- Kannada News Photo gallery Indian billionaire, Mukesh Ambani's wife, Nita Ambani's personal make-up artist, how much money the makeup maverick charges per person
ನೀತಾ ಅಂಬಾನಿಯ ಮೇಕಪ್ ಆರ್ಟಿಸ್ಟ್ ಪಡೆಯುವ ಸಂಭಾವಣೆ ಎಷ್ಟು ಗೊತ್ತಾ?
ಯಾವುದೇ ವಿಶೇಷ ಕಾರ್ಯಕ್ರಮಗಳಿಗೆ ನೀತಾ ಅಂಬಾನಿಯ ಮೇಕಪ್ ಮಾಡುವುದು ಭಾರತದಲ್ಲಿ ಜನಪ್ರಿಯ ಮೇಕಪ್ ಕಲಾವಿದರಾದ ಮಿಕ್ಕಿ ಕಂಟ್ರಾಕ್ಟರ್. ಇವರು ಪಡೆಯುವ ಸಂಭಾವನೆ ತಿಳಿದರೆ ನೀವು ಶಾಕ್ ಆಗುವುದಂತೂ ಖಂಡಿತಾ.
Updated on:Apr 28, 2023 | 12:07 PM

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ತನ್ನ ಜೀವನಶೈಲಿಯಿಂದಲೇ ಭಾರೀ ಸುದ್ದಿಯಲ್ಲಿರುತ್ತಾರೆ.

ಇತ್ತೀಚೆಗಷ್ಟೇ ಮದುವೆ ಸಮಾರಂಭದಲ್ಲಿ ಪಚ್ಚೆ ರತ್ನಗಳು ಹಾಗೂ ಇತರ ಹರುಳುಗಳಿಂದ ಕೂಡಿದ ಗುಲಾಬಿ ಬಣ್ಣದ ವಿಶ್ವದ ಅತ್ಯಂತ ದುಬಾರಿ ಸೀರೆಯನ್ನು ಧರಿಸಿದ್ದರು.

ಪ್ರತೀ ಸಮಾರಂಭಗಳಲ್ಲಿ ನೀತಾ ಅಂಬಾನಿ ತನ್ನ 60ನೇ ವಯಸ್ಸಿನಲ್ಲೂ ಅಷ್ಟು ಸುಂದರವಾಗಿ ಕಾಣಬೇಕಾದರೆ ಅವರ ಮೇಕಪ್ ಆರ್ಟಿಸ್ಟ್ ಕೈ ಚಳಕದಿಂದ ಮಾತ್ರ ಸಾಧ್ಯ.

ಯಾವುದೇ ವಿಶೇಷ ಕಾರ್ಯಕ್ರಮಗಳಿಗೂ ನೀತಾ ಅಂಬಾನಿಯ ಮೇಕಪ್ ಮಾಡುವುದು ಭಾರತದಲ್ಲಿ ಜನಪ್ರಿಯ ಮೇಕಪ್ ಕಲಾವಿದರಾದ ಮಿಕ್ಕಿ ಕಂಟ್ರಾಕ್ಟರ್. ಇವರು ಪಡೆಯುವ ಸಂಭಾವನೆ ತಿಳಿದರೆ ನೀವು ಶಾಕ್ ಆಗುವುದಂತೂ ಖಂಡಿತಾ.

ಮಿಕ್ಕಿ ಕಂಟ್ರಾಕ್ಟರ್ ಭಾರತದ ಜನಪ್ರಿಯ ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ . ಸಾಕಷ್ಟು ಬಾಲಿವುಡ್ ನಟ ನಟಿಯರಿಗಂತೂ ಇವರ ಮೇಕಪ್ ಅಚ್ಚು ಮೆಚ್ಚು.

ವರದಿಯೊಂದರ ಪ್ರಕಾರ ಮಿಕ್ಕಿ ಒಬ್ಬರಿಗೆ ಮೇಕಪ್ ಮಾಡಲು 75,000 ರಿಂದ 1 ಲಕ್ಷ ರೂ. ತೆಗೆದುಕೊಳ್ಳುತ್ತಾರೆ. ಇವರು ಭಾರತದ ಅತ್ಯಂತ ದುಬಾರಿ ಮೇಕಪ್ ಕಲಾವಿದರಾಗಿದ್ದು, ತಿಂಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಾರೆ.
Published On - 12:07 pm, Fri, 28 April 23




