ಮಡಿಕೇರಿ ಹಾಕಿ ಗ್ರೌಂಡ್ಗೆ ಅಂತಾರಾಷ್ಟ್ರೀಯ ಗುಣಮಟ್ಟದ ನೀಲಿ ಆಸ್ಟ್ರೋ ಟರ್ಫ್
ಹಾಕಿ ತವರು ಕೊಡಗು ಜಿಲ್ಲೆಯಲ್ಲಿ ಹಾಕಿ ಅಭಿವೃದ್ಧಿಗೆ ಪೂರಕ ಕ್ರಮಗಳಾಗುತ್ತಿವೆ. ಮಡಿಕೇರಿ ನಗರದ ಏಕೈಕ ಹಾಕಿ ಮೈದಾನಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದ ನೀಲಿ ಆಸ್ಟ್ರೋ ಟರ್ಫ್ ಆಗಮಿಸಿದೆ. ಇನ್ನೊಂದು ತಿಂಗಳಲ್ಲಿ ಈ ಟರ್ಫ್ ಅಳವಡಿಕೆಯಾಗಲಿದ್ದು, ಮಡಿಕೇರಿ ಜನರಿಗೆ ಹೊಸ ಟರ್ಫ್ನಲ್ಲಿ ಆಡುವ ಭಾಗ್ಯ ಒದಗಿ ಬರಲಿದೆ.
1 / 6
ಹಾಕಿ ತವರು ಕೊಡಗು ಜಿಲ್ಲೆಯಲ್ಲಿ ಹಾಕಿ ಅಭಿವೃದ್ಧಿಗೆ ಪೂರಕ ಕ್ರಮಗಳಾಗುತ್ತಿವೆ. ಮಡಿಕೇರಿ ನಗರದ ಏಕೈಕ ಹಾಕಿ ಮೈದಾನಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದ ನೀಲಿ ಆಸ್ಟ್ರೋ ಟರ್ಫ್ ಆಗಮಿಸಿದೆ. ಇನ್ನೊಂದು ತಿಂಗಳಲ್ಲಿ ಈ ಟರ್ಫ್ ಅಳವಡಿಕೆಯಾಗಲಿದ್ದು, ಮಡಿಕೇರಿ ಜನರಿಗೆ ಹೊಸ ಟರ್ಫ್ನಲ್ಲಿ ಆಡುವ ಭಾಗ್ಯ ಒದಗಿ ಬರಲಿದೆ.
2 / 6
ಒಂದು ರೀತಿಯಲ್ಲಿ ಹಾಕಿ ತವರು ಕೊಡಗು ಜಿಲ್ಲೆಯಲ್ಲಿ ಮನೆಗೊಬ್ಬರು ಹಾಕಿ ಆಟಗಾರರು ಇದ್ದೇ ಇರುತ್ತಾರೆ. ಹಾಗಾಗಿಯೇ ಜಿಲ್ಲೆಯಿಂದ ರಾಜ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಕಿ ಆಡಿದ 70ಕ್ಕೂ ಅಧಿಕ ಹಾಕಿ ಪಟುಗಳಿದ್ದಾರೆ. ಈ ಜಿಲ್ಲೆಯ ಹಾಕಿ ಪಟುಗಳನ್ ಉತ್ತೇಜಿಸಲೆಂದೇ 2007ರಲ್ಲಿ ಮಡಿಕೇರಿಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ವತಿಯಿಂದ ಆಸ್ಟ್ರೋ ಟರ್ಫ್ ಕ್ರೀಡಾಂಗಣ ನಿರ್ಮಿಸಲಾಗಿತ್ತು.
3 / 6
ಈ ಕ್ರೀಡಾಂಗಣಕ್ಕೆ ಇದೀಗ 17 ವರ್ಷವಾಗಿದ್ದು, ಹಸಿರು ಬಣ್ಣದ ಟರ್ಫ್ ಗುಣಮಟ್ಟ ಕಳೆದುಕೊಂಡಿದೆ. ಹಾಗಾಗಿ ಇದೀಗ ಬೆಂಗಳೂರಿನ ರಾಜ್ಯ ಹಾಕಿ ಕ್ರೀಡಾಂಗಣದಿಂದ ನೀಲಿ ಬಣ್ಣದ ಆಸ್ಟ್ರೋ ಟರ್ಫ್ ನ್ನು ಇಲ್ಲಿಗೆ ತರಲಾಗಿದ್ದು, ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.
