ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು ಇನ್ನಿಂಗ್ಸ್ ಮತ್ತು 122 ರನ್ಗಳಿಂದ ಸೋಲಿಸಿತು. ಕೇವಲ ಮೂರೇ ದಿನಕ್ಕೆ ಟೆಸ್ಟ್ ಪಂದ್ಯ ಮುಕ್ತಾಯವಾಗಿದ್ದು ರೋಹಿತ್ ಶರ್ಮಾ ಸಹ ಈ ಅನಿರೀಕ್ಷಿತ ಗೆಲುವಿಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಂದಿನ ಗೆಲುವು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ನೀಡಿದ ಕೊಡುಗೆ ಎಂದೇ ಬಣ್ಣಿಸಲ್ಪಟ್ಟಿದೆ. ಯಾಕಂದ್ರೆ ಇದು ಅವರ 100ನೇ ಟೆಸ್ಟ್ ಕದನ. ಹಾಗಾದ್ರೆ ಟೀಂ ಇಂಡಿಯಾ ಯಶಸ್ಸಿಗೆ ಕಾರಣವೇನು ಎಂಬುದನ್ನು ತಿಳಿಯೋಣ.
ಭಾರತೀಯ ಬೌಲಿಂಗ್ - ಮೊದಲೆರಡು ದಿನ ಟೀಮ್ ಇಂಡಿಯಾದ ಬ್ಯಾಟಿಂಗ್ ನಡೆಸುತ್ತಿದ್ದಾಗ ಪಿಚ್ ಬೌಲರ್ ಗಳಿಗೆ ನೆರವಾಗದಂತಿತ್ತು. ಆದರೆ ಭಾರತದ ಬೌಲರ್ಗಳು ಬೌಲಿಂಗ್ ಮಾಡಲು ಮುಂದಾದಾಗ ಸಂಪೂರ್ಣ ಚಿತ್ರಣವೇ ಬದಲಾಯಿತು. ಭಾರತದ ಸ್ಪಿನ್ ಬೌಲರ್ಗಳ ಜೊತೆಗೆ ವೇಗದ ಬೌಲರ್ಗಳೂ ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಐದು ವಿಕೆಟ್ ಪಡೆದರು. ಮತ್ತೊಂದೆಡೆ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಅವರ ಸ್ಪಿನ್ಗೆ ಶ್ರೀಲಂಕಾ ಬ್ಯಾಟ್ಸ್ಮನ್ಗಳ ಬಳಿ ಉತ್ತರ ಇರಲಿಲ್ಲ.
ಟೀಂ ಇಂಡಿಯಾ
ಶ್ರೀಲಂಕಾ ವಿರುದ್ಧದ ಮೊಹಾಲಿ ಟೆಸ್ಟ್‌ನಲ್ಲಿ ಭರ್ಜರಿ ಶತಕ ಸಿಡಿಸಿದ ರವೀಂದ್ರ ಜಡೇಜಾ ಈ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಪಡೆದಿದ್ದಕ್ಕೆ ದೊಡ್ಡ ಬಹುಮಾನ ಪಡೆದಿದ್ದಾರೆ. ರವೀಂದ್ರ ಜಡೇಜಾ ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಆಲ್ ರೌಂಡರ್ ಎನಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್ ಅವರನ್ನು ಜಡೇಜಾ ಹಿಂದಿಕ್ಕಿದ್ದಾರೆ. ಅದೇ ಸಮಯದಲ್ಲಿ, ಅಶ್ವಿನ್ 3 ನೇ ಸ್ಥಾನಕ್ಕೆ ಕುಸಿದಿದ್ದಾರೆ.
Published On - 8:54 am, Mon, 7 March 22