Kannada News Photo gallery In Bidar Taluk Shift from Amrita Gram Yojana to Hi-Tech Village, There is a library, an open gym, a garden, Bidar News in Kannada
ಅಮೃತ ಗ್ರಾಮ ಯೋಜನೆಯಿಂದ ಹೈಟೆಕ್ ಗ್ರಾಮವಾಗಿ ಬದಲಾವಣೆ; ಇಲ್ಲಿದೆ ಲೈಬ್ರರಿ, ಓಪನ್ ಜಿಮ್, ಗಾರ್ಡನ್
ಅಮೃತ ಗ್ರಾಮ ಯೋಜನೆ ಹಣದಿಂದ ಆ ಗ್ರಾಮ ಬದಲಾಗಿದೆ. ಉತ್ತಮ ಗುಣಮಟ್ಟದ ಲೈಬ್ರರಿ, ಓಪನ್ ಜಿಮ್, ಸೋಲಾರ್ ಲೈಟ್ ನ ವ್ಯವಸ್ಥೆ ಇದ್ದು, ಗ್ರಾಮಸ್ಥರು ವಿಶ್ರಾಂತಿ ಪಡೆಯುವ ಉದ್ದಶದಿಂದ ಗಾರ್ಡನ್ ಮಾಡಲಾಗಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಯಾವುದು ಆ ಗ್ರಾಮ? ಈ ಕುರಿತು ಒಂದು ವರದಿ ಇಲ್ಲಿದೆ.
1 / 7
75ನೇ ಸ್ವಾತಂತ್ರ್ಯೋತ್ಸವ ಹಿನ್ನಲೆಯಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ಅಮೃತ ಗ್ರಾಮ ಯೋಜನೆಯನ್ನ ಘೋಷಣೆ ಮಾಡಿದ್ದರು. ಇದರಲ್ಲಿ ರಾಜ್ಯದ 750 ಗ್ರಾಮಗಳನ್ನ ಆಯ್ಕೆ ಮಾಡಿದ್ದರು. ಅದರಲ್ಲಿ ಬೀದರ್ ಜಿಲ್ಲೆಯ 71 ಗ್ರಾಮಗಳು ಕೂಡ ಸೇರಿವೆ. ಈ ಯೊಜನೆಯಡಿ ಆಯ್ಕೆಯಾದ ಗ್ರಾಮಗಳಿಗೆ ಸರಕಾರ 25 ಲಕ್ಷ ರೂಪಾಯಿಯನ್ನ ಕೊಡುತ್ತದೆ. ಇದೆ ಹಣವನ್ನ ಬಳಸಿಕೊಂಡು ಗ್ರಾಮದಲ್ಲಿ ಪಾರ್ಕ್, ಡಿಜಿಟಲ್ ಲೈಬ್ರರಿ, ಸೋಲಾರ್ನ ಬೀದಿ-ದೀಪದ ವ್ಯವಸ್ಥೆ, ಶಾಲಾ ಕೋಣೆಯಲ್ಲಿ ಸಿಸಿಟಿವಿ ಅಳವಡಿಕೆ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಓಪನ್ ಜಿಮ್ನ ವ್ಯವಸ್ಥೆಯನ್ನ ಬೀದರ್ ತಾಲೂಕಿನ ಮಾಳೆಗಾಂವ ಗ್ರಾಮ ಪಂಚಾಯತ್ನಲ್ಲಿ ಮಾಡಲಾಗಿದೆ.
2 / 7
6.22 ಲಕ್ಷ ವೆಚ್ಚದಲ್ಲಿ ಜಿಮ್ ನಿರ್ಮಿಸಲಾಗಿದೆ. ಜಿಮ್‌ನಲ್ಲಿ ಎರಡು ಆಸನದ ಜೋಕಾಲಿ, ವಾಕರ್, ಡಬ್ಬಲ್ ಕ್ರಾಸ್ ವಾಕರ್, ಏರ್ ಸ್ವಿಂಗ್, ಹಾರ್ಸ್ ರೈಡರ್, ಟ್ವಿಸ್ಟರ್, ವರ್ಟಿಕಲ್ ನೀ ಹಿಪ್ ರೈಸ್, ಕ್ಲಂಬರ್, ಜಾರು ಬಂಡಿ ಇವೆ. ಜಿಮ್‌ನಲ್ಲಿ ಜನರಿಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ನೆರವಾಗಲು ವ್ಯಾಯಾಮ ಸಲಕರಣೆ ಹಾಗೂ ಮಕ್ಕಳ ಮನೋರಂಜನೆ ಸಲಕರಣೆಗಳನ್ನು ಅಳವಡಿಸಲಾಗಿದೆ.
