ರಿಚರ್ಡ್ಸನ್ ಆಸ್ಟ್ರೇಲಿಯಾ ಪರ ಏಕದಿನ ಸರಣಿಯನ್ನು ಆಡದಿರುವುದು ಖಚಿತವಾಗಿದೆ. ಒಂದು ವೇಳೆ ಐಪಿಎಲ್ ಆಡದೇ ಇದ್ದರೆ ಮುಂಬೈ ಇಂಡಿಯನ್ಸ್ ತಂಡಕ್ಕೂ ಸಮಸ್ಯೆ ಎದುರಾಗಲಿದೆ. ಏಕೆಂದರೆ ಮುಂಬೈ ತಂಡದಿಂದ ಈಗಾಗಲೇ, ಬುಮ್ರಾ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿದ್ದು, ಈಗ ರಿಚರ್ಡ್ಸನ್ ಆಡದಿದ್ದರೆ, ಮುಂಬೈಗೆ ಭಾರಿ ಹೊಡೆತ ಬೀಳಲಿದೆ.