International Yoga Day 2022 Photos: ಹಂಪಿಯ ಬಸವಣ್ಣ ಮಂಟಪದ ಎದುರು ನಡೆದ ಯೋಗಾಭ್ಯಾಸದ ಅದ್ಭುತ ಕ್ಷಣಗಳು
TV9 Web | Updated By: ಆಯೇಷಾ ಬಾನು
Updated on:
Jun 21, 2022 | 3:10 PM
ಹಂಪಿ(ವಿಜಯನಗರ): ಹಂಪಿಯ ಇತಿಹಾಸದಲ್ಲೇ ಇದೇ ಮೊದಲೆಂಬಂತೆ ವಿಜಯನಗರದ ಈ ಪುರಾತನ ರಾಜಧಾನಿ ವಿಶಿಷ್ಟ, ಅದ್ವಿತೀಯ, ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಾಕ್ಷಿಯಾಯಿತು. ಹಂಪಿಯ ಬಸವಣ್ಣ ಮಂಟಪದ ಎದುರು ನಡೆದ ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಡಿಕೆಗೆ ಸಿರಿಧಾನ್ಯ ಸುರಿದು ಚಾಲನೆ ನೀಡಿದರು.
1 / 7
ಹಂಪಿಯ ಇತಿಹಾಸದಲ್ಲೇ ಇದೇ ಮೊದಲೆಂಬಂತೆ ವಿಜಯನಗರದ ಈ ಪುರಾತನ ರಾಜಧಾನಿ ವಿಶಿಷ್ಟ, ಅದ್ವಿತೀಯ, ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಾಕ್ಷಿಯಾಯಿತು.
2 / 7
ಹಂಪಿಯ ಬಸವಣ್ಣ ಮಂಟಪದ ಎದುರು ನಡೆದ ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಡಿಕೆಗೆ ಸಿರಿಧಾನ್ಯ ಸುರಿದು ಚಾಲನೆ ನೀಡಿದರು.
3 / 7
ಯೋಗ ದಿನಾಚರಣೆ ಪ್ರಯುಕ್ತ ಯೋಗಗುರು ಶ್ರೀ ವಚನಾನಾಂದ ಸ್ವಾಮೀಜಿ ನೇತೃದಲ್ಲಿ ಕಾರ್ಯಕ್ರಮ ನೆರವೇರಿತು.
4 / 7
ದೇಹ ಮತ್ತು ಮನಸ್ಥಿತಿಯನ್ನ ಸಮಚಿತ್ತದಲ್ಲಿ ಇಟ್ಟುಕೊಳ್ಳಲು ಯೋಗ ಪ್ರಾಣಾಯಾಮ ಸಹಕಾರಿಯಾಗಿದೆ. ಅಂತರಾಷ್ಟ್ರೀಯ ಯೋಗ ದಿನಾಚರಣೆ ಮಾಡಲು ಅನೇಕ ರಾಷ್ಟ್ರಗಳು ಒಪ್ಪಿಕೊಂಡಿವೆ. ಕತ್ತಲೆಯಿಂದ ಬೆಳಕಿನೆಡೆಗೆ ಯೋಗ ಕರೆದೊಯ್ಯುತ್ತದೆ. ಯೋಗ ಕೇವಲ ಒಂದು ದಿನದ ಪ್ರಕ್ರಿಯೆ ಆಗಬಾರದು, ಯೋಗ ಜೀವನದ ಒಂದು ಭಾಗ ಆಗಬೇಕು. -ಪ್ರಲ್ಹಾದ ಜೋಶಿ
5 / 7
ಭಾರತದ ಒಟ್ಟು ಪದ್ದತಿಗಳಲ್ಲಿ ನಮ್ಮ ಭಾಷೆ ಸಂಸ್ಕೃತಿ ಈಡೀ ವಿಶ್ವಕ್ಕೆ ಮಾದರಿಯಾಗಿದೆ. ಸಾವಿರ ಸಾವಿರ ವರ್ಷಗಳ ಅತಿಕ್ರಮಣ ನಂತರವೂ ಭಾರತದ ಸಂಸ್ಕೃತಿ ಇಂದಿಗೂ ಉಳಿದಿದೆ. -ಪ್ರಲ್ಹಾದ ಜೋಶಿ
6 / 7
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕಳೆದೊಂದು ತಿಂಗಳಿಂದ ಹಂಪಿಯಲ್ಲಿ ಯೋಗಾಭ್ಯಾಸ ನಡೆದಿದ್ದು ಗರಿಷ್ಠ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.
7 / 7
ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.