Updated on: Mar 14, 2022 | 8:59 AM
ನಾಲ್ಕರಿಂದ ಐದು ಚಮಚ ಜೇನುತುಪ್ಪಕ್ಕೆ ಸ್ವಲ್ಪ ಮೊಸರು, ಒಂದು ಟೀ ಚಮಚ ಆಲಿವ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕೂದಲಿಗೆ ಹಚ್ಚಿ. ಸುಮಾರು 30 ನಿಮಿಷಗಳ ಕಾಲ ಹಾಗೇ ಬಿಟ್ಟು, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಎರಡು ಮೊಟ್ಟೆಯ ಹಳದಿ ಭಾಗಕ್ಕೆ ಎರಡು ಚಮಚ ಆಲಿಟ್ ಎಣ್ಣೆ ಮತ್ತು ಜೇನುತುಪ್ಪ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ನಿಮ್ಮ ಕೂದಲಿಗೆ ಹಚ್ಚಿ. 30 ನಿಮಿಷಗಳ ಬಳಿಕ ತಣ್ಣನೆಯ ನೀರಿನಿಂದ ತೊಳೆಯಿರಿ.
ಪಪ್ಪಾಯಿ ಹಣ್ಣಿಗೆ ಅರ್ಧ ಕಪ್ ಮೊಸರು ಹಾಕಿ ಮಿಶ್ರಣ ಮಾಡಿ. ಪೇಸ್ಟ್ ದಪ್ಪ ಆಗಬೇಕು. ನಂತರ ಕೂದಲಿಗೆ ಅಪ್ಲೈ ಮಾಡಿ. 40 ನಿಮಿಷಗಳ ಬಳಿಕ ತೊಳೆಯಿರಿ.
ಸಾಮಾನ್ಯವಾಗಿ ಬಹುತೇಕ ಮಂದಿ ಕೊಬ್ಬರಿ ಎಣ್ಣೆ ಬಳಸುತ್ತಾರೆ. ಕೂದಲ ತುದಿ ಒಡೆದರೆ ಅದಕ್ಕೆ ಪರಿಹಾರ ಕೊಬ್ಬರಿ ಎಣ್ಣೆಯಲ್ಲಿದೆ. ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಾಕಿ ಮಸಾಜ್ ಮಾಡಿ 2 ಗಂಟೆ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಶಾಂಪುವಿನಿಂದ ಸ್ನಾನವಾದ ನಂತರ ಕಂಡೀಷನರ್ ಬಳಸಿ. ಕಂಡೀಷನರ್ ಹಚ್ಚಿ 10 ನಿಮಿಷದ ಹಾಗೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಕಂಡೀಷನರ್ ಕೇವಲ ಕೂದಲಿಗೆ ಮಾತ್ರ ಹಚ್ಚಬೇಕು.