Kannada News Photo gallery International Day of Yoga: India's greatest contribution to the world of yoga: Norwegian Ambassador National News
International Day of Yoga: ಯೋಗ ವಿಶ್ವಕ್ಕೆ ಭಾರತ ನೀಡಿದ ಶ್ರೇಷ್ಠ ಕೊಡುಗೆ: ನಾರ್ವೇಜಿಯನ್ ರಾಯಭಾರಿ
ಜೂನ್ 21ರಂದು ವಿಶ್ವ ಯೋಗ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಬಗ್ಗೆ ಪ್ರಧಾನಿ ಮೋದಿ ಅವರು ಎಕ್ಸ್ ಒಂದು ಪೋಸ್ಟ್ನ್ನು ಹಾಕಿದ್ದಾರೆ. ಈ ಪೋಸ್ಟ್ಗೆ ನಾರ್ವೇಜಿಯನ್ ರಾಯಭಾರಿ ಮೇ-ಎಲಿನ್ ಸ್ಟೆನರ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
1 / 6
ಯೋಗವು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಒಂದುಗೂಡಿಸುತ್ತದೆ. ಹಾಗೂ ಇದು ಜಗತ್ತಿಗೆ ಭಾರತ ನೀಡಿದ ಶ್ರೇಷ್ಠ ಕೊಡುಗೆಗಳಲ್ಲಿ ಒಂದಾಗಿದೆ ಎಂದು ಭಾರತದಲ್ಲಿರುವ ನಾರ್ವೇಜಿಯನ್ ರಾಯಭಾರಿ ಮೇ-ಎಲಿನ್ ಸ್ಟೆನರ್ ಹೇಳಿದ್ದಾರೆ.
2 / 6
ಜೂನ್ 21 ರಂದು ಜಗತ್ತಿನಾದ್ಯಂತ ವಿಶ್ವ ಯೋಗ ದಿನವನ್ನು ಆಚರಣೆ ಮಾಡಲಾಗಿದೆ. ಪ್ರಧಾನಿ ಮೋದಿ ಅವರು ಈ ಬಗ್ಗೆ ಎಕ್ಸ್ ಒಂದು ಪೋಸ್ಟನ್ನು ಹಾಕಿದ್ದರು. ಇದಕ್ಕೆ ಮೇ-ಎಲಿನ್ ಸ್ಟೆನರ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಮೋದಿ ಅವರು ಕೂಡ ಒಂದು ವಿಡಿಯೋ ಫೋಟೋವನ್ನು ಹಂಚಿಕೊಂಡಿದ್ದಾರೆ.
3 / 6
ಯೋಗವು ಸಾಂಸ್ಕೃತಿಕ ಮತ್ತು ಭೌಗೋಳಿಕ ಗಡಿಗಳನ್ನು ಮೀರಿದೆ ಮತ್ತು ಪ್ರಪಂಚದಾದ್ಯಂತ ಜನರನ್ನು ಒಗ್ಗೂಡಿಸಿದೆ ಎಂದು ಪ್ರಧಾನಿ ಮೋದಿ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
4 / 6
ಜೂನ್ 21ರಂದು ವಿಶ್ವ ಯೋಗ ದಿನವನ್ನು ವಿಶ್ವದಲ್ಲೇ ಆಚರಣೆ ಮಾಡಲಾಗುತ್ತದೆ. ಇದು ಭಾರತಕ್ಕೆ ನೀಡಿದ ಒಂದು ಉತ್ತಮ ಕೊಡುಗೆಯಾಗಿದೆ. ಏಕತೆ ಮತ್ತು ಸಾಮರಸ್ಯವನ್ನು ಆಚರಿಸುವ ಸಮಯರಹಿತ ಅಭ್ಯಾಸವಾಗಿದೆ.
5 / 6
ಪ್ರಧಾನಿ ಮೋದಿ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಮೇ-ಎಲಿನ್ ಸ್ಟೆನರ್, "ನೀವು ಹೇಳಿದನ್ನು ನಾವು ಒಪ್ಪಿಕೊಳ್ಳುತ್ತೇವೆ. ಯೋಗ ಭಾರತ ನೀಡಿದ ಶ್ರೇಷ್ಠ ಕೊಡುಗೆಯಾಗಿದೆ. ಯೋಗವನ್ನು ನಾನು ಕರಗತ ಮಾಡಿಕೊಂಡಿದ್ದೇನೆ. ನಾವು ಯೋಗದ ಮೂಲ ಒಂದು ದೊಡ್ಡ ಸಾಧನೆಯನ್ನು ಮಾಡಿದ್ದೇವೆ. ವಿಶ್ವ ಯೋಗ ದಿನದಂದು ಎಲ್ಲರೂ ಕೂಡ ಯೋಗ ಮಾಡೋಣ" ಎಂದು ಕರೆ ನೀಡಿದ್ದಾರೆ. ಇದರ ಜತೆಗೆ ಮೇ-ಎಲಿನ್ ಸ್ಟೆನರ್ ಯೋಗ ಆಭ್ಯಾಸದ ಫೋಟೋಗಳನ್ನು ಕೂಡ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
6 / 6
ಮೋದಿ ಅವರು ಹಂಚಿಕೊಂಡ ಪೋಸ್ಟ್ ಹೀಗಿತ್ತು, " ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸುವ ಬದ್ಧತೆಯನ್ನಾಗಿ ಮಾಡಿಕೊಳ್ಳಬೇಕು. ಇನ್ನು ಹತ್ತು ದಿನ ಮಾತ್ರ ಬಾಕಿದೆ. ಏಕತೆ ಮತ್ತು ಸಾಮರಸ್ಯವನ್ನು ಆಚರಿಸುವ ಸಮಯರಹಿತ ಅಭ್ಯಾಸವನ್ನು ನಾವು ಮಾಡಬೇಕಿದೆ. ಯೋಗವು ಸಾಂಸ್ಕೃತಿಕ ಮತ್ತು ಭೌಗೋಳಿಕ ಗಡಿಗಳನ್ನು ಮೀರಿದೆ, ಸಮಗ್ರ ಯೋಗಕ್ಷೇಮದ ಅನ್ವೇಷಣೆಯಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಒಂದುಗೂಡಿಸಿದೆ" ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.