International Women’s Day 2021: ಕ್ರೀಡೆಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಹೆಮ್ಮೆಯ ನಾರಿಮಣಿಯರು ಇವರು
ಪೃಥ್ವಿಶಂಕರ | Updated By: Digi Tech Desk
Updated on:
Mar 08, 2021 | 3:23 PM
International Women's Day 2021: ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಪ್ರಾಬಲ್ಯವಿದೆ. ಆದರೆ ನಾವು ಇಲ್ಲಿ ಮಾತನಾಡಲು ಹೊರಟಿರುವ 10 ಮಹಿಳೆಯರು ಕ್ರೀಡೆಯಲ್ಲಿ ಸಾಧನೆ ಮೆರೆದಿದ್ದಾರೆ.
1 / 11
ಮಾರ್ಚ್ 8 ರಂದು, ಮಹಿಳಾ ದಿನವನ್ನು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಪ್ರಾಬಲ್ಯವಿದೆ. ಆದರೆ ನಾವು ಇಲ್ಲಿ ಮಾತನಾಡಲು ಹೊರಟಿರುವ 10 ಮಹಿಳೆಯರು ಕ್ರೀಡೆಯಲ್ಲಿ ಸಾಧನೆ ಮೆರೆದಿದ್ದಾರೆ.
2 / 11
ಮೇರಿ ಕೊಂ, ಭಾರತದ ಸ್ಟಾರ್ ಮಹಿಳಾ ಬಾಕ್ಸರ್ 6 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. 38 ನೇ ವಯಸ್ಸಿನಲ್ಲಿಯೂ ಮೇರಿ ಕೋಮ್‌ಗೆ ಸರಿಸಾಟಿ ಯಾರು ಇಲ್ಲ. ಈಗಾಗಲೇ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಇತ್ತೀಚೆಗೆ ಮೇರಿ ಕೋಮ್ ಎಐಬಿಎ ಚಾಂಪಿಯನ್ಸ್ ಮತ್ತು ವೆಟರನ್ಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
3 / 11
ಡಬಲ್ಸ್‌ನಲ್ಲಿ ವಿಶ್ವದ ಮಾಜಿ ನಂಬರ್ ಒನ್ ಆಟಗಾರ್ತಿಯಾಗಿರುವ ಸಾನಿಯಾ ಮಿರ್ಜಾ ಭಾರತದ ಅತ್ಯಂತ ಯಶಸ್ವಿ ಮಹಿಳಾ ಟೆನಿಸ್ ತಾರೆ. ವಿವಿಧ ಟೆನಿಸ್ ಸ್ಪರ್ಧೆಗಳಲ್ಲಿ ಸಾನಿಯಾ ಭಾರತಕ್ಕಾಗಿ ಪದಕಗಳನ್ನು ಗೆದ್ದಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಆಶಯವೂ ಅವರಿಗಿದೆ.
4 / 11
ಪಿವಿ ಸಿಂಧು
5 / 11
ಹರ್ಮನ್‌ಪ್ರೀತ್ ಕೌರ್, ಈ ಭಾರತೀಯ ಕ್ರಿಕೆಟರ್ಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಇನ್ನಷ್ಟು ವಿಶೇಷವಾಗಿದೆ. ಏಕೆಂದರೆ ಈ ದಿನ ಅವರ ಜನ್ಮದಿನವೂ ಆಗಿದೆ. ಮಹಿಳಾ ವಿಶ್ವ ಟಿ 20 ಯಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಮಹಿಳೆ. ಇದಲ್ಲದೆ ಪುರುಷರ ಮತ್ತು ಮಹಿಳಾ ಕ್ರಿಕೆಟ್ ಸೇರಿದಂತೆ 100 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಭಾರತದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
6 / 11
ಹಿಮಾ ದಾಸ್, ಇತ್ತೀಚೆಗೆ ಈ ಭಾರತೀಯ ಓಟಗಾರ್ತೀ ಅಸ್ಸಾಂ ಪೊಲೀಸ್ ವಿಭಾಗದಲ್ಲಿ ಡಿಎಸ್ಪಿ ಹುದ್ದೆಯನ್ನು ಪಡೆದಿದ್ದಾರೆ. ದಿಂಗ್ ಎಕ್ಸ್‌ಪ್ರೆಸ್ ಎಂದು ಕರೆಯಲ್ಪಡುವ ಹಿಮಾ, 400 ಮೀಟರ್ ಓಟದಲ್ಲಿ ದಾಖಲೆ ಸೃಷ್ಟಿಸಿದ್ದಾರೆ. ಐಎಎಎಫ್ ವಿಶ್ವ ಯು 20 ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
7 / 11
