
ಬೇಸಿಗೆಯ ಈ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ಹಣ್ಣುಗಳು ಲಭ್ಯವಿದ್ದು, ಅದರಲ್ಲಿ ಈ ಕರಬೂಜ ಹಣ್ಣು ಕೂಡ ಒಂದು. ನಮ್ಮಲ್ಲಿ ಹೆಚ್ಚಿನವರಿಗೆ ಈ ಹಣ್ಣಿನ ಬಗ್ಗೆ ತಿಳಿದಿಲ್ಲ.

ಕರಬೂಜ ಹಣ್ಣು ಬೀಟಾ ಕ್ಯಾರೋಟಿನ್ ಅಂಶ ಹೊಂದಿದ್ದು, ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ದೃಷ್ಟಿಗೆ ಹೊಳಪು ನೀಡುವುದಲ್ಲದೇ ಕಣ್ಣಿನ ಪೊರೆಯನ್ನು ತಡೆಯುತ್ತದೆ.

ಕರಬೂಜ ಹಣ್ಣಿನ ರಸದಲ್ಲಿರುವ ಆಕ್ಸಿಕೊಡೋನ್ ಕಿಡ್ನಿಯನ್ನು ಆರೋಗ್ಯವಾಗಿರಿಸುತ್ತದೆ. ದಿನನಿತ್ಯದ ಆಹಾರದಲ್ಲಿ ಕರಬೂಜ ಹಣ್ಣನ್ನು ಸೇವಿಸಿದರೆ ಕಿಡ್ನಿಗಳಿ ಉತ್ತಮ.

ಕರಬೂಜವು ಹೆಚ್ಚಿನ ಶೇಕಡಾವಾರು ನೀರನ್ನು ಹೊಂದಿರುತ್ತದೆ, ಇದು ಅಜೀರ್ಣ, ಮಲಬದ್ಧತೆ ಮತ್ತು ಗ್ಯಾಸ್ ಸೇರಿದಂತೆ ಎಲ್ಲಾ ರೀತಿಯ ಜೀರ್ಣಕಾರಿ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.

ವಿಟಮಿನ್ ಸಿ ಸಮೃದ್ಧವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಈ ಹಣ್ಣಿನಲ್ಲಿರುವ ಫೈಟೊಕೆಮಿಕಲ್ಸ್ ಯಕೃತ್ತನ್ನು ಆರೋಗ್ಯಕರವಾಗಿರಿಸುತ್ತದೆ.