India vs England: ಅಂಪೈರ್​ಗಳ ವಿವಾದಾತ್ಮಕ ತೀರ್ಪಿಗೆ ಬಲಿಯಾದ ಸುಂದರ್​- ಸೂರ್ಯ ಕುಮಾರ್​.. ಫೋಟೋ ನೋಡಿ!

|

Updated on: Mar 19, 2021 | 2:04 PM

India vs England:ಥರ್ಡ್ ಮ್ಯಾನ್ ಬೌಂಡರಿಯಲ್ಲಿ ಸುಂದರ್ ಅವರ ಹೊಡೆತವನ್ನು ಆದಿಲ್ ರಶೀದ್ ಸುಲಭವಾಗಿ ಕ್ಯಾಚ್ ಮಾಡಿದರು. ಆದರೆ ಕ್ಯಾಚ್ ತೆಗೆದುಕೊಳ್ಳುವಾಗ ಆದಿಲ್ ರಶೀದ್ ಅವರ ಕಾಲು ಬೌಂಡರಿಯನ್ನು ಸ್ಪರ್ಶಿಸುತ್ತಿರುವುದು ಕಂಡುಬಂತು.

1 / 7
ತಂಡದಲ್ಲಿ ಸ್ಥಾನ ಪಡೆಯುವ ಖಚಿತತೆ ಹೊಂದಿರುವ ಆಟಗಾರರು: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್ , ಇಶಾನ್ ಕಿಶನ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್

2 / 7
India vs England: ಅಂಪೈರ್​ಗಳ ವಿವಾದಾತ್ಮಕ ತೀರ್ಪಿಗೆ ಬಲಿಯಾದ ಸುಂದರ್​- ಸೂರ್ಯ ಕುಮಾರ್​.. ಫೋಟೋ ನೋಡಿ!

3 / 7
ಟೀಂ ಇಂಡಿಯಾ ಇನ್ನಿಂಗ್ಸ್‌ನ 13.2ನೇ ಓವರ್‌ನಲ್ಲಿ ಸ್ಯಾಮ್ ಕರನ್ ಎಸೆದ ಎಸೆತವನ್ನು, ಯಾದವ್ ಸಿಕ್ಸರ್​ ಬಾರಿಸಲು ಯತ್ನಿಸಿದರು. ಆದರೆ ಯಾದವ್​ ಬ್ಯಾಟ್​ಗೆ ತಾಗಿ ಚಿಮ್ಮಿದ ಚೆಂಡನ್ನು ಡೇವಿಡ್ ಮಲಾನ್ ಡೈವ್ ಮಾಡಿ ಕ್ಯಾಚ್ ಮಾಡಿದರು. ಆದರೆ ಮಲಾನ್ ಹಿಡಿದ ಕ್ಯಾಚ್ ಅನುಮಾನಾಸ್ಪದವಾಗಿತ್ತು. ಅಂಪೈರ್​ ರಿವ್ಯೂವ್​ನಲ್ಲಿ ಚೆಂಡು ನೆಲಕ್ಕೆ ತಾಗಿದಂತೆ ಕಾಣಿಸುತ್ತಿತ್ತು. ಇದನ್ನು ಪರಿಶೀಲಿಸಿದ ಥರ್ಡ್ ಅಂಪೈರ್ ಕೂಡ ಅದನ್ನು ಔಟ್ ಎಂದು ಅಂತಿಮವಾಗಿ ತೀರ್ಪು ನೀಡಿದರು. ಇದು ವಿವಾದಕ್ಕೆ ಕಾರಣವಾಗಿದೆ.

4 / 7
ಸೂರ್ಯಕುಮಾರ್ ಯಾದವ್ ಔಟ್ ತೀರ್ಪು ನಿಜಕ್ಕೂ ವಿವಾದಾತ್ಮಕವಾಗಿದೆ. ಯಾಕೆಂದರೆ ಚೆಂಡು ನೆಲಕ್ಕೆ ತಾಗಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಡಿಆರ್‌ಎಸ್‌ನಲ್ಲೂ ಇದನ್ನು ಸುಲಭವಾಗಿ ಔಟ್ ಎಂದು ಹೇಳುವಂತಿರಲಿಲ್ಲ. ಆದರೆ ಅಂತಿಮವಾಗಿ ಫೀಲ್ಡ್​ ಅಂಪೈರ್​ ತೀರ್ಮಾನವನ್ನ ಗಣನೆಗೆ ತೆಗೆದುಕೊಂಡ 3ನೇ ಅಂಪೈರ್​ ಸಾಫ್ಟ್‌ ಸಿಗ್ನಲ್ ಎಂದು 'ಔಟ್' ತೀರ್ಪು ನೀಡಿದರು.

