ಪೊಟ್ಯಾಟೋ ಮಾಸ್ಕ್: ಆಲೂಗಡ್ಡೆಯನ್ನು ಕತ್ತರಿಸಿ ನೀರಿನಲ್ಲಿ ಕುದಿಸಿ. ನಂತರ ನೀರನ್ನು ಸೋಸಿಕೊಳ್ಳಿ. ಬೇಯಿಸಿದ ಆಲೂಗಡ್ಡೆಯನ್ನು ಒಂದು ಬಟ್ಟಲಿನಲ್ಲಿ ಮ್ಯಾಶ್ ಮಾಡಿ ಮತ್ತು ಅದೇ ಪಾತ್ರೆಗೆ ಅರ್ಧ ಕಪ್ ಹಾಲು ಸೇರಿಸಿ. ಈ ಎರಡು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕೈಗೆ ಹಚ್ಚಿ. 30 ನಿಮಿಷಗಳ ಬಳಿಕ ತಣ್ಣೀರಿನಿಂದ ಕೈಗಳನ್ನು ತೊಳೆಯಿರಿ.
ಎಗ್ ಮಾಸ್ಕ್: ಈ ಮಾಸ್ಕ್ ಸಿದ್ಧಪಡಿಸಲು ಮೊಟ್ಟೆ, ಆಲಿವ್ ಎಣ್ಣೆ ಮತ್ತು ನಿಂಬೆ ರಸ ಬೇಕಾಗುತ್ತದೆ. ಮೊದಲು ಮೊಟ್ಟೆಯ ಹಳದಿ ಭಾಗಕ್ಕೆ ನಿಂಬೆ ರಸ ಮತ್ತು ಒಂದು ಚಮಚ ಆಲಿವ್ ಎಣ್ಣೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಕೈಗಳಿಗೆ ಹಚ್ಚಿ. ಸ್ವಲ್ಪ ಸಮಯ ಒಣಗಲು ಬಿಡಿ. ಉಗುರುಬೆಚ್ಚನೆಯ ನೀರಿನಿಂದ ನಂತರ ತೊಳೆಯಿರಿ.
ಅಲೋವೆರಾ ಮಾಸ್ಕ್: ಈ ಮಾಸ್ಕ್ ಸಿದ್ಧಪಡಿಸಲು ಅಲೋವೆರಾ ಜೆಲ್, ನಿಂಬೆ ರಸ ಬೇಕಾಗುತ್ತದೆ. ನಿಮ್ಮ ಕೈಗಳು ಒಣಗಿ ಒರಟಾಗುತ್ತಿದ್ದರೆ, ಅಲೋವೆರಾ ಜೆಲ್ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಕೈಗಳಿಗೆ ಹಚ್ಚಿ.
ಸಕ್ಕರೆ, ಜೇನುತುಪ್ಪ ಮಾಸ್ಕ್: ಎರಡು ಟೀ ಸ್ಪೂನ್ ಸಕ್ಕರೆ, ಎರಡು ಟೀ ಸ್ಪೂನ್ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಎರಡು ಕೈಗಳಿಗೂ ಹಚ್ಚಿ. ಒಣಗಿದ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಅಡುಗೆ ಸೋಡಾ ಮತ್ತು ತೆಂಗಿನ ಎಣ್ಣೆ: ಮೂರು ಚಮಚ ಅಡುಗೆ ಸೋಡಾ ಮತ್ತು ಅರ್ಧ ಕಪ್ ತೆಂಗಿನ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಕೈಗಳಿಗೆ ಹಚ್ಚಿ, ಮಸಾಜ್ ಮಾಡಿ. ಸ್ವಲ್ಪ ಹೊತ್ತು ಹಾಗೇ ಬಿಡಿ. ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.