ಹಾಂಗ್ಕಾಂಗ್ ಮೂಲದ ಜನಪ್ರಿಯ ಸ್ಮಾರ್ಟ್ಫೋನ್ ಕಂಪೆನಿ ಇನ್ಫಿನಿಕ್ಸ್ (Infinix) ಸ್ಮಾರ್ಟ್ 5 ಪ್ರೊ (Infinix Smart 5 Pro) ಹೆಸರಿನ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿರುವ ಈ ಸ್ಮಾರ್ಟ್ಫೋನ್ ಅತ್ಯುತ್ತಮ ಫೀಚರ್ಗಳನ್ನು ನೀಡಲಾಗಿರುವುದು ವಿಶೇಷ.
ಇನ್ಫಿನಿಕ್ಸ್ ಸ್ಮಾರ್ಟ್ 5 Pro (Infinix Smart 5 Pro) ಹೆಸರಿನಲ್ಲಿ ಬಿಡುಗಡೆಯಾಗಿರುವ ಈ ಫೋನ್‌ನಲ್ಲಿ 2GB RAM + 32GB ಸ್ಟೊರೇಜ್ ಸಾಮರ್ಥ್ಯ ನೀಡಲಾಗಿದೆ. ಇನ್ನು ಈ ಸ್ಮಾರ್ಟ್ಫೋನ್ನ ವಿಶೇಷತೆಗಳನ್ನು ನೋಡುವುದಾದರೆ...
ಸ್ಮಾರ್ಟ್ 5 ಪ್ರೊನಲ್ಲಿ 6.52 ಇಂಚಿನ ಡಿಸ್‌ಪ್ಲೇ ಇದ್ದು, ಅದರ ಮೇಲ್ಭಾಗದಲ್ಲಿ ವಾಟರ್ ಡ್ರಾಪ್ ನಾಚ್ ವಿನ್ಯಾಸ ನೀಡಲಾಗಿದೆ. ಹಾಗೆಯೇ ಇದರಲ್ಲಿ HD + ರೆಸಲ್ಯೂಶನ್ ಡಿಸ್‌ಪ್ಲೇ ನೀಡಲಾಗಿದ್ದು, ಇದು 60Hz ರಿಫ್ರೆಶ್ ರೇಟ್ ಹೊಂದಿರಲಿದೆ. ಈ ಫೋನ್ Android 11 ಅಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದ್ದು, ಜೊತೆಗೆ ಎಲ್ಇಡಿ ಫ್ಲ್ಯಾಷ್ ಸಹ ಇರಲಿದೆ. ಈ ಫೋನ್ 13 ಮೆಗಾಪಿಕ್ಸೆಲ್ ಮೈನ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿರಲಿದೆ. ಫೋನ್‌ನ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಲಾಗಿದೆ.
ಸ್ಮಾರ್ಟ್ 5 ಪ್ರೊ ಮೊಬೈಲ್ನ ಸ್ಟೊರೇಜ್ ಅನ್ನು ಮೈಕ್ರೋ SD ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದು. ಹಾಗೆಯೇ ಫೋನ್‌ನಲ್ಲಿ 6000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಿರುವುದು ವಿಶೇಷ. ಇದು 18W ವೇಗದ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ. ಇದಲ್ಲದೆ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹಾಗೂ AI ಫೇಸ್ ಲಾಕ್ ಅನ್ನು ಈ ಸ್ಮಾರ್ಟ್ಫೋನ್ ಸಪೋರ್ಟ್ ಮಾಡುತ್ತದೆ.
Infinix Smart 5 Pro ಸದ್ಯ XPark ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದ್ದು, ಅಲ್ಲಿನ ಬೆಲೆ PKR 14,499. ಅಂದರೆ ಸುಮಾರು 6,200 ರೂ. ಶೀಘ್ರದಲ್ಲೇ ಇನ್ಫಿನಿಕ್ಸ್ ಸ್ಮಾರ್ಟ್ 5 ಪ್ರೋ ಭಾರತದಲ್ಲೂ ಬಿಡುಗಡೆಯಾಗಲಿದೆ ಎಂದು ಕಂಪೆನಿ ತಿಳಿಸಿದೆ.