ಮನು ಭಾಕರ್, ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಶೂಟರ್ ಮನು ಭಾಕರ್ ಟೋಕಿಯೊ ಒಲಂಪಿಕ್ಸ್ನ ಶೂಟಿಂಗ್ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. ಮನು ಭಾಕರ್ 2018 ರ ವಿಶ್ವಕಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
8 / 11
ಸಂಜಿತಾ ಚಾನು, ಮಣಿಪುರದ ಈ ವೇಟ್‌ಲಿಫ್ಟರ್ ಎರಡು ಬಾರಿ ಕಾಮನ್‌ವೆಲ್ತ್ ಚಾಂಪಿಯನ್ ಆಗಿದ್ದಾರೆ. 2014 ರ ಗ್ಲ್ಯಾಸ್ಗೋ ಕಾಮನ್ವೆಲ್ತ್ ಮತ್ತು 2018 ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ನಲ್ಲಿ ಭಾರತಕ್ಕಾಗಿ ಚಿನ್ನ ಗೆದಿದ್ದಾರೆ. ಗ್ಲ್ಯಾಸ್ಗೋದಲ್ಲಿ ಚಾನು 48 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರೆ, ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ನಲ್ಲಿ 53 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡರು.
9 / 11
ದೀಪ ಕರ್ಮಕರ್, ಜಿಮ್ನಾಸ್ಟಿಕ್ಸ್‌ನಲ್ಲಿ ಭಾರತದ ವೈಭವವನ್ನು ವಿಜೃಂಭಣೆಗೊಳಿಸಿದ ಆಟಗಾರ್ತಿ ಇವರು. ಅವರು 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಜಿಮ್ನಾಸ್ಟಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಇಷ್ಟು ದೊಡ್ಡ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಿಯೊ ಒಲಿಂಪಿಕ್ಸ್‌ನಲ್ಲಿ ದೀಪಾ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಪದಕವನ್ನು ಕಳೆದುಕೊಂಡಿದ್ದರು.
10 / 11
ಸ್ವಪ್ನಾ ಬರ್ಮನ್, ಕೆಲವೇ ಜನರು ಈ ಹೆಸರನ್ನು ಕೇಳಿರುತ್ತಾರೆ. ಆದರೆ, ಭಾರತಕ್ಕೆ ಸ್ವಪ್ನಾ ಅವರ ಕೊಡುಗೆ ಕೂಡ ಅದ್ಭುತವಾಗಿದೆ. ಹೆಪ್ಟಾಥ್ಲಾನ್‌ನಂತಹ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಸ್ವಪ್ನಾ ಬರ್ಮನ್ ದೇಶಕ್ಕಾಗಿ ಚಿನ್ನ ಗೆದಿದ್ದಾರೆ. 2018 ರ ಏಷ್ಯಾಡ್ ಮತ್ತು 2017 ರಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಈ ಅದ್ಭುತ ಸಾಧನೆ ಮಾಡಿದ್ದಾರೆ.
11 / 11
ವಿನೇಶ್ ಫೋಗಟ್ ಕುಸ್ತಿಪಟು. ತನ್ನ ಅದ್ಭುತ ಆಟದಿಂದಾಗಿ ಪ್ರಪಂಚದಾದ್ಯಂತ ಭಾರತದ ಗೌರವವನ್ನು ಹೆಚ್ಚಿಸಿದ ಮಹಿಳೆಯೆಂದರೆ ಅದು ವಿನೇಶ್ ಫೋಗಟ್. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೂ ಒಂದು ದಿನ ಮೊದಲು ವಿನೇಶ್ 53 ಕೆಜಿ ಮಹಿಳಾ ವಿಭಾಗದಲ್ಲಿ ವಿಶ್ವ ನಂಬರ್ ಒನ್ ಕುಸ್ತಿಪಟು ಎನಿಸಿಕೊಂಡಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ವಿನೇಶ್, ಪ್ರಸ್ತುತ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಏಕೈಕ ಮಹಿಳಾ ಕುಸ್ತಿಪಟು.
Published On - 1:39 pm, Mon, 8 March 21