Updated on: Jun 08, 2022 | 12:55 PM
ವಿಶ್ವದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ ಹೊಸ ಹೊಸ ಅಪ್ಡೇಟ್ಗಳನ್ನು ನೀಡುತ್ತಾ ಬರುತ್ತಿದೆ. ಹೀಗೆ ಇತ್ತೀಚೆಗೆ ನೀಡಿದ ಹೊಸ ಅಪ್ಡೇಟ್ ಎಂದರೆ ರಿಪ್ಲೈ ರಿಯಾಕ್ಷನ್. ಅಂದರೆ ಯಾರಾದರೂ ನಿಮಗೆ ಮೆಸೇಜ್ ಮಾಡಿದ್ರೆ ಅವರಿಗೆ ಕೇವಲ ಎಮೋಜಿ ಮೂಲಕವೇ ಉತ್ತರಿಸುವ ಆಯ್ಕೆಯನ್ನು ವಾಟ್ಸ್ಆ್ಯಪ್ ಪರಿಚಯಿಸಿದೆ.
ಇದರಿಂದ ಎಲ್ಲಾ ಮೆಸೇಜ್ಗಳಿಗೂ ಟೈಪ್ ಮಾಡಿ ಪ್ರತಿಕ್ರಿಯಿಸುವ ಅಗತ್ಯವಿರುವುದಿಲ್ಲ. ಅಲ್ಲದೆ ನೀವು ಕಳುಹಿಸಿದ ವಿಡಿಯೋ ಅಥವಾ ಇನ್ಯಾವುದೊ ಫೈಲ್ ಅಥವಾ ಮೆಸೇಜ್ ಅವರಿಗೆ ಇಷ್ಟವಾಗಿದೆಯಾ, ಇಲ್ಲವಾ ಎಂಬುದು ಕೂಡ ಈ ರಿಯಾಕ್ಷನ್ ಮೂಲಕವೇ ತಿಳಿಯಬಹುದು. ಇದೇ ಕಾರಣಕ್ಕಾಗಿಯೇ ಫೇಸ್ಬುಕ್ನಲ್ಲಿರುವ ರಿಯಾಕ್ಷನ್ ಆಯ್ಕೆಯನ್ನು ವಾಟ್ಸ್ಆ್ಯಪ್ ಕೂಡ ಪರಿಚಯಿಸಿದೆ.
ಈ ರಿಯಾಕ್ಷನ್ ಆಯ್ಕೆಯಲ್ಲಿ ಲೈಕ್, ಹಾರ್ಟ್, ಫೇಸ್ ಇಮೋಜಿಗಳನ್ನು ನೀಡಲಾಗಿದೆ. ಆದರೆ ಸಂದೇಶಗಳಿಗೆ ಪ್ರತಿಕ್ರಿಯಿಸುವ ವೇಳೆ ಕೆಲವೊಮ್ಮೆ ನಾವು ಮಾಡುವ ಸಣ್ಣ ಪುಟ್ಟ ಎಡವಟ್ಟುಗಳಿಂದ ಇಮೋಜಿಗಳು ಬದಲಾಗಬಹುದು. ಇದರಿಂದ ನೀವು ತೋರ್ಪಡಿಸಿದ ಭಾವನೆಗಳ ಅರ್ಥಗಳು ಕೂಡ ಬದಲಾಗುತ್ತೆ. ಹೀಗಾಗಿ ಇಂತಹ ತಪ್ಪುಗಳನ್ನು ಸರಿಪಡಿಸಲು ವಾಟ್ಸ್ಆ್ಯಪ್ ಹೊಸ ಆಯ್ಕೆಯನ್ನು ನೀಡಿದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ...
ನೀವು ಮೆಸೇಜ್ನ ಪ್ರತಿಕ್ರಿಯೆಯನ್ನು ತೆಗೆದುಹಾಕಲು ಅಥವಾ ಬದಲಾಯಿಸಲು ಮೊದಲು ವಾಟ್ಸ್ಆ್ಯಪ್ ಚಾಟ್‌ಗೆ ಹೋಗಿ.
ಅಲ್ಲಿ ನೀವು ಪ್ರತಿಕ್ರಿಯಿಸಿದ ಸಂದೇಶದ ಇಮೋಜಿಯ ಮೇಲೆ ಟ್ಯಾಪ್ ಮಾಡಿ.
ಈ ವೇಳೆ ನಿಮಗೆ ಟ್ಯಾಪ್ ಟು ರಿಮೂವ್ ಅಥವಾ ಡಿಲೀಟ್ ಎಂಬ ಆಯ್ಕೆ ಸಿಗುತ್ತೆ. ಅದರ ಮೇಲೆ ಕ್ಲಿಕ್ ಮಾಡಿದರೆ ನೀವು ಪ್ರತಿಕ್ರಿಯಿಸಿದ ಇಮೋಜಿಯನ್ನು ಡಿಲೀಟ್ ಮಾಡಬಹುದು. ಅಲ್ಲದೆ ಈ ಮೂಲಕ ನಿಮಗೆ ಬೇಕಾದ ಇಮೋಜಿಯನ್ನು ಬಳಸಿ ಮತ್ತೊಮ್ಮೆ ಪ್ರತಿಕ್ರಿಯಿಸಬಹುದು.
Published On - 12:55 pm, Wed, 8 June 22