
ದೇವರೆಂದು ಪೂಜಿಸುವ ತುಳಸಿ ಆಯುರ್ವೇದ ಗಿಡ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಎರಡು ತುಳಸಿ ಎಲೆಗಳನ್ನ ಸೇವಿಸಿ. ಇದರಿಂದ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ.

ಬೇಸಿಗೆಯಲ್ಲಿ ಮಜ್ಜಿಗೆ ದೇಹವನ್ನು ತಣ್ಣಗಾಗಿಸುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಮಜ್ಜಿಗೆ ಕುಡಿಯಿರಿ. ಮಜ್ಜಿಗೆಯಲ್ಲಿರುವ ಪೌಷ್ಟಿಕಾಂಶ, ಲ್ಯಾಕ್ಟಿವ್ ಆಸಿಡ್ ಅಂಶ ಇರುವುದರಿಂದ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ.

ತಂಪಾದ ಹಾಲನ್ನು ಸೇವಿಸಿದರೆ ಎದೆ ಉರಿ ಮತ್ತು ತೇಗು ಬಹಳ ಬೇಗ ಕಡಿಮೆಯಾಗುತ್ತದೆ. ನೀವು ಹಾಲು ಕುಡಿಯುವಾಗ ಸಕ್ಕರೆ ಹಾಕಿಕೊಳ್ಳಬಾರದು.


Published On - 4:47 pm, Sat, 26 March 22