3 / 7
ಜನರಿಗೆ ವಾಯು ವಿಹಾರಕ್ಕಾಗಿ ಪಂಚಾಯಿತಿ ಸ್ಥಳದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಂದದ ಉದ್ಯಾನ ನಿರ್ಮಿಸಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಇದರಿಂದಾಗಿ ಅನೂಕೂಲವಾಗಿದೆ. ಉದ್ಯಾನದಲ್ಲಿ ಹುಲ್ಲು ಹಾಸಿದ್ದು, ಆಲಂಕಾರಿಕ ಸಸಿಗಳನ್ನು ನೆಡಲಾಗಿದೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಪಂಚಾಯತ್ ವತಿಯಿಂದಾಗಿ ಸುಮಾರು 20 ಸಿಸಿಟಿಗಳನ್ನ ಅಳವಡಿಸಿದ್ದು, ಮಕ್ಕಳ ಚಟುವಟಿಕೆ ಮೇಲೆ ನಿಗಾ ಇಡಲು ಇದು ಶಿಕ್ಷಕರಿಗೆ ಸಹಕಾರಿಯಾಗಿದೆ. ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ ಎಂದು ಮಾಳೆಗಾಂವ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲಕುಮಾರ ಚಿಟ್ಟಾ ಹೇಳುತ್ತಿದ್ದಾರೆ.
4 / 7
ಇದೆ ಅಮೃತ ಗ್ರಾಮ ಯೋಜನೆಯ ಹಣದಿಂದ ಮಾಳೆಗಾಂವ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ರಸೂಲಾಬಾದ್ ಗ್ರಾಮದಲ್ಲಿ ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ಸೋಲಾರ್ ಬೀದಿ ದೀಪಗಳನ್ನ ಅಳವಡಿಸಲಾಗಿದೆ. ಕಳೆದೊಂದು ವರ್ಷದಿಂದಾ ಜೆಸ್ಕಾಂ ವಿದ್ಯುತ್ ಬಿಲ್ ಕಟ್ಟವುದನ್ನೇ ನಿಲ್ಲಿಸಲಾಗಿದೆ. ಯಾಕೆಂದರೆ ಪ್ರತಿ ತಿಂಗಳು 20 ಸಾವಿರದಷ್ಟು ವಿದ್ಯುತ್ ಬಿಲ್ ಬರುತ್ತಿತ್ತು. ಈಗ ಅದು ನಿಂತಿದೆ ಯಾಕೆಂದರೆ ಸೋಲಾರ್ ಬೀದಿ ದೀಪಗಳನ್ನ ಅಳವಡಿಸಿದ ನಂತರ ಜೆಸ್ಕಾಂ ಕರೆಂಟ್ ಕಟ್ ಮಾಡಿಸಿದ್ದಾರೆ.
5 / 7
ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮದ ಸ್ಫರ್ಧಾತ್ಮ ಪರೀಕ್ಷೆಗೆ ತಯಾರಾಗುವ ಮಕ್ಕಳಿಗೆ ಓದಿಗೆ ಅನೂಕುಲ ಕಲ್ಪಿಸುವ ಉದ್ದೇಶದಿಂದ ಹೈಟೆಕ್ ಲೈಬ್ರರಿ ನಿರ್ಮಾಣ ಮಾಡಲಾಗಿದ್ದು, ನಾಲ್ಕು ಕಂಪ್ಯೂಟರ್ಗಳಿವೆ. ಅದಕ್ಕೆ ಹೈಸ್ಪೀಡ್ ಇಂಟರ್ನೆಟ್ ಕನೆಕ್ಷನ್ ಕೂಡ ಕೊಡಲಾಗಿದೆ. ಜೊತೆಗೆ ಯುಪಿಎಸ್, ಕೆಎಎಸ್, ಎಸ್ ಡಿಎ, ಎಫ್ ಡಿಎ, ಪಿಡಿಓ ಹೀಗೆ ಎಲ್ಲಾ ಪರೀಕ್ಷೆಗೂ ಅನೂಕುಲವಾಗುವಂತಹ ಲಕ್ಷಾಂತರ ರೂಪಾಯಿ ಮೌಲ್ಯದ ಪುಸ್ತಕಗಳನ್ನ ಇಲ್ಲಿ ಖರೀಧಿಸಿ ತಂದು ಇಡಲಾಗಿದೆ. ಇನ್ನು ಈ ಗ್ರಂಥಾಲಯದಲ್ಲಿ ಬಿಎಡ್, ಡಿಎಡ್, ಎಸ್ ಡಿಸಿ, ಎಫ್ ಡಿಎ ಯಿಂದ ಹಿಡಿದ ಕೇಂದ್ರ ರಾಜ್ಯ ಸರಕಾರ ನಡೆಸುವ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಯ ಎಲ್ಲಾ ಪುಸ್ತಕಗಳು ಇಲ್ಲಿ ಲಭ್ಯವಿದೆ.
