಮೇಶ್ ಕತ್ತಿ ಅಕಾಲಿಕ ಮರಣ ಹೊಂದಿದ್ದರಿಂದ ಈ ಬಾರಿ ಹುಕ್ಕೇರಿ ಟಿಕೆಟ್ ತಮ್ಮ ಕುಟುಂಬಕ್ಕೆ ಬೇಕೆಂದು ಪಟ್ಟು ಹಿಡಿದಿದ್ದಾರೆ.
8 / 9
ಸವದತ್ತಿ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಆನಂದ್ ಮಾಮನಿ ಅವರು ಅನಾರೋಗ್ಯ ಕಾರಣದಿಂದ ನಿಧನರಾಗಿದ್ದು, ಈ ಬಾರಿ ಸವದತ್ತಿ ಟಿಕೆಟ್ ನಮ್ಮ ಕುಟುಂಬಕ್ಕೆ ನೀಡಬೇಕೆಂದು ಆನಂದ್ ಮಾಮನಿ ಫ್ಯಾಮಿಲಿ ಮನವಿ ಮಾಡಿದೆ.
9 / 9
ಮೇಲಿನವರು ತಮ್ಮ ಮಕ್ಕಳಿಗೆ ಹಾಗೂ ಕುಟುಂಬಕ್ಕೆ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಆದ್ರೆ, ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಾ ಬಂದಿರುವ ಬಿಜೆಪಿ ಹೈಕಮಾಂಡ್ ಕೆಲವರನ್ನು ಹೊರತುಪಡಿಸಿ ಇನ್ನುಳಿದವರಿಗೆ ಮಣೆ ಹಾಕುವುದು ಅನುಮಾನ,
Published On - 12:56 pm, Mon, 10 April 23