Kannada News Photo gallery Innovative efforts to attract readers in haveri district, There is a digital library in the village, here are the photos
ಓದುಗರ ಆಕರ್ಷಣೆಗಾಗಿ ವಿನೂತನ ಪ್ರಯತ್ನ; ಗ್ರಾಮದಲ್ಲೊಂದು ಡಿಜಿಟಲ್ ಲೈಬ್ರರಿ, ಇಲ್ಲಿದೆ ಪೋಟೋಸ್
ಪ್ರತಿಯೊಂದು ಗ್ರಾಮದಲ್ಲಿ ಗ್ರಂಥಾಲಯ ಇದ್ದೆ ಇರುತ್ತೆ. ಕೆಲವು ಗ್ರಾಮಗಳಲ್ಲಿ ದಿನಪತ್ರಿಕೆ ಓದಲು ಮಾತ್ರ ಸಿಮೀತವಾಗಿರುತ್ತವೆ. ಅದರೆ, ಇಲ್ಲೊಂದು ಗ್ರಾಮದಲ್ಲಿ ನೂರಾರು ವರ್ಷಗಳ ಹಳೆಯ ಕಟ್ಟಡವನ್ನ ರಿಪೇರಿ ಮಾಡಿಸಿ, ಡಿಜಿಟಲ್ ಲೈಬ್ರರಿ ಮಾಡಿದ್ದಾರೆ. ಸುಂದರವಾದ ಗಾರ್ಡನ್, ಕಂಪ್ಯೂಟರ್, ಪುಸ್ತಕ ಸೇರಿದಂತೆ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರು ಓದುವ ಹಾಗೆ ಮಾದರಿ ಗ್ರಂಥಾಲಯ ಮಾಡಿದ್ದು, ಈ ಡಿಜಿಟಲ್ ಗ್ರಂಥಾಲಯದ ಝಲಕ್ ಇಲ್ಲಿದೆ ನೋಡಿ.
1 / 7
ಗ್ರಂಥಾಲಯದ ಮುಂದೆ ನಿರ್ಮಾಣವಾದ ಸುಂದರವಾದ ಗಾರ್ಡನ್. ಗೋಡೆಯ ಮೇಲೆ ನಾಯಕರ ಭಾವಚಿತ್ರ. ಲೈಬ್ರರಿಯಲ್ಲಿ ಓದುತ್ತಿರುವ ಹಿರಿಯರು, ಇದು ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಮಾಡಲ್ ಲೈಬ್ರರಿ.
2 / 7
ಹೌದು ದೇವಗಿರಿ ಗ್ರಾಮದ ಗ್ರಾಮ ಪಂಚಾಯತಿ ಮುಂದೆ, ನೂರು ವರ್ಷದ ಹಳೆಯ ಕಟ್ಟಡದ ಇತ್ತು. ಅದರಲ್ಲಿ ಗ್ರಾಮದ ಜನರು ಜೂಜಾಟ, ಸುಮ್ಮನೆ ಕಾಲಹರಣ ಮಾಡುತ್ತಿದ್ದರು. ಅದರೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಪಿಡಿಓ ಸೇರಿದಂತೆ ಒಂದು ಸುಂದರ ಗ್ರಂಥಾಲಯ ಮಾಡಲು ಯೋಜನೆ ರೂಪಿಸಿದರು. ಅದರಂತೆ ಗ್ರಾಮ ಪಂಚಾಯತಿ 15 ನೇ ಹಣಕಾಸು ಯೋಜನೆಯಲ್ಲಿ ಕಟ್ಟಡವನ್ನ ರಿಪೇರಿ ಮಾಡಿಸಿ, ಬಣ್ಣ ಬಳಿಸಿ ಸುಂದರ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ.