5 / 7
ಅಂಪೈರ್ ತಮ್ಮ ನಿರ್ಧಾರದ ಬಗ್ಗೆ ಖಚಿತವಾಗಿರದಿದ್ದರೆ, ಅವರು ಮೂರನೇ ಅಂಪೈರ್​ಗೆ ನಿರ್ಧಾರ ತೆಗೆದುಕೊಳ್ಳುವಂತೆ ಕೇಳುವುದಕ್ಕೂ ಮೊದಲು ತಮ್ಮ ನಿರ್ಧಾರವನ್ನು ನೀಡುತ್ತಾರೆ. ಈ ನಿರ್ಧಾರ ಔಟ್​ ಅಥವಾ ನಾಟ್​ಔಟ್​ ಕೂಡ ಆಗಿರಬಹುದು. ಮೂರನೇ ಅಂಪೈರ್ ಸಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಆನ್-ಫೀಲ್ಡ್ ಅಂಪೈರ್ನ ಸಾಫ್ಟ್ ಸಿಗ್ನಲ್​ ಅನ್ನು ಮೂರನೇ ಅಂಪೈರ್ ಗಣನೆಗೆ ತೆಗೆದುಕೊಳ್ಳುತ್ತಾರೆ. ಆನ್-ಫೀಲ್ಡ್ ಅಂಪೈರ್​ ನೀಡಿದ ಸಾಫ್ಟ್ ಸಿಗ್ನಲ್ ಆಧಾರದ ಮೇಲೆ 3ನೇ ಅಂಪೈರ್​ ತಮ್ಮ ನಿರ್ಧಾರವನ್ನು ಪ್ರಕಟಿಸುತ್ತಾರೆ.

6 / 7
ಥರ್ಡ್ ಮ್ಯಾನ್ ಬೌಂಡರಿಯಲ್ಲಿ ಸುಂದರ್ ಅವರ ಹೊಡೆತವನ್ನು ಆದಿಲ್ ರಶೀದ್ ಸುಲಭವಾಗಿ ಕ್ಯಾಚ್ ಮಾಡಿದರು. ಆದರೆ ಕ್ಯಾಚ್ ತೆಗೆದುಕೊಳ್ಳುವಾಗ ಆದಿಲ್ ರಶೀದ್ ಅವರ ಕಾಲು ಬೌಂಡರಿಯನ್ನು ಸ್ಪರ್ಶಿಸುತ್ತಿರುವುದು ಕಂಡುಬಂತು. ಆದರೆ ಸುಂದರ್ ಅವರನ್ನು ಆನ್-ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಮಾನ ನೀಡಿದರು. ಮೂರನೇ ಅಂಪೈರ್‌ಗೆ ಸಾಕಷ್ಟು ಪುರಾವೆಗಳಿಲ್ಲದ ಕಾರಣ ಇಂತಹ ಪರಿಸ್ಥಿತಿಯಲ್ಲಿ 3ನೇ ಅಂಪೈರ್​ ಆನ್-ಫೀಲ್ಡ್ ಅಂಪೈರ್ ಅವರ ತೀರ್ಮಾನವನ್ನು ಎತ್ತಿಹಿಡಿದರು.

7 / 7
ಭಾರತದ ನಾಯಕ ವಿರಾಟ್ ಕೊಹ್ಲಿ ಪಂದ್ಯದ ನಂತರ ಈ ವಿಷಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತನಗೆ ಗೊತ್ತಿಲ್ಲದ ಸಾಫ್ಟ್ ಸಿಗ್ನಲ್ ಎಂದು ಅಂಪೈರ್ ಏಕೆ ಹೇಳಲು ಸಾಧ್ಯವಿಲ್ಲ ಎಂದು ಕೊಹ್ಲಿ ಆಶ್ಚರ್ಯಪಟ್ಟರು. ಕ್ರಿಕೆಟ್ ಅನ್ನು ಉತ್ತಮಗೊಳಿಸಲು, ಇಂತಹ ನ್ಯೂನತೆಗಳನ್ನು ತೆಗೆದುಹಾಕುವ ಅವಶ್ಯಕತೆಯಿದೆ ಎಂದು ಕೊಹ್ಲಿ ಹೇಳಿದರು.

Published On - 2:02 pm, Fri, 19 March 21