ಮಾನವೀಯ ಕಾರ್ಯಕ್ಕೆ ಸಾಕ್ಷಿ ಆಯ್ತು ಹುಬ್ಬಳ್ಳಿ ವಿಮಾನ ನಿಲ್ದಾಣ
ಹುಬ್ಬಳ್ಳಿಯ ವಿಮಾನ ನಿಲ್ದಾಣವು ಒಂದಿಲ್ಲೊಂದು ರೀತಿಯಲ್ಲಿ ಜನಪರ ಕಾರ್ಯದ ಮೂಲಕ ಗುಣಮಟ್ಟದ ಸೇವೆ ನೀಡುತ್ತ ಸಾಕಷ್ಟು ಸುದ್ಧಿಯಲ್ಲಿದೆ. ಈಗ ಮತ್ತೊಂದು ಮಾನವೀಯ ಕಾರ್ಯಕ್ಕೆ ಸಹಭಾಗಿತ್ವ ನೀಡುವ ಮೂಲಕ ಸಾರ್ವಜನಿಕರ ಜನಮನ್ನಣೆಗೆ ಕಾರಣವಾಗಿದೆ.
1 / 6
ಒಂದಿಲ್ಲೊಂದು ರೀತಿಯಲ್ಲಿ ಜನಪರ ಕಾರ್ಯದ ಮೂಲಕ ಗುಣಮಟ್ಟದ ಸೇವೆ ನೀಡುತ್ತಿರುವ ಹುಬ್ಬಳ್ಳಿಯ ವಿಮಾನ ನಿಲ್ದಾಣ ಈಗ ಸಾಕಷ್ಟು ಸುದ್ಧಿಯಲ್ಲಿದೆ. ಈಗ ಮತ್ತೊಂದು ಮಾನವೀಯ ಕಾರ್ಯಕ್ಕೆ ಸಹಭಾಗಿತ್ವ ನೀಡಿರುವ ಹುಬ್ಬಳ್ಳಿಯ ವಿಮಾನ ನಿಲ್ದಾಣ ಜನಮನ್ನಣೆ ಪಡೆದಿದೆ.
2 / 6
ಇಷ್ಟು ದಿನ ಪ್ರಯಾಣಿಕರನ್ನು ಮಾತ್ರವೇ ಹುಬ್ಬಳ್ಳಿಯಿಂದ ವಿವಿಧ ಭಾಗಗಳಿಗೆ ವಿಮಾನದ ಮೂಲಕ ಪ್ರಯಾಣಿಸುತ್ತಿದ್ದರು. ಆದರೆ, ಈಗ ಜೀವ ಉಳಿಸುವ ಶ್ವಾಸಕೋಶಗಳು, ಮಾನವನ ಅಂಗಾಂಗಗಳನ್ನು ಕೂಡ ಹುಬ್ಬಳ್ಳಿಯಿಂದ ಚೆನ್ನೈಗೆ ಕಳಿಸುವ ಮೂಲಕ ಮಹತ್ವದ ಕಾರ್ಯ ಮಾಡಿದೆ.
3 / 6
ಹೌದು, ಇಂತಹ ಮಾನವೀಯ ಕೆಲಸಗಳಿಂದ ಹುಬ್ಬಳ್ಳಿ ವಿಮಾನ ನಿಲ್ದಾಣ ಜನಪ್ರಿಯತೆಗೆ ಹೆಸರುವಾಸಿಯಾಗಿದ್ದು, ವೈದ್ಯಕೀಯ ವಿಮಾನ VT-TIS ಜೀವ ಉಳಿಸುವ ಶ್ವಾಸಕೋಶಗಳನ್ನು ಹೊತ್ತು ಹುಬ್ಬಳ್ಳಿಯಿಂದ ಚೆನ್ನೈಗೆ ಹಾರಿತು.
4 / 6
ಇಂತಹದೊಂದು ಗಮನಾರ್ಹ ಪ್ರಯಾಣವು ಭರವಸೆ, ಸ್ಥಿತಿಸ್ಥಾಪಕತ್ವ ಮತ್ತು ಸಾಮೂಹಿಕ ಪ್ರಯತ್ನಗಳ ಶಕ್ತಿಯನ್ನು ಸಂಕೇತಿಸುತ್ತದೆ.
5 / 6
ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದ ಸಮರ್ಪಿತ ತಂಡವು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸಕಾಲಿಕ ಸಮನ್ವಯ ಮತ್ತು ಸುಗಮ ಸಾರಿಗೆಯನ್ನು ಖಚಿತಪಡಿಸಿದ್ದು, ನಿರ್ಣಾಯಕ ಆರೋಗ್ಯ ಕಾರ್ಯಾಚರಣೆಗಳನ್ನು ಬೆಂಬಲಿಸುವ ಬದ್ಧತೆಯನ್ನು ಈ ಮೂಲಕ ತೋರಿಸಿಕೊಟ್ಟಿದೆ.
6 / 6
ಅಂಗಾಂಗ ಕಸಿಯಲ್ಲಿ ಪ್ರತಿ ಸೆಕೆಂಡ್ ಎಣಿಕೆಯಾಗುತ್ತದೆ ಮತ್ತು ಜೀವಗಳನ್ನು ಉಳಿಸುವಲ್ಲಿ ಪಾತ್ರವನ್ನು ವಹಿಸುವಲ್ಲಿ ಮಹತ್ವದ ಪಾತ್ರ ಹುಬ್ಬಳ್ಳಿ ನಿಲ್ದಾಣ ವಹಿಸಿರುವುದು ವಿಶೇಷವಾಗಿದೆ.