IKF S3 Finals: ಫೆ. 4ರಂದು ಭಾರತ ಖೇಲೋ ಫುಟ್‌ಬಾಲ್ ಸೀಸನ್ 3 ರ ಗ್ರ್ಯಾಂಡ್ ಫಿನಾಲೆ

|

Updated on: Feb 02, 2024 | 4:13 PM

IKF S3 Finals: ಭಾರತ ಮತ್ತು ಯುಎಇಯಲ್ಲಿ ನಡೆದ ಭಾರತ ಫುಟ್‌ಬಾಲ್ ಖೇಲೋ ಸೀಸನ್ 3 ದೈಹಿಕ ಪರೀಕ್ಷೆಯಲ್ಲಿ ಸುಮಾರು 10,000 ಆಟಗಾರರು ಭಾಗವಹಿಸಿದ್ದರು. ಇದರಲ್ಲಿ 13 ರಿಂದ 17 ವರ್ಷದೊಳಗಿನ ಒಟ್ಟು 150 ಕ್ರೀಡಾಪಟುಗಳು ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದಾರೆ.

1 / 7
ಭಾರತ ಖೇಲೋ ಫುಟ್ಬಾಲ್ ಸೀಸನ್ 3 ಅಂತಿಮ ಹಂತ ತಲುಪಿದೆ. ಈ ಮೆಗಾ ಸಾಕರ್ ಪಂದ್ಯಾವಳಿಯ ಗ್ರಾಂಡ್ ಫಿನಾಲೆ ಫೆಬ್ರವರಿ 4 ರಂದು ಅಹಮದಾಬಾದ್‌ನ ಇಕೆಎ ಅರೆನಾದಲ್ಲಿ ನಡೆಯಲಿದೆ.

2 / 7
ಭಾರತ ಖೇಲೋ ಫುಟ್ಬಾಲ್ ಸೀಸನ್ 3 ಪಂದ್ಯಾವಳಿಯ ಭಾಗವಾಗಿ, ಕಳೆದ ಎಂಟು ತಿಂಗಳುಗಳಿಂದ ಭಾರತ ಮತ್ತು ಯುಎಇಯ ಸುಮಾರು 50 ನಗರಗಳಲ್ಲಿ ಆಟಗಾರರ ಪ್ರಾಯೋಗಿಕ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.

3 / 7
2020 ರಲ್ಲಿ ಸ್ಥಾಪನೆಯಾದ ಭಾರತ ಫುಟ್‌ಬಾಲ್ ಖೇಲೋ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ವೃತ್ತಿಪರ ಫುಟ್‌ಬಾಲ್‌ಗಾಗಿ ಹಳ್ಳಿಗಳಲ್ಲಿ ಉತ್ಸಾಹಿ ಆಟಗಾರರನ್ನು ಗುರುತಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

4 / 7
ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಉದಯೋನ್ಮುಖ ಫುಟ್ಬಾಲ್ ಆಟಗಾರರನ್ನು ಉನ್ನತ ಭಾರತೀಯ ಕ್ಲಬ್‌ಗಳಿಗೆ (ISL ಮತ್ತು I-ಲೀಗ್) ಜೊತೆಗೆ ಹೆಚ್ಚಿನ ತರಬೇತಿಗಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಅಂತರರಾಷ್ಟ್ರೀಯ ಅಕಾಡೆಮಿಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗುತ್ತದೆ.

5 / 7
ಭಾರತ ಮತ್ತು ಯುಎಇಯಲ್ಲಿ ನಡೆದ ಭಾರತ ಫುಟ್‌ಬಾಲ್ ಖೇಲೋ ಸೀಸನ್ 3 ದೈಹಿಕ ಪರೀಕ್ಷೆಯಲ್ಲಿ ಸುಮಾರು 10,000 ಆಟಗಾರರು ಭಾಗವಹಿಸಿದ್ದರು. ಇದರಲ್ಲಿ 13 ರಿಂದ 17 ವರ್ಷದೊಳಗಿನ ಒಟ್ಟು 150 ಕ್ರೀಡಾಪಟುಗಳು ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದಾರೆ.

6 / 7
ಈಶಾನ್ಯ ವಲಯದಿಂದ 33 ಆಟಗಾರರು, ಉತ್ತರ ವಲಯದಿಂದ 14 ಆಟಗಾರರು, ಪೂರ್ವ ವಲಯದಿಂದ 32 ಆಟಗಾರರು, ದಕ್ಷಿಣ ವಲಯದಿಂದ 15 ಆಟಗಾರರು ಮತ್ತು ಪಶ್ಚಿಮ ವಲಯದಿಂದ 99 ಆಟಗಾರರು ಗ್ರ್ಯಾಂಡ್ ಫಿನಾಲೆಗೆ ಅರ್ಹತೆ ಪಡೆದಿದ್ದಾರೆ.

7 / 7
ಫೆಬ್ರವರಿ 4 ರಂದು ನಡೆಯುವ ಗ್ರಾಂಡ್ ಫಿನಾಲೆಯಲ್ಲಿ ಇಂಡಿಯನ್ ಸೂಪರ್ ಲೀಗ್ (ISL) ಕ್ಲಬ್‌ಗಳಾದ ಜಮ್ಶೆಡ್‌ಪುರ ಎಫ್‌ಸಿ, ಕೇರಳ ಬ್ಲಾಸ್ಟರ್ಸ್, ಗೋವಾ ಎಫ್‌ಸಿ, ಮುಂಬೈ ಸಿಟಿ ಎಫ್‌ಸಿ ಮತ್ತು ಚೆನ್ನೈ ಎಫ್‌ಸಿ. ಏತನ್ಮಧ್ಯೆ, ಐ-ಲೀಗ್ ಕ್ಲಬ್‌ಗಳಾದ ಗೋಕುಲಂ ಕೇರಳ, ಡೆಲ್ಲಿ ಎಫ್‌ಸಿ, ಬರೋಡಾ ಎಫ್‌ಎ, ಎಆರ್‌ಎ, ಮಹಾರಾಷ್ಟ್ರ ಆರೆಂಜ್ ಎಫ್‌ಸಿ ಮತ್ತು ಯುನೈಟೆಡ್ ಎಸ್‌ಸಿ ಕೋಲ್ಕತ್ತಾ ಕೂಡ ಫೈನಲ್‌ನಲ್ಲಿ ಭಾಗವಹಿಸಲಿವೆ. ಹಾಗೆಯೇ ಎಫ್‌ಸಿ ಮದ್ರಾಸ್, ಝಿಎನ್‌ಸಿ ಎಫ್‌ಎ, ಆಲ್ಫಾ ಸ್ಪೋರ್ಟ್ಸ್ ಅಕಾಡೆಮಿ, ಆರ್ಡರ್ ಎಫ್‌ಎ, ವಿಶಾಲ್ ಬಿಹಾರ್ ಯುನೈಟೆಡ್, ಸ್ಪೋರ್ಟೊ ಮತ್ತು ನಾರ್ದರ್ನ್ ಯುನೈಟೆಡ್‌ನಂತಹ ದೇಶದ ಕೆಲವು ಉನ್ನತ ಅಕಾಡೆಮಿಗಳು ಈವೆಂಟ್‌ನಲ್ಲಿ ಭಾಗವಹಿಸಲಿವೆ.