Yoga Day: ಮೂರು ಲಕ್ಷಕ್ಕೂ ಹೆಚ್ಚು ಜನರೊಂದಿಗೆ ಯೋಗ ಮಾಡಿದ ಪ್ರಧಾನಿ ಮೋದಿ: ಇಲ್ಲಿವೆ ಫೋಟೋಸ್​

Updated on: Jun 21, 2025 | 10:20 AM

ವಿಶಾಖಪಟ್ಟಣದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅದ್ಧೂರಿಯಾಗಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ 3 ಲಕ್ಷಕ್ಕೂ ಹೆಚ್ಚು ಜನರೊಂದಿಗೆ ಯೋಗ ಮಾಡಿದರು. ಈ ವೇಳೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್​ ಕಲ್ಯಾಣ್​​ ಸೇರಿ ಹಲವು ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಲ್ಲಿವೆ ಫೋಟೋಸ್​.

1 / 8
ಇಂದು ದೇಶಾದ್ಯಂತ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಇತ್ತ ವಿಶಾಖಪಟ್ಟಣಂನಲ್ಲಿ ಅದ್ಧೂರಿಯಾಗಿ ಯೋಗ ದಿನಾಚರಣೆಗೆ ವೇದಿಕೆ ಸಜ್ಜು ಮಾಡಲಾಗಿತ್ತು. ಬೆಳಗ್ಗೆ 6.30ಕ್ಕೆ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನರೊಂದಿಗೆ ಯೋಗ ಮಾಡಿದ್ದಾರೆ.

ಇಂದು ದೇಶಾದ್ಯಂತ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಇತ್ತ ವಿಶಾಖಪಟ್ಟಣಂನಲ್ಲಿ ಅದ್ಧೂರಿಯಾಗಿ ಯೋಗ ದಿನಾಚರಣೆಗೆ ವೇದಿಕೆ ಸಜ್ಜು ಮಾಡಲಾಗಿತ್ತು. ಬೆಳಗ್ಗೆ 6.30ಕ್ಕೆ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನರೊಂದಿಗೆ ಯೋಗ ಮಾಡಿದ್ದಾರೆ.

2 / 8

ವಿಶಾಖಪಟ್ಟಣಂನ ಆರ್‌.ಕೆ.ಬೀಚ್‌ನಿಂದ ಭೋಗಪುರಂವರೆಗೆ 26 ಕಿ.ಮೀ ಉದ್ದದ ಕಾರಿಡಾರ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವ್ಯವಸ್ಥೆ ಮಾಡಲಾಗಿತ್ತು.

3 / 8

ಯೋಗ ಕೇವಲ ವ್ಯಾಯಾಮವಲ್ಲ, ಅದು ಒಂದು ಜೀವನದ ಭಾಗ. ಪ್ರತಿಯೊಬ್ಬರು ಯೋಗ ಮಾಡುವಂತೆ ಪ್ರಧಾನಿ ಮೋದಿ ಹೇಳಿದ್ದಾರೆ.

4 / 8

ಯೋಗ ಎಂದರೆ ಎಲ್ಲರೂ ಒಂದಾಗುವುದು. ಇಡೀ ವಿಶ್ವವೇ ಯೋಗ ದಿನ ಆಚರಿಸುತ್ತಿರುವುದು ಸಾಧಾರಣ ವಿಷಯವಲ್ಲ. ಯೋಗ ಇಂದು ವಿಶ್ವವನ್ನೇ ಒಂದು ಮಾಡಿದೆ. ವಿಶ್ವದ ಕೋಟ್ಯಂತರ ಜನರ ಜೀವನ ಶೈಲಿಯನ್ನು ಯೋಗ ಬದಲಿಸಿದೆ ಎಂದಿದ್ದಾರೆ ಪ್ರಧಾನಿ ಮೋದಿ.

5 / 8

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕೂಡ ಯೋಗ ಮಾಡುವ ಮೂಲಕ ಯೋಗ ದಿನವನ್ನು ಆಚರಿಸಿದ್ದಾರೆ. ಇದೇ ವೇಳೆ ಮಾತನಾಡಿರುವ ಅವರು ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲಬೇಕು ಎಂದು ಹೇಳಿದ್ದಾರೆ.

6 / 8

ಡಿಸಿಎಂ ಪವನ್ ಕಲ್ಯಾಣ್ ಕೂಡ ಪ್ರಧಾನಿ ಮೋದಿ ಅವರೊಂದಿಗೆ ಯೋಗ ಮಾಡಿದರು. ಈ ವೇಳೆ ಮಾತನಾಡಿದ ಅವರು ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದ್ದು ಪ್ರಧಾನಿ ಮೋದಿ ಎಂದು ಹೇಳಿದ್ದಾರೆ.

7 / 8

ಕಾರ್ಯಕ್ರಮದಲ್ಲಿ ಸುಮಾರು 25,000 ಬುಡಕಟ್ಟು ವಿದ್ಯಾರ್ಥಿಗಳಿಂದ 108 ನಿಮಿಷಗಳ ಕಾಲ ಸೂರ್ಯ ನಮಸ್ಕಾರ ಪ್ರದರ್ಶನ ಮಾಡಲಾಗಿದೆ.

8 / 8

ವಿಶಾಖಪಟ್ಟಣಂನಲ್ಲಿ ಯೋಗದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿಗೆ ಸಿಎಂ ಚಂದ್ರಬಾಬು ನಾಯ್ಡು ಮತ್ತು ಡಿಸಿಎಂ ಪವನ್​ ಕಲ್ಯಾಣ್​​ ಸನ್ಮಾನಿಸಿದರು.

Published On - 9:16 am, Sat, 21 June 25

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us