ಕೋಟೆನಾಡಿನಲ್ಲಿ ದಶಕಗಳಿಂದ ಪುರಾತನ ಸಾಮಗ್ರಿ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವುದನ್ನೇ ಉದ್ದೇಶಿಸಿಕೊಂಡಿದೆ ಈ ಕುಟುಂಬ!
TV9 Web | Updated By: ಸಾಧು ಶ್ರೀನಾಥ್
Updated on:
Mar 06, 2023 | 1:35 PM
Home Museum: ಹಳೇ ಕಾಲದ ವಸ್ತುಗಳನ್ನು ಮ್ಯೂಸಿಯಂಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದ್ರೆ, ಐತಿಹಾಸಿಕ ಕೋಟೆನಾಡು ಚಿತ್ರದುರ್ಗದ ಮನೆಯೊಂದರಲ್ಲಿ ಹಳೇ ಕಾಲದ ಅನೇಕ ಸಂಗ್ರಹಗಳಿವೆ. ಅಸಲಿಗೆ ಆ ಮನೆಯೇ ಒಂದು ಪುಟ್ಟ ಮ್ಯೂಸಿಯಂನಂತಾಗಿದೆ. ಈ ಕುರಿತು ವರದಿ ಇಲ್ಲಿದೆ.
1 / 13
ಹಳೇ ಕಾಲದ ವಸ್ತುಗಳನ್ನು ಮ್ಯೂಸಿಯಂಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದ್ರೆ, ಐತಿಹಾಸಿಕ ಕೋಟೆನಾಡು ಚಿತ್ರದುರ್ಗದ ಮನೆಯೊಂದರಲ್ಲಿ ಹಳೇ ಕಾಲದ ಅನೇಕ ಸಂಗ್ರಹಗಳಿವೆ. ಅಸಲಿಗೆ ಆ ಮನೆಯೇ ಒಂದು ಪುಟ್ಟ ಮ್ಯೂಸಿಯಂನಂತಾಗಿದೆ. ಈ ಕುರಿತು ವರದಿ ಇಲ್ಲಿದೆ.
2 / 13
ಟಿಪ್ಪು ಸುಲ್ತಾನರ ಕಾಲದ ನಾಣ್ಯದಿಂದ ಹಿಡಿದು ಈವರೆಗಿನ ನಾಣ್ಯ, ರೂಪಾಯಿಗಳು, ಪುರಾತನ ಕಾಲದ ಗೃಹಬಳಕೆ ವಸ್ತುಗಳಿಂದ ಈವರೆಗಿನ ವಸ್ತುಗಳು, ವಿಗ್ರಹಗಳಿಂದ ಆಟಿಕೆ ವಸ್ತುಗಳವರೆಗಿನ ಅಪರೂಪದ ವಸ್ತುಗಳ ಸಂಗ್ರಹ ಇದಾಗಿದೆ.
3 / 13
ಇದ್ಯಾವುದೋ ಮ್ಯೂಸಿಯಂನ ದೃಶ್ಯಗಳಲ್ಲ. ಕೋಟೆನಾಡು ಚಿತ್ರದುರ್ಗ ನಗರದ ಗುಮಾಸ್ತ ಕಾಲೋನಿಯಲ್ಲಿರುವ ಯಶೋದಾ ರಂಗಣ್ಣ ಅವರ ಮನೆಯಲ್ಲಿನ ಸಂಗ್ರಹ. ಹೌದು, ಸುಮಾರು ಮೂರ್ನಾಲ್ಕು ತಲೆಮಾರುಗಳ ಅಡುಗೆ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ. (ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ)
4 / 13
ಅಷ್ಟೇ ಅಲ್ಲದೆ, ಟಿಪ್ಪು-ಹೈದರಾಲಿ, ಮೈಸೂರು ಒಡೆಯರ್, ಕೃಷ್ಣ ದೇವರಾಯ. ನಿಜಾಮ, ದುರ್ಗದ ಪಾಳೇಗಾರರ ಕಾಲದ ನಾಣ್ಯಗಳು ಇಲ್ಲಿವೆ. ಪುರಾತನ ಸಾಮಗ್ರಿಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಪರಿಚಯಸಬೇಕೆಂಬ ಏಕೈಕ ಉದ್ದೇಶದಿಂದ ಇಡೀ ಕುಟುಂಬ ಐದಾರು ದಶಕಗಳಿಂದ ಶ್ರಮಿಸುತ್ತಿದೆ.
5 / 13
6 / 13
ಯಶೋದಾ ಅವರ ಪತಿ ರಂಗಣ್ಣ ಅವ್ರಿಗೆ ಪುರಾತನ ಕಾಲದ ವಸ್ತುಗಳು ಸಂಗ್ರಹಿಸುವುದೆಂದರೆ ಇಷ್ಟದ ಕೆಲಸ. ಹೀಗಾಗಿ, ರಂಗಣ್ಣ ಅವರ ಸವಿನೆನಪಿಗಾಗಿ ಇಡೀ ಕುಟುಂಬ ಹಳೇ ಕಾಲದ ವಸ್ತುಗಳನ್ನು ಸಂಗ್ರಹಿಸಿದೆ. ಅಲ್ಲದೆ ವಸ್ತು ಸಂಗ್ರಹಾಲಯ ಮಾಡುವ ಉದ್ದೇಶವಿದೆ.
7 / 13
8 / 13
9 / 13
ನಾಣ್ಯಗಳು, ರೂಪಾಯಿಗಳು, ಸ್ಟಾಂಪ್ಗಳು, ಅಡುಗೆ ಸಾಮಗ್ರಿಗಳು, ಎಲೆಕ್ಟ್ರಾನಿಕ್ ವಸ್ತುಗಳು, ಆಟಿಕೆಗಳು, ಪೂಜಾ ಸಾಮಗ್ರಿಗಳು, ವಿಗ್ರಹಗಳು ಸೇರಿ ಸುಮಾರು 50ಕ್ಕೂ ಹೆಚ್ಚು ಬಗೆಯ ವಿವಿಧ ಸಂಗ್ರಹಗಳಿದ್ದು ಮ್ಯೂಸಿಯಂ ನಿರ್ಮಿಸುವ ಉದ್ದೇಶವಿದೆ ಅಂತಾರೆ ಇವ್ರು.
10 / 13
11 / 13
12 / 13
13 / 13
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಗುಮಾಸ್ತ ಕಾಲೋನಿಯ ಯಶೋಧಾ ಅವರ ನಿವಾಸವೇ ಒಂದು ಪುಟ್ಟ ಮ್ಯೂಸಿಯಂನಂತಾಗಿದೆ. ಅಂತೆಯೇ ತಮ್ಮಲ್ಲಿರುವ ಅಪರೂಪದ ಸಂಗ್ರಹಗಳ ಮೂಲಕ ಮ್ಯೂಸಿಯಂ ಒಂದನ್ನು ನಿರ್ಮಾಣ ಮಾಡುವ ಕನಸನ್ನು ಹೊಂದಿದೆ. ಅಪರೂಪದ ಮ್ಯೂಸಿಯಂ ನಿರ್ಮಿಸುವ ಕನಸು ಕೈಗೂಡಲಿ ಎಂಬುದು ನಮ್ಮ ಆಶಯ.