6 / 7
ಪುಸ್ತಕ ಕೊಳ್ಳಲು ಬಡತನ ಅಡ್ಡಿಯಾಗುವ ವಿದ್ಯಾರ್ಥಿನಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಇಲ್ಲಿ 4 ಸಾವಿರಕ್ಕೂ ಅಧಿಕ ಪುಸ್ತಗಳು ಇಲ್ಲಿ ಖರೀಧಿಸಿ ಇಡಲಾಗಿದೆ. ಇನ್ನು ಉತ್ತಮ ದರ್ಜೆಯ ಲೈಬ್ರರಿಯ ಜೊತೆಗೆ ಹೈಟೆಕ್ ಡಿಜಿಟಲ್ ಮಾದರಿಯ ಕಂಪ್ಯೂಟರ್ ಶೀಕ್ಷಣವನ್ನು ಇಲ್ಲಿನ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು, ಮಕ್ಕಳು ಶ್ರದ್ಧೆಯಿಂದ ಕಂಪ್ಯೂಟರ್ ಶೀಕ್ಷಣ ಪಡೆಯಬಹುದಾಗಿದೆ. ಈ ಲೈಬ್ರರಿಯಲ್ಲಿ ಓದುತ್ತಿರುವ ಮಕ್ಕಳ ಮೇಲೆ ನಿಗಾ ಇಡುವ ಉದ್ದೇಶದಿಂದ ಇಡೀ ಲೈಬ್ರರಿಯಲ್ಲಿ ಸಿಸಿ ಟಿಗಳನ್ನ ಅಳವಡಿಸಲಾಗಿದ್ದು, ಈ ಮೂಲಕ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಎಂದು ಪಿಡಿಓ ಕುಳಿತಲ್ಲೆ ನೋಡಬಹುದಾಗಿದೆ.
7 / 7
ಸರಕಾರಿ ಆಡಳಿತ ವ್ಯವಸ್ಥೆಯನ್ನ ತೆಗಳುವ ಈ ಕಾಲದಲ್ಲಿ ಒಂದು ಪುಟ್ಟ ಗ್ರಾಮದಲ್ಲಿ ಏನೆಲ್ಲ ಪಂಚಾಯತ್ನಿಂದ ಮಾಡಬಹುದೆಂದು ಈ ಪಂಚಾಯತ್ ಪಿಡಿಓ ಸದಸ್ಯರು ಮಾಡಿ ತೋರಿಸಿದ್ದಾರೆ. ಇದನ್ನ ವಿದ್ಯಾರ್ಥಿಗಳು, ಗ್ರಾಮಸ್ಥರು ಕೂಡ ಚೆನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದು, ಸ್ಫರ್ಧಾತ್ಮಕ ಪರಿಕ್ಷೆಗಳಿಗೆ ವಿದ್ಯಾರ್ಥಿಗಳ ಹೆಚ್ಚಿನ ಒಲವೂ ತೋರಿಸುತ್ತಿದ್ದಾರೆ. ಇಲ್ಲಿನ ಪುಸ್ತಕಗಳು, ಕಂಪ್ಯೂಟರ್ ವ್ಯವಸ್ಥೆಯಿಂದ ಮಕ್ಕಳಿಗೆ ಹೆಚ್ಚಿನ ಜ್ಞಾನ ಸಿಗುತ್ತಿದೆ. ಏನೇ ಇರಲಿ ವಿದ್ಯಾರ್ಥಿನಿಯರ ಹಿತ ದೃಷ್ಠಿಯಿಂದ ಪಿಡಿಓ ಮಕ್ಕಳಿಗಾಗಿ ಈ ವ್ಯವಸ್ಥೆ ಕಲ್ಪಿಸಿದ್ದು ಮೆಚ್ಚುವಂತದ್ದೆ, ಈ ವ್ಯವಸ್ಥೆಯನ್ನ ವಿದ್ಯಾರ್ಥಿಗಳು ಬಳಸಿಕೊಂಡು ಸರಕಾರ ನೌಕರಿ ಗಿಟ್ಟಿಸಿಕೊಳ್ಳಲಿ ಅನ್ನೋದು ಎಲ್ಲರ ಆಶಯವಾಗಿದೆ.