4 / 6
ಹಳೆಯ ಟರ್ಫ್ ಸ್ಥಿತಿಸ್ಥಾಪಕತ್ವ ಗುಣ ಕಲೆದುಕೊಂಡಿತ್ತು. ಇದರಿಂದ ಆಟಗಾರರಿಗೆ ವಿವಿಧ ದೈಹಿಕ ಸಮಸ್ಯೆಗಳು ಕಾನಿಸಿಕೊಳ್ಲುತ್ತಿದ್ದವು. ಇದೀಗ ಹೊಸ ಟರ್ಫ್ ಅಳವಡಿಸುತ್ತಿರುವುದರಿಂದ ಆಟಗಾರರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಅನುಭವವಾಗುತ್ತದೆ.
5 / 6
ಸಧ್ಯ ಕ್ರೀಡಾಂಗಣದಲ್ಲಿದ್ದ ಹಳೆಯ ಟರ್ಫ್ ಅನ್ನ ಕಿತ್ತು ಹೊಸ ಟರ್ಫ್ ಅಳವಡಿಸಲು ಬೇಕಾದ ಕಾಮಗಾರಿ ನಡೆಸಲಾಗುತ್ತಿದೆ. ಆರಂಭದಲ್ಲಿ ನೆಲದ ಮೇಲೆ ರಬ್ಬರ್ ಹುಡಿಗೆ ಗಂ ಮಿಶ್ರಣ ಮಾಡಿ ಅದನ್ನ ಡಾಂಬರು ಮಾದರಿಯಲ್ಲಿ
ಕ್ರೀಡಾಂಗಣದಲ್ಲಿ ಗುಂಡಿ ಬಿದ್ದ ಕಟಡೆಗಳಲ್ಲಿ ಅಳವಡಿಸಲಾಗುತ್ತಿದೆ. ಆದ್ರೆ, ಆಗಸ್ಟ್ ತಿಂಗಳಿನಿಂದಲೇ ವಿಪರೀತ ಮಳೆ ಇದ್ದಿದ್ರಿಂದ ಟರ್ಫ್ ಅಳವಡಿಕೆ ಕಾರ್ಯಕ್ಕೆ ಅಡ್ಡಿಯಾಗಿದೆ. ಆದರೂ ಟರ್ಫ್ ಅಳವಡಿಕೆಗೆ ಬೇಕಾದ
ಕಾರ್ಯ ಪ್ರಗತಿಯಲ್ಲಿದ್ದು, ಇನ್ನೊಂದು ತಿಂಗಳಲ್ಲಿ ನೀಲಿ ಬಣ್ಣದ ಟರ್ಫ್ ಕ್ರೀಡಾಂಗಣವನ್ನ ಅಲಂಕರಿಸಲಿದೆ.
6 / 6
ಇಷ್ಟೆಲ್ಲಾ ಆದರೂ ಜಿಲ್ಲೆಯ ಜನರಲ್ಲಿ ಒಂದು ಕೊರಗು ಕಾಡುತ್ತಿದೆ. ಏನಂದರೆ, ಇಲ್ಲಿಗೆ ಬಂದಿರೋದು ಹೊಸ ಟರ್ಫ್ ಅಲ್ಲ, ಬದಲಿಗೆ ಬೆಂಗಳೂರಿನ ಹಾಕಿ ಸ್ಟೇಡಿಯಂನಲ್ಲಿದ್ದ ಹಳಯ ಟರ್ಫ್. ಇದಕ್ಕೆ ಈಗಾಗಲೇ ಏಳು ವರ್ಷವಾಗಿದ್ದು, ಇನ್ನೊಂದು ಐದು ವರ್ಷವಷ್ಟೆ ಇದು ಬಾಳಿಕೆ ಬರಬಹುದು. ಅದಾದ ಬಳಿಕ ಮತ್ತೆ ಇದನ್ನ ಬದಲಾಯಿಸಬೇಕಾಗುತ್ತದೆ. ಹಾಗಾಗಿ ಮಡಿಕೇರಿಯ ಏಕೈಕ ಆಸ್ಟ್ರೋ ಟರ್ಫ್ ಮೈದಾನಕ್ಕೆ ಹೊಸ ಟರ್ಫ್ ಒದಗಿಸುವಷ್ಟು ಕ್ರೀಡಾ ಪ್ರಾಧಿಕಾರಕ್ಕೆ ಸಾಧ್ಯವಿಲ್ಲದಾಯಿತಾ ಎನ್ನುವ ನೋವು ಕ್ರೀಡಾಪಟುಗಳನ್ನ ಕಾಡಿದೆ.