3 / 7
ಇನ್ನು ಗ್ರಂಥಾಲಯದ ಮುಂದೆ ಗಾರ್ಡನ್, ಗೋಡೆಯ ಮೇಲೆ ಗಣಪತಿ, ಸರಸ್ವತಿ, ಅಬ್ದುಲ್ ಕಲಾಂ ಸೇರಿದಂತೆ ಗಣ್ಯರ ಚಿತ್ರವನ್ನ ಬರೆಯಲಾಗಿದೆ. 10 ರಿಂದ 14 ಲಕ್ಷ ರೂಪಾಯಿ ಖರ್ಚು ಮಾಡಿ, ಉತ್ತಮ ಲೈಬ್ರರಿ ನಿರ್ಮಾಣ ಮಾಡಲಾಗಿದೆ. ಅದರಲ್ಲೂ ಗ್ರಂಥಾಲಯದಲ್ಲಿ ಸುಮಾರು 5000 ಕ್ಕೂ ಅಧಿಕ ಪುಸ್ತಕವನ್ನು ಜೋಡಣೆ ಮಾಡಲಾಗಿದ್ದು, ಹಾವೇರಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಒಂದು ಮಾದರಿಯ ಗ್ರಂಥಾಲಯ ಮಾಡಿದ್ದೇವೆ. ಇದರ ಉಪಯೋಗವನ್ನ ಗ್ರಾಮದ ಜನರು ಪಡೆಯುತ್ತಿದ್ದಾರೆ ಎಂದು ಪಿಡಿಓ ಹೇಳಿದರು.
4 / 7
ಲೈಬ್ರರಿ ಹೊಸರೂಪ ಕೊಡೋದರ ಜೊತೆಗೆ, ಲೈಬ್ರರಿಯಲ್ಲಿ 5 ಸಾವಿರ ಪುಸ್ತಕಗಳು ಹಾಗೂ ಐದು ಡಿಜಿಟಲ್ ಲೈಬ್ರರಿ ಕಂಪ್ಯೂಟರ್ ಅಳವಡಿಸಲಾಗಿದೆ. ಈಗಾಗಲೇ 1875 ಕ್ಕೂ ಅಧಿಕ ಜನರ ಲೈಬ್ರರಿ ಸದಸ್ಯರಾಗಿದ್ದು, ಪ್ರತಿನಿತ್ಯ ಓದಲು ವಯೋವೃದ್ದರಿಂದ ಹಿಡಿದು ಚಿಕ್ಕ ಮಕ್ಕಳು ಸಹ ಗ್ರಂಥಾಲಯಕ್ಕೆ ಆಗಮಿಸುತ್ತಿದ್ದಾರೆ.
5 / 7
ಲೈಬ್ರರಿಯಲ್ಲಿ ಕಥೆ, ಕಾದಂಬರಿ, ಚಿಕ್ಕಮಕ್ಕಳ ಪುಸ್ತಕ, ಗೇಮ್ ಹಾಗೂ ಕಂಪ್ಯೂಟರ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಯ ವಿದ್ಯಾರ್ಥಿಗಳು ಸಹ ಅಭ್ಯಾಸ ಮಾಡಲು ಈ ಗ್ರಂಥಾಲಯಕ್ಕೆ ಆಗಮಿಸುತ್ತಾರೆ. ಪಕ್ಕದಲ್ಲೇ ಇಂಜಿನಿಯರ್ ಕಾಲೇಜು ಇರೋದರಿಂದ ಆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪುಸ್ತಕಗಳ ಸಹ ಗ್ರಂಥಾಲಯದಲ್ಲಿ ಇಡಲಾಗಿದೆ.
6 / 7
ಒಂದು ಮಾದರಿಯ ಗ್ರಂಥಾಲಯ ನಿರ್ಮಾಣವಾಗಿದ್ದು, ಇದರ ಪ್ರಯೋಜನವನ್ನ ಯುವಕರು, ವಿದ್ಯಾರ್ಥಿಗಳು ಎಲ್ಲರಿಗೂ ಪಡೆಯುತ್ತಿದ್ದು, ತುಂಬಾ ಸಂತಸವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
7 / 7
ಒಟ್ಟಿನಲ್ಲಿ ಮನಸ್ಸು ಇದ್ದಲ್ಲಿ ಮಾರ್ಗ ಎನ್ನುವ ಹಾಗೆ ಗ್ರಾಮದ ಜನರು ಹಾಗೂ ಪಂಚಾಯತಿ ಸದಸ್ಯರು ಸೇರಿ ಹಳೆಯ ಗ್ರಂಥಾಲಯಕ್ಕೆ ಹೊಸರೂಪ ನೀಡಿದ್ದಾರೆ. ಇದರಿಂದ ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಲೈಬ್ರರಿ ಸಹಕಾರಿಯಾಗಿದೆ.