Tech Tips: ನಿಮ್ಮ ವಾಟ್ಸ್​ಆ್ಯಪ್ ಮೆಸೇಜ್ ಅನ್ನು ಬೇರೆಯವರು ಕದ್ದು ಓದುತ್ತಿರಬಹುದು: ತಿಳಿಯುವುದು ಹೇಗೆ?

|

Updated on: Jul 18, 2023 | 4:37 PM

WhatsApp Tricks: ಹ್ಯಾಕ್ ಆದ ವಾಟ್ಸ್​ಆ್ಯಪ್​​ ಕೆಲವೊಮ್ಮೆ ದುರುಪಯೋಗ ಕೂಡಾ ಆಗಬಹುದು. ಹೀಗಾಗಿ ಬಳಕೆದಾರರ ವಾಟ್ಸ್​ಆ್ಯಪ್​​ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ/ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯುವುದು ಮುಖ್ಯ.

1 / 7
ಮೆಟಾ ಒಡೆತನದ ವಾಟ್ಸ್​ಆ್ಯಪ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್​ಗಳನ್ನು ಪರಿಚಯಿಸಿ ಪ್ರಸಿದ್ಧಿ ಪಡೆದುಕೊಂಡಿದೆ. ಇನ್ನೂ ಸಾಲು ಸಾಲು ಅಪ್ಡೇಟ್​ಗಳು ಬರಲು ತಯಾರಾಗಿದೆ.

2 / 7
ಇದರ ನಡುವೆ ಬಳಕೆದಾರರ ಖಾತೆ ಸುರಕ್ಷತೆಗೆ ಕೆಲವು ಫೀಚರ್ಸ್‌ ಇದ್ದರೂ ಕೆಲವೊಮ್ಮೆ ವಾಟ್ಸ್​ಆ್ಯಪ್​​ ಹ್ಯಾಕ್‌ ಆಗುವ ಸಾಧ್ಯತೆಗಳು ಇರುತ್ತವೆ. ಅನೇಕ ಬಾರಿ ಬಳಕೆದಾರರಿಗೆ ಗೊತ್ತಿಲ್ಲದೇ ಅವರ ವಾಟ್ಸ್​ಆ್ಯಪ್​​ ಚಾಟ್ ಅನ್ನು ಬೇರೆಯವರು ಜಾಲಾಡುವ ಸಾಧ್ಯತೆಗಳಿವೆ.

3 / 7
ವಾಟ್ಸ್​ಆ್ಯಪ್​​ ಖಾತೆಯನ್ನು ಇತರೆ ಡಿವೈಸ್‌ಗಳಲ್ಲಿ ಬಳಕೆ ಮಾಡಬಹುದಾಗಿದೆ. ಇದೊಂದು ಅನುಕೂಲಕರ ಫೀಚರ್ ಆಗಿದ್ದರೂ ಕೆಲವೊಮ್ಮೆ ಸಮಸ್ಯೆ ಎನಿಸಬಹುದು. ಕಂಪ್ಯೂಟರ್​ಗಳಲ್ಲಿಯೂ ಈಗೀಗ ವಾಟ್ಸ್​ಆ್ಯಪ್​​ ಬಳಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ನಮ್ಮ ಖಾತೆ ಎಲ್ಲಿ ಲಾಗಿನ್ ಆಗಿರುತ್ತದೆ ಎಂಬುದು ಅರಿವಿಗೆ ಬರುವುದಿಲ್ಲ. ಹಾಗಾದ್ರೆ ನಿಮ್ಮ ವಾಟ್ಸ್​ಆ್ಯಪ್​​ ಬೇರೆಯವರು ವೀಕ್ಷಿಸುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?.

4 / 7
ಕೆಲವೊಮ್ಮೆ ಬಳಕೆದಾರರ ತಪ್ಪಿನಿಂದಲೇ ಬೇರೆಯವರು ಅವರ ವಾಟ್ಸ್​ಆ್ಯಪ್​​ ಚಾಟ್‌/ ಮೀಡಿಯಾ ಫೈಲ್ಸ್‌ ವೀಕ್ಷಿಸುತ್ತಾರೆ. ಅಂದರೆ ಬಳಕೆದಾರರ ತಪ್ಪಿನಿಂದಲೇ ಅವರ ವಾಟ್ಸ್​ಆ್ಯಪ್​​ ಹ್ಯಾಕ್ ಆಗುವ ಚಾನ್ಸ್‌ ಇರುತ್ತವೆ.

5 / 7
ಹ್ಯಾಕ್ ಆದ ವಾಟ್ಸ್​ಆ್ಯಪ್​​ ಕೆಲವೊಮ್ಮೆ ದುರುಪಯೋಗ ಕೂಡಾ ಆಗಬಹುದು. ಹೀಗಾಗಿ ಬಳಕೆದಾರರ ವಾಟ್ಸ್​ಆ್ಯಪ್​​ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ/ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯುವುದು ಮುಖ್ಯ.

6 / 7
ಬಳಕೆದಾರರ ವಾಟ್ಸ್​ಆ್ಯಪ್​​ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ/ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯಲು ಯಾವುದೇ ಥರ್ಡ್‌ಪಾರ್ಟಿ ಆಪ್‌ ಅಗತ್ಯ ಇಲ್ಲ. ಬದಲಿಗೆ ಬಳಕೆದಾರರು ಅವರ ವಾಟ್ಸ್​ಆ್ಯಪ್​​ನಲ್ಲಿಯೇ ಈ ಮಾಹಿತಿಯನ್ನು ತಿಳಿದುಕೊಳ್ಳಬಹುದು.

7 / 7
ಮೊದಲಿಗೆ ನಿಮ್ಮ ವಾಟ್ಸ್​ಆ್ಯಪ್​​ ಅಪ್ಲಿಕೇಶನ್ ಅನ್ನು ತೆರೆಯಿರಿ. ನಂತರ ಬಲ ಭಾಗದಲ್ಲಿ ಕಾಣಿಸುವ ಮೂರು ಡಾಟ್‌ ಸೆಲೆಕ್ಟ್ ಮಾಡಿರಿ. ಬಳಿಕ ಅಲ್ಲಿ ಕಾಣುಸಿವ ವಾಟ್ಸ್​ಆ್ಯಪ್​​ ವೆಬ್ / ಲಿಂಕ್‌ ಡಿವೈಸ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೀವು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ವಾಟ್ಸ್​ಆ್ಯಪ್​​ ತೆರೆಯದಿದ್ದರೂ ಲಿಂಕ್ ಆಗಿದೆ ಎನ್ನುವುದನ್ನು ತೋರಿಸುತ್ತಿದ್ದರೆ ನಿಮ್ಮ ವಾಟ್ಸ್​ಆ್ಯಪ್​​ ಚಾಟ್ ಅನ್ನು ಬೇರೆಯವರು ಓದುತ್ತಿದ್ದಾರೆ ಎಂದರ್ಥ.

Published On - 4:37 pm, Tue, 18 July 23