
ಬೆಂಗಳೂರು ಮೂಲದ ಸಾಫ್ಟ್ವೇರ್ ಕಂಪೆನಿಯಾದ ಇನ್ಫೋಸಿಸ್ ಕಳೆದ ಕೆಲ ತಿಂಗಳಿಂದ ಸುದ್ದಿಯಲ್ಲಿದೆ. ಅದರಲ್ಲೂ ಆದಾಯ ತೆರಿಗೆ ಪೋರ್ಟಲ್ ಮತ್ತು ಜಿಎಸ್ಟಿ ಪೋರ್ಟಲ್ನ ಹೊಸ ವೆಬ್ಸೈಟ್ನಲ್ಲಿ ತಾಂತ್ರಿಕ ಸಮಸ್ಯೆ ಮೊದಲ ದಿನದಿಂದಲೇ ಕಾಣಿಸಿಕೊಂಡ ಮೇಲೆ ಇದು ಉದ್ಭವಿಸಿದೆ. ಏಕೆಂದರೆ ಆ ವೆಬ್ಪೋರ್ಟಲ್ ಅಭಿವೃದ್ಧಿಯ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದು ಇನ್ಫೋಸಿಸ್ ಕಂಪೆನಿ. ಅದಕ್ಕಾಗಿ ಭಾರತ ಸರ್ಕಾರ ಕೋಟ್ಯಂತರ ರೂಪಾಯಿಯ ಒಪ್ಪಂದ ಸಹ ಮಾಡಿಕೊಂಡಿತ್ತು. ಆದರೆ ಆ ವೆಬ್ಪೋರ್ಟಲ್ ಬಳಕೆಗೆ ಬಿಡುಗಡೆಯಾದ ದಿನದಿಂದಲೇ ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ. ಇದು ಒತ್ತಟ್ಟಿಗಿರಲಿ, ಈಗ ಅದಕ್ಕೆ ರಾಜಕೀಯ ಬಣ್ಣ ಬಂದಿದೆ. ರಾಷ್ಟ್ರೀಯ ಸ್ವಯಂ ಸೇವಕ್ ಸಂಘ್ (ಆರೆಸ್ಸೆಸ್) ಮುಖವಾಣಿ ಪಾಂಚಜನ್ಯದಿಂದ ಇನ್ಫೋಸಿಸ್ ಕಂಪೆನಿಯನ್ನು ಸಿಕ್ಕಾಪಟ್ಟೆ ಟೀಕಿಸಲಾಗಿದೆ. ಭಾರತದ ಆರ್ಥಿಕ ಹಿತಾಸಕ್ತಿಗೆ ಧಕ್ಕೆ ತರುವ ಉದ್ದೇಶದಿಂದ ದೇಶದ್ರೋಹಿ ಶಕ್ತಿಗಳ ಜತೆಗೂಡಿ ಇನ್ಫೋಸಸ್ ಹೀಗೆ ಮಾಡಿದೆ ಎಂದು ಪಾಂಚಜನ್ಯದಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ಈ ಲೇಖನವೇ ದೇಶವಿರೋಧಿ ಹಾಗೂ ಅತಿರೇಕದ್ದು ಎಂದಿದ್ದಾರೆ.

ಭಾರತದ ಬದಲಾವಣೆಯಲ್ಲಿ ಇನ್ಫೋಸಿಸ್ನಂಥ ಕಂಪೆನಿಯ ಪಾತ್ರವಿದೆ. ವಿಶ್ವದಲ್ಲಿ ಅದಕ್ಕೊಂದು ಸ್ಥಾನವಿದೆ. ಸರ್ಕಾರದ ಮೇಲಿನ ನಿಂದೆಯನ್ನು ವರ್ಗಾಯಿಸುವ ಪ್ರಯತ್ನ ಇದು. ಇದನ್ನು ಸಂಪೂರ್ಣವಾಗಿ ಖಂಡಿಸಬೇಕು ಎಂದು ಅವರು ಹೇಳಿದ್ದಾರೆ. ಅಂದಹಾಗೆ ಪಾಂಚಜನ್ಯ ಸಾಪ್ತಾಹಿಕದಿಂದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಕ್ಷಾ ರಾಮಯ್ಯ ಅವರನ್ನು ಸಹ ಟೀಕಿಸಲಾಗಿದೆ. ಪೋರ್ಟಲ್ಗಳಲ್ಲಿ ಹಲವು ಸಮಸ್ಯೆಗಳಿದ್ದು, ಬಳಕೆದಾರರು ನಾನಾ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಪೋರ್ಟಲ್ಗಳಲ್ಲಿ ಇರುವ ಗಂಭೀರ ದೋಷಗಳನ್ನು ಗಮನಿಸಿದರೆ ಇನ್ಫೋಸಿಸ್ನ ವಿಶ್ವಾರ್ಹತೆ ಪ್ರಶ್ನಾರ್ಹವಾಗಿದೆ ಎಂದು ಬರೆಯಲಾಗಿದೆ.

ಸರ್ಕಾರದ ಮೇಲಿನ ಸಾರ್ವಜನಿಕರ ನಂಬಿಕೆ ಮೇಲೆ ಪರಿಣಾಮ

ದೇಶವಿರೋಧಿ ಶಕ್ತಿಗಳ ಜತೆ ಇನ್ಫೋಸಿಸ್ ಕೈ ಜೋಡಿಸಿರುವ ಆರೋಪ

ಜಾತಿದ್ವೇಷ ಬಿತ್ತುವ ಸಂಸ್ಥೆಗಳಿಗೆ ಹಣಕಾಸಿನ ನೆರವು

ಅಂತರ ಕಾಯ್ದುಕೊಂಡ ಆರೆಸ್ಸೆಸ್ (ಪ್ರಾತಿನಿಧಿಕ ಚಿತ್ರ- ಹಳೆಯದು)
Published On - 12:03 pm, Mon, 6 September 21