Happy Birthday Saina: ಹೆಣ್ಣೆಂದು ತನ್ನ ಅಜ್ಜಿಯಿಂದ ತಿರಸ್ಕಾರಕ್ಕೊಳಗಾಗಿದ್ದ ಸೈನಾ ನೆಹ್ವಾಲ್​ಗೆ ಇಂದು 31ನೇ ಜನುಮದಿನ

|

Updated on: Mar 17, 2021 | 4:40 PM

ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಸೈನಾ ನೆಹ್ವಾಲ್​ ಅವರ ಅಜ್ಜಿ, ಸೈನಾ ನೆಹ್ವಾಲ್ ಜನಿಸಿ ಒಂದು ತಿಂಗಳು ಕಳೆದಿದ್ದರು ಸಹ, ತಮ್ಮ ಮೊಮ್ಮಗಳನ್ನು ನೋಡಿರಲಿಲ್ಲ.

1 / 5
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರಿಗೆ ಇಂದು 31ನೇ ವರ್ಷದ ಜನುಮ ದಿನ. ಬ್ಯಾಡ್ಮಿಂಟನ್‌ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಸೈನಾ, ದೇಶದ ಪ್ರತಿ ಪ್ರಮುಖ ಪಂದ್ಯಾವಳಿ ಮತ್ತು ಸರಣಿಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ. ಅವರು ಭಾರತದಲ್ಲಿ ಈ ಆಟಕ್ಕೆ ಹೊಸ ಗುರುತನ್ನು ನೀಡಿದ್ದಾರೆ.

2 / 5
ಸೈನಾ ನೆಹ್ವಾಲ್​

ಸೈನಾ ನೆಹ್ವಾಲ್​

3 / 5
ಸೈನಾ ಅವರ ವೃತ್ತಿಜೀವನವು ಬ್ಯಾಡ್ಮಿಂಟನ್ ಅಲ್ಲ, ಕರಾಟೆ ಯಿಂದ ಪ್ರಾರಂಭವಾಯಿತು. ಈ ಆಟದಲ್ಲಿ ಅವರು ಅನೇಕ ಸ್ಪರ್ಧೆಗಳನ್ನು ಗೆದ್ದಿದ್ದಾರೆ. ಅವರ ಬ್ಯಾಡ್ಮಿಂಟನ್ ವೃತ್ತಿಜೀವನವು ಹೈದರಾಬಾದ್ನಲ್ಲಿ ಪ್ರಾರಂಭವಾಯಿತು. ಅಲ್ಲಿ ಆಂಧ್ರಪ್ರದೇಶದ ಕ್ರೀಡಾ ಪ್ರಾಧಿಕಾರದ ಬ್ಯಾಡ್ಮಿಂಟನ್ ಕೋಚ್ ಪಿಎಸ್ಎಸ್ ಪ್ರಸಾದ್ ರಾವ್, ಮಗಳನ್ನು ಬ್ಯಾಡ್ಮಿಂಟನ್ ಆಡಲು ಕರೆತರುವಂತೆ ಸೈನಾ ತಂದೆಗೆ ಸಲಹೆ ನೀಡಿದರು.

4 / 5
ಸೈನಾ ನೆಹ್ವಾಲ್ ಅವರ ಜೀವನದ ಬಗ್ಗೆ ಬಯೋಪಿಕ್ ಚಿತ್ರವೊಂದನ್ನು ಸಹ ತಯಾರಿಸಲಾಗುತ್ತಿದೆ. ಇದರಲ್ಲಿ ಪರಿಣಿತಿ ಚೋಪ್ರಾ ಸೈನಾ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರಕ್ಕೆ 'ಸೈನಾ' ಎಂದು ಹೆಸರಿಸಲಾಗಿದೆ. ಈ ಚಿತ್ರದ ಟ್ರೈಲರ್ ಅನ್ನು ಮಾರ್ಚ್ 8 ರಂದು ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು. 'ಸೈನಾ' ಚಿತ್ರ ಮಾರ್ಚ್ 26 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

5 / 5
ಮಾರ್ಚ್ 28, 2015 ರಂದು ನಡೆದ ಇಂಡಿಯಾ ಓಪನ್ ಸೂಪರ್ ಸೀರೀಸ್ ಸೆಮಿಫೈನಲ್‌ನಲ್ಲಿ ಸ್ಪೇನ್‌ನ ಕೆರೊಲಿನಾ ಮರಿನ್ ಅವರನ್ನು ಸೋಲಿಸಿ ವಿಶ್ವದ ಪ್ರಥಮ ಶ್ರೇಯಾಂಕವನ್ನು ಗಳಿಸಿದ ಮೊದಲ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್. ಕಾಮನ್ವೆಲ್ತ್, ಏಷ್ಯನ್ ಗೇಮ್ಸ್, ಸೂಪರ್ ಸೀರೀಸ್ ಜೊತೆಗೆ, 2012 ರಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದಿದ್ದಾರೆ.

Published On - 4:39 pm, Wed, 17 March 21